ಕೆ.ಎಸ್.ಆರ್.ಟಿ.ಸಿ.ಯಿಂದ ಜೋಗ ಜಲಪಾತಕ್ಕೆ ವಿಶೇಷ ಟೂರ್ ಪ್ಯಾಕೇಜ್

ತುಮಕೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ತುಮಕೂರು ವಿಭಾಗವು ಜೋಗ ಜಲಪಾತಕ್ಕೆ ವಿಶೇಷ ಟೂರ್ ಪ್ಯಾಕೇಜ್‌ನಡಿ ಸಾರಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ಮಳೆಗಾಲ ಪ್ರಾರಂಭವಾಗಿರುವುದರಿಂದ ವಿಶ್ವವಿಖ್ಯಾತ ಜೋಗ ಜಲಪಾತದ ವೀಕ್ಷಣೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ತುಮಕೂರಿನಿಂದ ತಿಪಟೂರು-ಕಡೂರು-ಶಿವಮೊಗ್ಗ-ಸಾಗರ ಮಾರ್ಗವಾಗಿ ವರದಮೂಲ, ಇಕ್ಕೇರಿ ಹಾಗೂ ಜೋಗ ಜಲಪಾತಕ್ಕೆ ವಿಶೇಷ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.

ಪ್ರಯಾಣಿಕರು ನಿಗಮದ ಅವತಾರ್ (http://www.ksrtc.karnataka.gov.in) ತಂತ್ರಾಂಶದಲ್ಲಿ ಮುಂಗಡ ಟಿಕೇಟ್‌ಗಳನ್ನು ಕಾಯ್ದಿರಿಸಬಹುದಾಗಿದೆ. ವಯಸ್ಕರಿಗೆ 650/- ರೂ. ಹಾಗೂ 6-12 ವರ್ಷದೊಳಗಿನ ಮಕ್ಕಳಿಗೆ

4೦೦/- ರೂ.ಗಳ ಪ್ರಯಾಣ ದರವನ್ನು ನಿಗಧಿಪಡಿಸಲಾಗಿದೆ.

ವಿಶೇಷ ಟೂರ್ ಪ್ಯಾಕೇಜ್‌ನಡಿ ಪ್ರತಿ ಶನಿವಾರ, ಭಾನುವಾರ ಹಾಗೂ ರಜಾದಿನಗಳಂದು ಸಾರಿಗೆ ಕಾರ್ಯಾಚರಣೆಯು ತುಮಕೂರಿನಿಂದ ಬೆಳಿಗ್ಗೆ 6 ಗಂಟೆಗೆ ಹೊರಡಲಿದ್ದು, ಪ್ರವಾಸಿಗರಿಗೆ ಬೆಳಿಗ್ಗೆ 6 ರಿಂದ 6-15ರವರೆಗೆ ಕಡೂರಿನಲ್ಲಿ ಲಘು ಉಪಹಾರಕ್ಕೆ ಅವಕಾಶ ನೀಡಲಾಗುವುದು. ನಂತರ ಮಧ್ಯಾಹ್ನ 12 ಗಂಟೆಗೆ ಸಾಗರ ತಲುಪಲಿದ್ದು, 12.15ಕ್ಕೆ ವರದಮೂಲದಲ್ಲಿ ವರದಾಂಬ ದೇವಸ್ಥಾನ ಹಾಗೂ ಕಲ್ಯಾಣಿ ವೀಕ್ಷಣೆ, 12-45ಕ್ಕೆ ವರದಮೂಲದಿಂದ ಹೊರಟು 1 ಗಂಟೆಗೆ ಇಕ್ಕೇರಿಯ ಅಘೋರೇಶ್ವರ ದೇವಸ್ಥಾನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು. ನಂತರ ಇಕ್ಕೇರಿ ಮಾರ್ಗವಾಗಿ 1.45ಕ್ಕೆ ಸಾಗರ ತಲುಪಲಿದೆ. ಸಾಗರದಿಂದ 1.45ಕ್ಕೆ ಹೊರಟು 2.3೦ಕ್ಕೆ ಜೋಗದಲ್ಲಿ ಭೋಜನ ಹಾಗೂ ಜಲಪಾತ ವೀಕ್ಷಣೆ ಮಾಡಬಹುದಾಗಿದೆ. ಜೋಗದಿಂದ ಸಂಜೆ 5.3೦ಕ್ಕೆ ನಿರ್ಗಮಿಸಿ 9.30 ರಿಂದ 9-45ರವರೆಗೆ ಕಡೂರಿನಲ್ಲಿ ಲಘು ಉಪಹಾರಕ್ಕೆ ಅವಕಾಶ ಮಾಡಿ ಕೊಡಲಾಗುವುದು. ಮಧ್ಯರಾತ್ರಿ 12.45ಕ್ಕೆ ಮರಳಿ ತುಮಕೂರು ತಲುಪಲಿದೆ.

ಈ ವಿಶೇಷ ಪ್ಯಾಕೇಜ್‌ನಡಿ ಪ್ರಯಾಣಿಸುವ ಪ್ರವಾಸಿಗರು ಮಾರ್ಗಮಧ್ಯೆ ಉಪಹಾರ ಹಾಗೂ ಊಟದ ವ್ಯವಸ್ಥೆಯನ್ನು ಸ್ವಂತ ಖರ್ಚಿನಲ್ಲಿ ಮಾಡಿಕೊಳ್ಳತಕ್ಕದ್ದು ಎಂದು ಅವರು ತಿಳಿಸಿದ್ದಾರೆ.

You May Also Like

error: Content is protected !!