ಸ್ಮಾರ್ಟ್‌ ಸಿಟಿ ನೇಮಕಾತಿ; ಆಗಸ್ಟ್‌ 5ರೊಳಗೆ ಅರ್ಜಿ ಹಾಕಿ

ಬೆಂಗಳೂರು, ; ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆಯಲಾಗಿದೆ. ಆಸಕ್ತ ಅಭ್ಯರ್ಥಿಗಳು ಆಗಸ್ಟ್ 5ರ ತನಕ ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಚೀಫ್ ಡೇಟಾ ಆಫೀಸರ್ 1, ಪರ್ಸನಲ್ ಅಸಿಸ್ಟೆಂಟ್ 1, ಫಸ್ಟ್ ಡಿವಿಷನ್ ಅಸಿಸ್ಟೆಂಟ್ 1, ಫಸ್ಟ್ ಡಿವಿಷನ್ ಅಕೌಂಟ್ ಅಸಿಸ್ಟೆಂಟ್ 1, ಸೆಕೆಂಡ್ ವಿಡಿಷನ್ ಅಸಿಸ್ಟೆಂಟ್ 1 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 60 ವರ್ಷವನ್ನು ಮೀರಿರಬಾರದು. ಹುದ್ದೆಗಳನ್ನು ಒಂದು ವರ್ಷದ ಗುತ್ತಿಗೆ ಅವಧಿ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಒಂದು ವರ್ಷದ ಬಳಿಕ ಅವಧಿಯನ್ನು ಹೆಚ್ಚಿಸುವ ಅವಕಾಶವೂ ಇದೆ

ಚೀಫ್ ಡೇಟಾ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಇಂಜಿನಿಯರಿಂಗ್ ಪದವಿಯನ್ನು ಡೇಟಾ ಸೈನ್ಸ್, ಕಂಪ್ಯೂಟರ್ ಸೈನ್ಸ್ ಅಥವ ಇನ್‌ಫರ್‌ಮೇಶನ್ ಸೈನ್ಸ್‌ನಲ್ಲಿ ಪಡೆದಿರಬೇಕು.

ಪರ್ಸನಲ್ ಅಸಿಸ್ಟೆಂಟ್ ಮತ್ತು ಫಸ್ಟ್ ಡಿವಿಷನ್ ಅಕೌಂಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಂ. ಎಸ್. ಎಕ್ಸೆಲ್, ಎಂ. ಎಸ್. ವರ್ಡ್, ಕನ್ನಡ ಮತ್ತು ಇಂಗ್ಲಿಶ್ ವಿಷಯದಲ್ಲಿ ಪ್ರಾವೀಣ್ಯತೆ ಪಡೆದಿರಬೇಕು.

ಸೆಕೆಂಡ್ ಡಿವಿಷನಲ್ ಅಸಿಸ್ಟೆಂಟ್ ಹುದ್ದೆಗೆ ಪಿಯುಸಿ ಜೊತೆಗೆ ಎಂ. ಎಸ್. ಎಕ್ಸೆಲ್, ಎಂ. ಎಸ್. ವರ್ಡ್, ನುಡಿ ಜ್ಞಾನವನ್ನು ಹೊಂದಿರಬೇಕು.

ಅಭ್ಯರ್ಥಿಗಳು ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಬಯೋಡೇಟಾವನ್ನು ಇ-ಮೇಲ್ ಮೂಲಕ [email protected] ವಿಳಾಸಕ್ಕೆ 5/8/2021ರ ಸಂಜೆ 5.30ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-48504523.

You May Also Like

error: Content is protected !!