ಮಳೆ ಬಂದರೆ ನರಕಯಾತನೆ : ಸಾರ್ವಜನಿಕರ ಗೋಳು ಕೇಳುವರಾರು

. ಮಸ್ಕಿ: ತಾಲೂಕಿನ ಬಳಗನೂರು ಹತ್ತಿರವಿರುವ ಬೆಳಗಿ ನೋರು ಗ್ರಾಮದಲ್ಲಿ ಮಳೆ ಬಂದರೆ ವಾರ್ಡಿನ ಜನರಿಗೆ ನದಿ ಸಮುದ್ರದಲ್ಲಿ ದಾಟುವಂತೆ ಪರಿಸ್ಥಿತಿ ಎದುರಾಗಿದೆ ಇದು ಮಸ್ಕಿ ಕ್ಷೇತ್ರದ ವ್ಯಾಪ್ತಿಗೆ ಬರುವ ಗ್ರಾಮ ಗ್ರಾಮಗಳಲ್ಲಿ ಸುರಕ್ಷತೆಗಾಗಿ ಸಾಕಷ್ಟು ಸರಕಾರದಿಂದ ಅನುದಾನ ಬಂದರೂ ಗ್ರಾಮಗಳ ಅಭಿವೃದ್ಧಿ ಕುಂಟಿತವಾಗುತ್ತದೆ ಮಳೆ ಬಂದರೆ ವೃದ್ಧರು ಗರ್ಭಿಣಿಯರು ವಯಸ್ಸಾದವರು ನರಕಯಾತನೆ ಅನುಭವಿಸುತ್ತಿದ್ದಾರೆ.

ಸಂಬಂಧಪಟ್ಟ ಜನಪ್ರತಿನಿಧಿಗಳು ಗೊತ್ತಿದ್ದರೂ ಗೊತ್ತಿಲ್ಲದಂತೆ ಸುಮ್ಮನೆ ಇರುತ್ತಾರೆ ಈಗಾಗಲೇ ಇವರ ಕೂಗು ಕೇಳುವವರ್ಯಾರು ಗೌಡನಬಾವಿ ವ್ಯಾಪ್ತಿಗೆ ಬರುವ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಅಧ್ಯಕ್ಷರು ಗ್ರಾಮ ಪಂಚಾಯತಿ ಸದಸ್ಯರು ಇದರ ಬಗ್ಗೆ ಗಮನಹರಿಸಬೇಕು

ಜಿಲ್ಲಾ ಪಂಚಾಯತ್ ಸದಸ್ಯರು ತಾಲೂಕು ಪಂಚಾಯತಿ ಸದಸ್ಯರು ಸ್ಥಳೀಯ ಗ್ರಾಮದ ಸಮಸ್ಯೆಯನ್ನು ಬಗೆಹರಿಸುವ ಮೂಲಕ ನರಕಯಾತನೆ ಅನುಭವಿಸುತ್ತಿರುವ ತಿಪ್ಪಯ್ಯ ಸ್ವಾಮಿ ಸಾಲಿಮಠ ಅವರ ವಾರ್ಡಿನ ನೀರನ್ನು ಹೋಗುವುದಕ್ಕೆ ಅನುಕೂಲ ಮಾಡಿ ಆ ವಾರ್ಡಿನ ಗ್ರಾಮದ ಜನರಿಗೆ ದಾರಿದೀಪ ವಾಗಬೇಕೆಂದು ವಾರ್ಡಿನ ಜನರು ಒತ್ತಾಯಿಸಿದ್ದಾರೆ

ಈ ಕಾರ್ಯ ಇದಕ್ಕೆ ಸಂಬಂಧಪಟ್ಟ ಜನಪ್ರತಿನಿಧಿಗಳು ಅಧಿಕಾರಿಗಳು ಯಾವಾಗ ಕಾರ್ಯರೂಪಕ್ಕೆ ತರುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.

ವರದಿ ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಂಗಿ✍️

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!