ದಿನ ಭವಿಷ್ಯ, ಜುಲೈ 21 ಈ ರಾಶಿಯ ಪ್ರೇಮಿಗಳಿಗೆ ಶುಭ ದಿನ

ಮೇಷ
ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿನ ಸಾಧನೆಯನ್ನು ಕಂಡು ಮನೆಯವರೆಲ್ಲರಿಗೂ ಅತೀವ ಸಂತೋಷವಾಗಲಿದೆ. ಉನ್ನತ ವ್ಯಾಸಂಗದ ವಿಚಾರದಲ್ಲಿ ಚರ್ಚೆ, ಅನುಕೂಲಕರ ವಾತಾವರಣ. ಸಂಪನ್ಮೂಲ ಕೂಡಿಬರಲಿದೆ.

ವೃಷಭ
ವಿವಾಹ ಸಂಬಂಧಿ ವರಾನ್ವೇಷಣೆಗೆ ತೊಡಗುವುದಕ್ಕೆ ಸೂಕ್ತವಾದ ದಿನ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆಗೆ ಅವಕಾಶಗಳು ದೊರಕಲಿವೆ. ದೇವತಾನುಗ್ರಹದಿಂದ ಸರ್ವಕಾರ್ಯ ಸಿದ್ಧಿಯಾಗಲಿದೆ.

ಮಿಥುನ
ಕಚೇರಿಯಲ್ಲಿನ ನಿಮ್ಮ ಮೇಲಿನ ಭರವಸೆಗಳನ್ನು ದೃಢಪಡಿಸುವಿರಿ. ಬಂಧುಗಳ ಆಗಮನದಿಂದಾಗಿ ಮನೆಯಲ್ಲಿ ಸಂತಸ. ಉತ್ತಮ ಆರೋಗ್ಯದ ನಿಮಿತ್ತ ದೇವರ ಆರಾಧನೆ ಮಾಡಲಿದ್ದೀರಿ. ಕುಲದೇವರ ದರ್ಶನ ಭಾಗ್ಯ.

ಕಟಕ
ಉದ್ಯೋಗದ ಸ್ಥಳದಲ್ಲಿ ಅಧಿಕಾರಿಗಳಿಂದ ಹೆಚ್ಚಿನ ಬೆಂಬಲ ದೊರೆತು ಕಾರ್ಯ ಸುಗಮವಾಗಲಿದೆ. ಪ್ರೀತಿಪಾತ್ರರೊಂದಿಗೆ ಅನಿಸಿಕೆಗಳನ್ನು ಹಂಚಿಕೊಳ್ಳುವಿರಿ. ತಾಪತ್ರಯಗಳಿಂದ ಮುಕ್ತರಾಗಿ ನೆಮ್ಮದಿ.

ಸಿಂಹ
ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳೊಂದಿಗಿನ ಮಾತುಕತೆಯಿಂದ ಹೆಚ್ಚಿನ ಫಲ. ಕೃಷಿ ಮತ್ತು ಹೈನುಗಾರಿಕೆ ಯಲ್ಲಿ ತೊಡಗಿಕೊಂಡವರಿಗೆ ಹೆಚ್ಚಿನ ಅನುಕೂಲ ಮತ್ತು ಲಾಭ ದೊರಕಲಿದೆ.

ಕನ್ಯಾ
ಚಿತ್ರಕಲೆಯಲ್ಲಿ ತೊಡಗಿಕೊಂಡವರಿಗೆ ಸೃಜನಶೀಲತೆಯ ಉತ್ತುಂಗಕ್ಕೇರುವ ಅವಕಾಶ. ಮನಸ್ಸಿಗೆ ಮುದ ನೀಡುವ ಸಂಗತಿಗಳು ಜರುಗಲಿವೆ. ಜಟಿಲ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಿದ್ದೀರಿ. ಸಂತಸದ ದಿನ.

