ವಲಸೆ ಶಾಸಕರಿಗೂ ನಮಗೂ ಸಂಬಂಧವಿಲ್ಲ: ಡಿ.ಕೆ.ಶಿವಕುಮಾರ್

ಮಂಗಳೂರು: ಕಾಂಗ್ರೇಸ್ ಹಿರಿಯ ಮುಖಂಡ ಅನಾರೋಗ್ಯದಿಂದ
ಆಸ್ಕರ್ ಫೆರ್ನಾಂಡಿಸ್ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆ ಆಸ್ಪತ್ರೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬೇಟಿ‌ ನೀಡಿ ಆಸ್ಕರ್ ಫೆರ್ನಾಂಡಿಸ್ ಆರೋಗ್ಯ ವಿಚಾರಿಸಿದರು.

ಮಂಗಳೂರಿನ ಯೆನೆಪೋಯಾ ಆಸ್ಪತ್ರೆಗೆ ದಾಖಲಾಗಿರುವ ಆಸ್ಕರ್ ಫೆರ್ನಾಂಡಿಸ್ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮನೆಯಲ್ಲಿ ಜಾರಿ ಬಿದ್ದು ಗಾಯಗೊಂಡಿದ್ದ ಆಸ್ಕರ್ ಫೆರ್ನಾಂಡಿಸ್ಆಸ್ಪತ್ರೆ ಭೇಟಿ ನೀಡಿದ ಬಳಿಕ ಡಿ.ಕೆ‌.ಶಿವಕುಮಾರ್ ಮಾತನಾಡಿ ಮಾಧ್ಯಮಗಳಲ್ಲಿ ಬರುತ್ತಿರುವಷ್ಟು ಆರೋಗ್ಯ ಅವರಿಗೆ ಹದಗೆಟ್ಟಿಲ್ಲ ಎಂದರು.
ಆಸ್ಕರ್ ಫೆರ್ನಾಂಡಿಸ್ ಚಿಕಿತ್ಸೆ ಗೆ ಸ್ಪಂದಿಸುತ್ತಿದ್ದಾರೆ‌ ತಜ್ಞ ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ
ಅವರನ್ನ ದೆಹಲಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡೋ ಅಗತ್ಯವಿಲ್ಲ
ದೇಶದ ವಿವಿಧ ಕಡೆಯಿಂದಲೇ ಮಂಗಳೂರಿನ ಆಸ್ಪತ್ರೆಗೆ ಬರುತ್ತಾರೆ ಎಂದು ತಿಳಿಸಿದರು.

ಆದಿನೇಳು ಶಾಸಕರು ಈಗ ಬಿಜೆಪಿ ಶಾಸಕರು ಮತ್ತು ಸಚಿವರು ಅವರು ಮೀಟಿಂಗ್ ಮಾಡಿ, ಯಾರನ್ನ ಭೇಟಿ ಮಾಡಿದ್ರು ಅದಕ್ಕೂ ನಮಗೂ ಸಂಬಧವಿಲ್ಲ

ವಲಸೆ ಶಾಸಕರು ಮರಳಿ ಪಕ್ಷಕ್ಕೆ ಬರುವ ವಿಚಾರ ಅದರ ಬಗ್ಗೆ ನಾನು ಈಗ ಏನು ಹೇಳಲ್ಲ ಅದಕ್ಕೆಲ್ಲಾ ಇನ್ನೂ ಸಮಯವಿದೆ ಮುಂದೆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನಿಮಗೂ ಸಿಗಲಿದೆ ಎಂದರು.

ವರದಿ: ದ್ಯಾಮಣ್ಣ ಕೊಡ್ಲಿ, ದಕ್ಷಿಣ ಕನ್ನಡ ಜಿಲ್ಲೆ

You May Also Like

error: Content is protected !!