ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿ ಖಂಡಿಸಿ ಜೆಡಿಎಸ್‌ನಿಂದ ಬೃಹತ್ ಪ್ರತಿಭಟನೆ

ತುರುವೇಕೆರೆ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಡಿಸೇಲ್, ಪೆಟ್ರೋಲ್, ಅಡಿಗೆ ಅನಿಲ, ವಿದ್ಯುತ್, ಕೃಷಿ ಪರಿಕರ ಹಾಗೂ ರಸಗೊಬ್ಬರಗಳ ಬೆಲೆಯನ್ನು ಮೇಲಿಂದ ಮೇಲೆ ಹೆಚ್ಚಿಸಿ ಬಡ, ಸಾಮಾನ್ಯ ರೈತಾಪಿ ವರ್ಗಗಳ ಕುಟುಂಬಗಳ ನಿರ್ವಹಣೆ ಬೀದಿಗೆ ಬಿದ್ದಿದೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ಜನವಿರೋಧಿ ನೀತಿಯನ್ನು ತೀಕ್ಷ್ಣಮಾತುಗಳಿಂದ ತರಾಟೆಗೆ ತೆಗೆದುಕೊಂಡರು,

ಸೋಮವಾರ ತಾಲ್ಲೂಕು ಜೆಡಿಎಸ್ ವತಿಯಿಂದ ಶಾಸಕ ಎಂ.ಟಿ.ಕೃಷ್ಣಪ್ಪನವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ರ್‍ಯಾಲಿ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾವಿರಾರು ಜೆಡಿಎಸ್ ಕಾರ್ಯಕರ್ತ ಮುಖಂಡರುಗಳು ಸರ್ಕಾರದ ವಿರೋಧಿ ನೀತಿ, ದರ ಏರಿಕೆ ಬಗ್ಗೆ ಘೋಷಣೆ ಕೂಗುತ್ತಾ ರ್‍ಯಾಲಿ ನಡೆಸಿದರು.

ನಂತರ ತಾಲ್ಲೂಕು ಕಛೇರಿಗೆ ಮುತ್ತಿಗೆ ಹಾಕಿದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೃಷ್ಣಪ್ಪನವರು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಡೀಸೆಲ್, ಪೆಟ್ರೋಲ್, ಆಮದು ದರ ಕುಸಿತಕಂಡಿದ್ದರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭಯೋತ್ಪಾದನೆ ರೀತಿಯಲ್ಲಿ ಮೇಲಿಂದ ಮೇಲೆ ತೆರಿಗೆಗಳು ಒಂದು ಲೀಟರ್ ಇಂಧನ ನೂರರ ಗಡಿದಾಟಿದೆ. ಇದರೊಂದಿಗೆ ರಸಗೊಬ್ಬರ 6೦೦ ಇದ್ದದ್ದು 12೦೦ ಕ್ಕೇ ಏರಿದೆ, ಪಿವಿಪಿ ಪೈಪ್ 22೦ ಇದ್ದದ್ದು 44೦ ಕ್ಕೆ ಏರಿದೆ. ಇದರೆಲ್ಲದರ ನಡುವೆ ದಿನನಿತ್ಯದ ಸಾಮಗ್ರಿ ದರವೂ ಹೆಚ್ಚಳವಾಗಿದ್ದು ಜನಸಾಮಾನ್ಯರು ಬೆಲೆ ತರಲಾರದೆ ತತ್ತರಗೊಂಡು ಇಡಿಶಾಪ ಹಾಕುತ್ತಿದ್ದಾರೆ.

