ಭರಪೂರ ಅನುದಾನ ಬಿಡುಗಡೆ ಮಾಡಿದ ಸಿಎಂ: ಯಾವ ಯಾವ ಜಿಲ್ಲೆಗೆ ಎಷ್ಟು ಅನುದಾನ ನೋಡಿ

ಬೆಂಗಳೂರು : ನಾಯಕತ್ವ ಬದಲಾವಣೆಯ ವದಂತಿ ನಡುವೆಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೆಲವು ಶಾಸಕರ ಕ್ಷೇತ್ರಗಳಿಗೆ ಭರಪೂರ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. 30 ಜಿಲ್ಲೆಗಳ 134 ವಿಧಾನಸಭಾ ಕ್ಷೇತ್ರಗಳಿಗೆ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ದಿ ಯೋಜನೆಯಡಿ 1277 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಪ್ರತನಿಧಿಸುವ ಚನ್ನಪಟ್ಟಣ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಿಲ್ಲ. ಜೊತೆಗೆ ಪ್ರಮುಖವಾಗಿ ತಮ್ಮ ನಾಯಕತ್ವದ ವಿರುದ್ಧ ಆಗಾಗ್ಗೆ ಗುಟುರು ಹಾಕುತ್ತಿರುವ ವಿರೋಧಿಗಳ ಕ್ಷೇತ್ರಕ್ಕೆ ಅನುದಾನವನ್ನು ಬಿಡುಗಡೆ ಮಾಡಿಲ್ಲ.


ಸಚಿವ ಶ್ರೀರಾಮುಲು ಕ್ಷೇತ್ರ ಮೊಳಕಾಲ್ಮೂರು, ಪ್ರಕರಣವೊಂದಕ್ಕೆ ಸಿಲುಕಿ ಸಚಿವ ಸ್ಥಾನ ಕಳೆದುಕೊಂಡ ರಮೇಶ್ ಜಾರಕಿಹೊಳಿ ಅವರ ಗೋಕಾಕ್ ಕ್ಷೇತ್ರಕ್ಕೂ ಅನುದಾನ ಸಿಕ್ಕಿಲ್ಲ. ಮೂಲಗಳ ಪ್ರಕಾರ ಕೊರೊನಾ ಕಾರಣದಿಂದ ತಡೆಹಿಡಿಯಲಾಗಿದ್ದ ಅನುದಾನವನ್ನು ಸಿಎಂ ಬಿಡುಗಡೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ತಮ್ಮ ನಾಯಕತ್ವ ಬದಲಾಗುವ ಸಮಯ ಹತ್ತಿರ ಬಂದಿರುವ ಕಾರಣ ಶಾಸಕರನ್ನು ಮನವೊಲಿಸುವ ಕಾರಣಕ್ಕಾಗಿಯೇ ಅನುದಾನ ಬಿಡುಗಡೆ ಮಾಡುವ ಮೂಲಕ ಶಾಸಕರ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಸಿಎಂ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಅನುದಾನದ ವಿವರ:
ಬಾಗಲಕೋಟೆ ಜಿಲ್ಲೆ: ತೆರೆದಾಳ 14 ಕೋಟಿ, ಜಮಖಂಡಿ 5, ಬಾಗಲಕೋಟೆ 10 ಕೋಟಿ, ಹುನಗುಂದ 10 ಕೋಟಿ.
ಬೆಳಗಾವಿ ಜಿಲ್ಲೆ : ಸವದತ್ತಿ ಎಲ್ಲಮ್ಮ 22 ಕೋಟಿ, ರಾಯಭಾಗ 17ಕೋಟಿ, ಕಿತ್ತೂರು 21 ಕೋಟಿ, ಕುಡುಚಿ 16 ಕೋಟಿ, ಯಮಕನಮರಡಿ 5 ಕೋಟಿ, ಬೈಲಹೊಂಗಲ 5 ಕೋಟಿ, ಖಾನಾಪುರ 5 ಕೋಟಿ, ಅಥಣಿ 10 ಕೋಟಿ, ಅರಭಾವಿ 10 ಕೋಟಿ, ರಾಮದುರ್ಗ 10 ಕೋಟಿ.
ಬೆಂಗಳೂರು ಗ್ರಾಮಾಂತರ ಜಿಲ್ಲೆ: ನೆಲಮಂಗಲ 5 ಕೋಟಿ, ದೇವನಹಳ್ಳಿ 5 ಕೋಟಿ.
