ಆಸ್ಟ್ರೇಲಿಯಾದ ಶಾಲಾ-ಕಾಲೇಜುಗಳಲ್ಲಿ ಕನ್ನಡ ಕಲಿಕೆ ಆರಂಭ

ಕನ್ನಡವನ್ನು ಕರ್ನಾಟಕದ ಶಾಲೆಗಳಲ್ಲೇ ಕಡ್ಡಾಯವಾಗಿ ಕಲಿಸುವ ಬಗ್ಗೆ ಚರ್ಚೆ ಮುನ್ನಲೆಯಲ್ಲಿರುವಾಗಲೇ ಆಸ್ಟ್ರೇಲಿಯಾದ ಶಾಲಾ-ಕಾಲೇಜುಗಳಲ್ಲಿ ಕನ್ನಡ ಕಲಿಕೆ ಆರಂಭವಾಗುತ್ತಿದೆ. ಇದೊಂದು ಆಶ್ಚರ್ಯ ಎನಿಸಿದರೂ ಆಸ್ಟ್ರೇಲಿಯಾದ ವಿದ್ಯಾರ್ಥಿಗಳಿಗೆ 12ನೆ ತರಗತಿಯಿಂದ ಕನ್ನಡ ಭಾಷೆಯನ್ನು ದ್ವಿತೀಯ ಭಾಷೆಯನ್ನಾಗಿ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಅಲ್ಲಿನ ಸರ್ಕಾರ ಒದಗಿಸುತ್ತಿದೆ.

ಆಸ್ಟ್ರೇಲಿಯಾದ ಮೆಲ್ಬೋರ್ನ್‍ನಲ್ಲಿ ಸಾಕಷ್ಟು ಕನ್ನಡಿಗರು ವಾಸಿಸುತ್ತಿರುವ ಹಿನ್ನೆಲೆಯಲ್ಲಿ ಆ ಅಂಕಿ-ಅಂಶ ಆಧರಿಸಿ ಕನ್ನಡ ಅಳವಡಿಕೆಗೆ ಅಲ್ಲಿನ ಸರ್ಕಾರ ತೀರ್ಮಾನ ಕೈಗೊಂಡಿದೆ. ಅಲ್ಲಿನ ವಿಕ್ಟೋರಿಯಾ ರಾಜ್ಯ ಸರ್ಕಾರವು ಈ ವರ್ಷಾಂತ್ಯಕ್ಕೆ ಕನ್ನಡ ಕಲಿಕೆಯನ್ನು ಪ್ರಾರಂಭಿಸುವ ಬಗ್ಗೆ ನಿರ್ಧಾರ ಕೈಗೊಂಡಿದ್ದು, ಮೆಲ್ಬೋರ್ನ್‍ನ ವಿಕ್ಟೋರಿಯಾ ಭಾಷಾ ಶಾಲೆ ವಿಭಾಗದಿಂದ ಕನ್ನಡ ಕಲಿಕೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಮೆಲ್ಬೋರ್ನ್‍ನ ಕನ್ನಡ ಸಂಘ ಕನ್ನಡವನ್ನು ಸರ್ಕಾರಿ ಶಾಲೆಗಳಲ್ಲಿ ಐಚ್ಛಿಕ ಭಾಷೆ ಎಂದು ಪರಿಗಣಿಸುವಂತೆ ಮಾಡಿದ ಮನವಿ ಮೇರೆಗೆ ಸರ್ಕಾರ ಈ ಕ್ರಮ ಕೈಗೊಳ್ಳುತ್ತಿದೆ.

You May Also Like

error: Content is protected !!