ಚೀನಾದಲ್ಲಿ ಮಂಕಿ ಬಿ ವೈರಸ್‌ಗೆ ಮೊದಲ ಬಲಿ

ನವದೆಹಲಿ : ಚೀನಾದಲ್ಲಿ ಮತ್ತೊಂದು ವೈರಸ್‌ ಪತ್ತೆಯಾಗಿದ್ದು, ಮಂಕಿ ಬಿ ವೈರಸ್‌ ಎಂದು ಈ ವೈರಸ್ ಗೆ ವ್ಯಕ್ತಿಯೋರ್ವ ಬಲಿಯಾಗಿದ್ದಾರೆ. ಕೊರೊನಾ ವೈರಸ್‌ ಸೋಂಕಿನ ಹುಟ್ಟಿಗೆ ಕಾರಣವಾಗಿರುವ ಚೀನಾದಲ್ಲಿ ಕೊರೊನಾ ಅಬ್ಬರ ನಿಂತಿಲ್ಲ. ಈ ನಡುವಲ್ಲೇ

ಚೀನಾದ ಬೀಜಿಂಗ್‌ ಮೂಲದ 53 ವರ್ಷದ ವೇಟ್ಸ್‌ ಎಂಬಾತನಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ವಾಕರಿಕೆ, ವಾಂತಿಯ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಆತನನ್ನು ಹಲವು ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿತ್ತು. ಆದ್ರೆ ಯಾವುದೇ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೇ ಮೇ 27 ರಂದು ಸಾವನ್ನಪ್ಪಿದ್ದ. ಆದರೆ ವ್ಯಕ್ತಿ ಯಾವ ರೋಗದಿಂದ ಬಳಲುತ್ತಿದ್ದ ಅನ್ನೋದು ವೈದ್ಯರಿಗೆ ಪತ್ತೆ ಯಾಗಿರ ಲಿಲ್ಲ. ವ್ಯಕ್ತಿಯ ರಕ್ತ, ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

ಈ ನಡುವಲ್ಲೇ ಸತ್ತ ಎರಡು ಮಂಗಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಸುಮಾರು ಒಂದು ತಿಂಗಳ ನಂತರ, ಚೀನೀ ಕೇಂದ್ರ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಸಂಸ್ಥೆ ವ್ಯಕ್ತಿಯ ಸಾವಿಗೆ ಮಂಕಿ ಬಿ ವೈರಸ್‌ ಕಾರಣ ಅನ್ನೋ ಮಾಹಿತಿಯನ್ನು ಬಹಿರಂಗ ಪಡಿಸಿದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಚೀನಾದಲ್ಲಿ ಈ ಮೊದಲು ಯಾವುದೇ ಮಾರಣಾಂತಿಕ ಅಥವಾ ಪ್ರಾಯೋಗಿಕವಾಗಿ ಸ್ಪಷ್ಟವಾದ ಬಿವಿ ಸೋಂಕುಗಳು ಇರಲಿಲ್ಲ. ಇದೀಗ ವೆಟ್ಸ್ ಪ್ರಕರಣವು ಚೀನಾದಲ್ಲಿ ಗುರುತಿಸಲ್ಪಟ್ಟ ಬಿವಿ ಯೊಂದಿಗೆ ಮೊದಲ ಮಾನವ ಸೋಂಕಿನ ಪ್ರಕರಣವಾಗಿದೆ.

ಸಂಶೋಧಕರು ಪಶುವೈದ್ಯರ ಸೆರೆಬ್ರೊಸ್ಪೈನಲ್ ದ್ರವವನ್ನು ಸಂಗ್ರಹಿಸಿ ಮಂಕಿ ಬಿ ವೈರಸ್‌ ಇದೆಯೇ ಅನ್ನೋ ಪರೀಕ್ಷೆಯನ್ನು ನಡೆಸಿದ್ದರು. 1932 ರಲ್ಲಿ ಪ್ರತ್ಯೇಕಿಸಲ್ಪಟ್ಟ ಈ ವೈರಸ್ ಮಕಾಕಾ ಕುಲದ ಮಕಾಕ್‌ಗಳಲ್ಲಿ ಆಲ್ಫಾಹೆರ್ಪಿಸ್ವೈರಸ್ ಎಂಜೂಟಿಕ್ ಆಗಿದೆ ಎಂದು ಪ್ರಕಟಣೆ ವರದಿ ಮಾಡಿದೆ. ನೇರ ಸಂಪರ್ಕ ಮತ್ತು ದೈಹಿಕ ಸ್ರವಿಸುವಿಕೆಯ ಮೂಲಕವೂ ಈ ವೈರಸ್‌ ಹರಡುವ ಸಾಧ್ಯತೆಯಿದೆ. ಇನ್ನು ಮಂಕಿ ಬಿ ವೈರಸ್‌ ಶೇಕಡಾ 70 ರಿಂದ 80 ರಷ್ಟು ಮಾರಣಾಂತಿಕವಾಗಿದೆ ಎಂದು ತಿಳಿದು ಬಂದಿದೆ.

ಕೊರೊನಾ ವೈರಸ್‌ ಸೋಂಕನ್ನು ವಿಶ್ವಕ್ಕೆ ವ್ಯಾಪಿಸಿದ್ದ ಚೀನಾದಲ್ಲಿ ಇದೀಗ ಮಂಕಿ ಬಿ ವೈರಸ್‌ ಸೋಂಕು ಪತ್ತೆಯಾಗಿರೋದು ಆತಂಕವನ್ನು ಮೂಡಿಸಿದೆ. ಆದರೆ ಮಂಕಿ ಬಿ ವೈರಸ್‌ ಸೋಂಕಿನಿಂದ ಮೃತಪಟ್ಟ ವೇಟ್‌ ಕುಟುಂಬಸ್ಥರಲ್ಲಿ ಯಾರಿಗೂ ಕೂಡ ಈ ಸೋಂಕು ಹರಡಿಲ್ಲ ಅನ್ನೋದನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಅಲ್ಲದೇ ಸೋಂಕಿನ ಹರಡುವಿಕೆಯ ನಿಯಂತ್ರಣದ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳಲಾಗುತ್ತಿದೆ.

You May Also Like

error: Content is protected !!