ಬೆಂಗಳೂರು ನಗರ: ಆನೇಕಲ್ 5 ಕೋಟಿ, ಯಲಹಂಕ 10 ಕೋಟಿ, ಬೆಂಗಳೂರು ದಕ್ಷಿಣ 10 ಕೋಟಿ , ಯಶವಂತಪುರ 10 ಕೋಟಿ.
ವಿಜಯಪುರ ಜಿಲ್ಲೆ: ಸಿಂಧಗಿ 5 ಕೋಟಿ, ನಾಗಾಠಾಣ 5 ಕೋಟಿ
ಮುದ್ದೇಬಿಹಾಳ 10 ಕೋಟಿ, ದೇವರಹಿಪ್ಪರಗಿ 10 ಕೋಟಿ.
ಬಳ್ಳಾರಿ ಜಿಲ್ಲೆ : ಹರಪ್ಪನಹಳ್ಳಿ 12 ಕೋಟಿ, ಕೂಡ್ಲಗಿ 13 ಕೋಟಿ, ಸಿರಗುಪ್ಪ 10 ಕೋಟಿ, ಬಳ್ಳಾರಿ 5 ಕೋಟಿ, ಹಗರಿಬೊಮ್ಮನಹಳ್ಳಿ 5 ಕೋಟಿ, ಸಂಡೂರು 5 ಕೋಟಿ, ಕಂಪ್ಲಿ 5 ಕೋಟಿ, ಹೂವಿನ ಹಡಗಲಿ 5 ಕೋಟಿ,
ಬೀದರ್ ಜಿಲ್ಲೆ: ಬೀದರ್ ದಕ್ಷಿಣ 5 ಕೋಟಿ, ಬೀದರ್ 5 ಕೋಟಿ
ಹುಮ್ನಾಬಾದ್ 5 ಕೋಟಿ, ಬಾಲ್ಕಿ 5 ಕೋಟಿ
ಶಿವಮೊಗ್ಗ ಜಿಲ್ಲೆ: ಸಾಗರ 19 ಕೋಟಿ, ತೀರ್ಥಹಳ್ಳಿ 20 ಕೋಟಿ , ಭದ್ರಾವತಿ 5 ಕೋಟಿ, ಶಿವಮೊಗ್ಗ ಗ್ರಾಮಾಂತರ 10 ಕೋಟಿ,ಸೊರಬ 10 ಕೋಟಿ
ಮಂಡ್ಯ ಜಿಲ್ಲೆ : ಮಳವಳ್ಳಿ 5 ಕೋಟಿ , ಶ್ರೀರಂಗಪಟ್ಟಣ 5 ಕೋಟಿ, ನಾಗಮಂಗಲ 5 ಕೋಟಿ, ಮದ್ದೂರು 5 ಕೋಟಿ, ಮಂಡ್ಯ 5 ಕೋಟಿ.
ಮೈಸೂರು ಜಿಲ್ಲೆ : ನಂಜನಗೂಡು 20 ಕೋಟಿ, ಟಿ.ನರಸೀಪುರ 5 ಕೋಟಿ ಪಿರಿಯಾಪಟ್ಟಣ 5 ಕೋಟಿ , ವರುಣಾ 5 ಕೋಟಿ
ಯಾದಗಿರಿ ಜಿಲ್ಲೆ: ಶಹಪುರ 5 ಕೋಟಿ, ಸುರಪುರ 10 ಕೋಟಿ.
ಚಿಕ್ಕಬಳ್ಳಾಪುರ ಜಿಲ್ಲೆ: ಚಿಂತಾಮಣಿ 5 ಕೋಟಿ , ಶಿಡ್ಲಘಟ್ಟ 5 ಕೋಟಿ.
ಚಿಕ್ಕಮಗಳೂರು ಜಿಲ್ಲೆ: ಮೂಡಗೆರೆ 23 ಕೋಟಿ, ಶೃಂಗೇರಿ 5 ಕೋಟಿ, ಚಿಕ್ಕಮಗಳೂರು 10 ಕೋಟಿ , ತರಿಕೆರೆ 10 ಕೋಟಿ, ಕಡೂರು 10 ಕೋಟಿ.