ತುಲಾ
ಹೊಸ ಮನೆ ಕಟ್ಟುವ ಯತ್ನ ಈಡೇರಲಿದೆ. ವಯಸ್ಕರು ಮಕ್ಕಳ ಜೊತೆ ಸಂತೋಷದಿಂದ ಕಾಲ ಕಳೆಯುವ ನಿರ್ಧಾರ ಮಾಡಲಿದ್ದೀರಿ. ದೇವತಾ ದರ್ಶನಕ್ಕಾಗಿ ಪ್ರಯಾಣ ಮಾಡುವ ಸಾಧ್ಯತೆ.

ವೃಶ್ಚಿಕ
ಕಾನೂನು, ಕಾಯ್ದೆ ವಿಚಾರದಲ್ಲಿ ಯಶಸ್ಸು ಗಳಿಸಲಿದ್ದೀರಿ. ನೇರ ನಡೆ ನುಡಿಯಿಂದಾಗಿ ಇತರರ ಮನಗೆದ್ದು ಸಂತಸ ಅನುಭವಿಸಲಿದ್ದೀರಿ. ಹೆಣೆದಿರುವ ತಂತ್ರಗಾರಿಕೆಯು ಫಲ ನೀಡಲಿದೆ. ದೇವಾಲಯ ದರ್ಶನ ಸಾಧ್ಯತೆ.

ಧನು
ಸಲಹೆಯನ್ನು ಬಯಸಿ ಬಂದವರಿಗೆ ನಿರಾಕರಿಸದೇ ಉತ್ತಮ ಸಲಹೆಗಳನ್ನು ನೀಡಿ ಅನುಕೂಲ ಹೊಂದಲಿದ್ದೀರಿ. ಮನೆಯ ವಹಿವಾಟಿನತ್ತ ವಿಶೇಷ ಗಮನ ಹರಿಸಲಿದ್ದೀರಿ. ಪಿತ್ರಾರ್ಜಿತ ಆಸ್ತಿಯು ಲಭ್ಯವಾಗಲಿದೆ.

ಮಕರ
ಹಣಕಾಸು ಸಮಸ್ಯೆಗಳು ಪರಿಹಾರವಾಗುವ ಲಕ್ಷಣಗಳು ಗೋಚರವಾಗುತ್ತಿವೆ. ಕೂಡಿಟ್ಟ ಬಂಡವಾಳದಿಂದಾಗಿ ನಿರೀಕ್ಷೆ ಮೀರಿದ ಲಾಭವನ್ನು ಹೊಂದಲಿದ್ದೀರಿ. ಸಂಗಾತಿಯೊಂದಿಗೆ ಸಂತಸವನ್ನು ಹಂಚಿಕೊಳ್ಳಲಿದ್ದೀರಿ.

ಕುಂಭ
ನಿತ್ಯದ ಕೆಲಸ ಕಾರ್ಯಗಳ ಬಗೆಗೆ ಹೆಚ್ಚಿನ ನಿಗಾ ವಹಿಸಲಿದ್ದೀರಿ. ಮನೆಯವರೊಂದಿಗೆ ದೇವತಾರಾಧನೆ ನಡೆಸಲಿದ್ದೀರಿ. ನೆನೆಗುದಿಗೆ ಬಿದ್ದಿರುವ ಕೆಲಸವೊಂದು ಪೂರ್ಣಗೊಂಡು ನೆಮ್ಮದಿ ನೀಡಲಿದೆ.

ಮೀನ
ಜೀವನಶೈಲಿಯಲ್ಲಿ ಬದಲಾವಣೆಯನ್ನು ಕಂಡುಕೊಳ್ಳುವಿರಿ. ಸ್ವಂತವಾಗಿ ವ್ಯಾಪಾರ, ವ್ಯವಹಾರ ನಡೆಸಲು ತೀರ್ಮಾನ ಕೈಗೊಂಡು ಉದ್ಯುಕ್ತರಾಗುವಿರಿ. ತಂದೆಯವರ ಸಹಕಾರದಿಂದಾಗಿ ವ್ಯವಹಾರದಲ್ಲಿ ಯಶಸ್ಸು

You May Also Like

error: Content is protected !!