ಕಬ್ ಆಯೇಗ ಅಚ್ಛೇದಿನ್ ಎಂದು ಜನತೆ ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುವಂತಾಗಿದೆ. ಮೇಲಿಂದ – ಮೇಲೆ ಕೃಷಿ. ಭೂಮಿ, ಎಪಿಎಂಸಿ, ಪೌರತ್ವ ಕಾಯ್ದೆಗಳನ್ನು ರೂಪಿಸುತ್ತಾ ನಮ್ಮ ಪ್ರಜಾಪ್ರಭುತ್ವ ನಮ್ಮನ್ನೇ ಅಣಕಿಸುವಂತಾಗಿದೆ. ಇಂತಹ ಸರ್ಕಾರಗಳ ಜನವಿರೋಧಿ ನೀತಿಗಳನ್ನು ಖಂಡಿಸಿದರೆ ಅವರ ಮೇಲೆ ರಾಷ್ಟ್ರವಿರೋಧಿ ಪ್ರಕರಣಗಳನ್ನು ದಾಖಲಿಸುತ್ತಾ ಅಭಿವ್ಯಕ್ತ ಸ್ವಾತಂತ್ರ್ಯಕ್ಕೂ ದಕ್ಕೆ ಉಂಟಾಗಿದೆ.

ಸ್ಥಳೀಯವಾಗಿ ಎಲ್ಲಾ ಸರ್ಕಾರಿ ಕಛೇರಿಗಳು ಭ್ರಷ್ಟಾಚಾರದಕೂಪಗಳಾಗಿದ್ದು ಎಲ್ಲಾ ಕೆಲಸಗಳಿಗೂ ಮಧ್ಯವರ್ತಿಗಳ ಮೂಲಕ ಹಣ ತೆತ್ತು ಅವರ ಸರ್ಕಾರಿ ಹಕ್ಕಿನ ಕೆಲಸಗಳನ್ನು ಮಾಡಿಸಿಕೊಳ್ಳುವಂತಾಗಿದೆ. ಇನ್ನು ಕಳೆದ ಎರಡೂವರೆ ವರ್ಷಗಳಿಂದ ತಾಲ್ಲೂಕಿನ ಯಾವ ಬಡವರಿಗೂ ಹೊಸದಾಗಿ ಆಶ್ರಯ ಯೋಜನೆಯಡಿ ಮನೆಗಳನ್ನು ನೀಡಲಾಗಿಲ್ಲ. ನರೇಗಾ ಕೂಲಿ ಕೆಲಸಗಳಿಗೂ ಶಾಸಕರ ಶಿಫಾರಸ್ಸಿನ ಪತ್ರ ಬೇಕಿದ್ದು, ಇದು ಅವರ ಬೆಂಬಲಿಗರಿಗೆ ದಕ್ಕುವಂತಾಗಿದೆ. ಶಾಸಕರು ಈ ಎಲ್ಲಾ ಸಂಗತಿಗಳಲ್ಲಿ ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಖಂಡಿಸಿದರು.

ಮುಷ್ಕರ ನಿರತರನ್ನು ಉದ್ದೇಶಿಸಿ ರಾಜ್ಯ ಯುವಘಟಕದ ದೊಡ್ಡಾಘಟ್ಟ ಚಂದ್ರೇಶ್, ಹಾಗೂ ವಕೀಲರಾದ ಪಿ.ಹೆಚ್.ಧನಪಾಲ್ ಸೇರಿದಂತೆ ಸರ್ಕಾರದ ನಿಲುಗಳನ್ನು ಟೀಕಿಸಿದರು.

ತಾಲ್ಲೂಕು ಅಧ್ಯಕ್ಷ ಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್‌ಮೂರ್ತಿ, ಲೀಲಾವತಿ ಗಿಡ್ಡಯ್ಯ, ಬಾಣಸಂದ್ರ ರಮೇಶ್, ಮಲ್ಲೂರು ತಿಮ್ಮೇಶ್, ಜಫ್ರುಲ್ಲಾಖಾನ್, ಸಿದ್ದಗಂಗಯ್ಯ, ದಂ.ಕುಮಾರ್, ಗಂಗತಿಮ್ಮಯ್ಯ, ಹಿಂಡುಮಾರನಹಳ್ಳಿ ನಾಗರಾಜು, ಶರತ್, ಮಂಗಿಕುಪ್ಪೆ ಬಸವರಾಜು, ಸೇರಿದಂತೆ ಹಲವು ನಾಯಕರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

You May Also Like

error: Content is protected !!