ಚಿತ್ರದುರ್ಗ ಜಿಲ್ಲೆ: ಚಿತ್ರದುರ್ಗ 15 ಕೋಟಿ, ಹಿರಿಯೂರು 20 ಕೋಟಿ , ಹೊಳಲ್ಕೆರೆ 10 ಕೋಟಿ
ರಾಮನಗರ ಜಿಲ್ಲೆ: ಮಾಗಡಿ 5 ಕೋಟಿ
ರಾಯಚೂರು ಜಿಲ್ಲೆ : ಮಾನ್ವಿ 5 ಕೋಟಿ, ರಾಯಚೂರು ಗ್ರಾಮಾಂತರ 5 ಕೋಟಿ, ರಾಯಚೂರು 10 ಕೋಟಿ , ದೇವದುರ್ಗ 10 ಕೋಟಿ
ಉಡುಪಿ ಜಿಲ್ಲೆ: ಕಾಪು 15 ಕೋಟಿ, ಬೈಂದೂರು 10 ಕೋಟಿ , ಕುಂದಾಪುರ 10 ಕೋಟಿ , ಕಾರ್ಕಳ 10 ಕೋಟಿ.
ಉತ್ತರ ಕನ್ನಡ ಜಿಲ್ಲೆ: ಕುಮುಟ 19 ಕೋಟಿ,ಭಟ್ಕಳ 20 ಕೋಟಿ ಕಾರವಾರ 16 ಕೋಟಿ ,ಹಳಿಯಾಲ 5 ಕೋಟಿ , ಶಿರಸಿ 10 ಕೋಟಿ
ಹಾಸನ ಜಿಲ್ಲೆ: ಅರಕಲಗೂಡು 5 ಕೋಟಿ , ಶ್ರವಣಬೆಳಗೊಳ 5 ಕೋಟಿ , ಹಾಸನ 10 ಕೋಟಿ, ಅರಸೀಕೆರೆ 10 ಕೋಟಿ
ಹಾವೇರಿ ಜಿಲ್ಲೆ: ರಾಣೆಬೆನ್ನೂರು 17 ಕೋಟಿ , ಹಾನಗಲ್ 10 ಕೋಟಿ, ಬ್ಯಾಡಗಿ 10 ಕೋಟಿ
ಕಲಬುರಗಿ ಜಿಲ್ಲೆ: ಸೇಡಂ 10 ಕೋಟಿ, ಅಳಂದ 10 ಕೋಟಿ,
ಕಲಬುರಗಿ ಗ್ರಾಮಾಂತರ 10 ಕೋಟಿ, ಚಿಂಚೋಳಿ 12 ಕೋಟಿ
ಕಲಬುರಗಿ ಉತ್ತರ 5 ಕೋಟಿ, ಚಿತ್ತಾಪುರ 5 ಕೋಟಿ
ಅಫ್ಜಲ್‍ಪುರ 5 ಕೋಟಿ, ಜೇವರ್ಗಿ 5 ಕೋಟಿ
ಕೊಪ್ಪಳ ಜಿಲ್ಲೆ: ಕನಕಗಿರಿ 10 ಕೋಟಿ , ಗಂಗಾವತಿ 10 ಕೋಟಿ
ಯಲಬುರ್ಗಾ 10 ಕೋಟಿ,
ಕೋಲಾರ ಜಿಲ್ಲೆ: ಕೆಜಿಎಫ್ 5ಕೋಟಿ, ಮಾಲೂರು 5 ಕೋಟಿ
ಬಂಗಾರಪೇಟೆ 5 ಕೋಟಿ, ಮುಳಬಾಗಿಲು 10 ಕೋಡಿ
ಮಡಿಕೇರಿ ಜಿಲ್ಲೆ: ಮಡಿಕೇರಿ 10 ಕೋಟಿ, ವಿರಾಜಪೇಟೆ 10 ಕೋಟಿ, ಕೊಡಗು 5 ಕೋಟಿ .
ಗದಗ ಜಿಲ್ಲೆ: ಶಿರಹಟ್ಟಿ 10 ಕೋಟಿ, ರೋಣ 10 ಕೋಟಿ
ತುಮಕೂರು ಜಿಲ್ಲೆ: ತುರುವೇಕೆರೆ 21 ಕೋಟಿ, ತಿಪಟೂರು 10 ಕೋಟಿ, ಶಿರಾ 10 ಕೋಟಿ
ಚಾಮರಾಜನಗರ ಜಿಲ್ಲೆ: ಗುಂಡ್ಲುಪೇಟೆ 22 ಕೋಟಿ, ಕೊಳ್ಳೆಗಾಲ 5 ಕೋಟಿ, ಹನೂರು 5 ಕೋಟಿ, ಚಾಮರಾಜನಗರ 5 ಕೋಟಿ.
ದಾವಣಗೆರೆ ಜಿಲ್ಲೆ: ಹರಿಹರ 5 ಕೋಟಿ, ಜಗಳೂರು 10 ಕೋಟಿ, ದಾವಣಗೆರೆ

You May Also Like

error: Content is protected !!