ವಿಜಯ್ ಮಲ್ಯ ದಿವಾಳಿ : ಯುಕೆ ಕೋರ್ಟ್

ನವದೆಹಲಿ: ಭಾರತೀಯ ಬ್ಯಾಂಕ್ ಗಳಿಗೆ ಮಕ್ಮಲ್ ಟೋಪಿ ಹಾಕಿ ವಿದೇಶಕ್ಕೆ ಹಾರಿದ ಮದ್ಯದ ದೊರೆ ವಿಜಯ್ ಮಲ್ಯ ಸಂಪೂರ್ಣ ದಿವಾಳಿ ಆಗಿದ್ದಾರೆ ಎಂದು ಯುನೈಟೆಡ್ ಕಿಂಗ್‌ಡಮ್ ಕೋರ್ಟ್ ಸೋಮವಾರ ಘೋಷಿಸಿದೆ.

ಪ್ರಸ್ತುತ ಕಾರ್ಯ ನಿರ್ವಹಿಸದ ವಿಜಯ್ ಮಲ್ಯ ಮಾಲೀಕತ್ವದ ಕಿಂಗ್‌ಫಿಶರ್ ಏರ್‌ಲೈನ್ಸ್‌ಗೆ ಪಾವತಿಸಿದ ಸಾಲಗಳಿಂದ ಸಾಲವನ್ನು ವಸೂಲಿ ಮಾಡುವ ಪ್ರಕರಣವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನೇತೃತ್ವದ ಭಾರತೀಯ ಬ್ಯಾಂಕುಗಳ ಒಕ್ಕೂಟ ಗೆದ್ದಿದೆ.

ವಿಜಯ್ ಮಲ್ಯ ಅವರನ್ನು ದಿವಾಳಿಯೆಂದು ನಾನು ತೀರ್ಪು ನೀಡುತ್ತೇನೆ” ಎಂದು (ಐಸಿಸಿ) ನ್ಯಾಯಾಧೀಶ ಮೈಕೆಲ್ ಬ್ರಿಗ್ಸ್ ತಮ್ಮ ತೀರ್ಪಿನಲ್ಲಿ ಬರೆದಿರುವ ಬಗ್ಗೆ ಲಂಡನ್‌ನ ಹೈಕೋರ್ಟ್‌ನ ಚಾನ್ಸರಿ ವಿಭಾಗದ ವಿಚಾರಣೆಯ ಸಂದರ್ಭದಲ್ಲಿ ಹೇಳಿದ್ದಾರೆ

ಭಾರತೀಯ ಬ್ಯಾಂಕ್​ಗಳಿಗೆ ವಂಚಿಸಿ ವಿದೇಶಕ್ಕೆ ಹಾರಿರುವ ಉದ್ಯಮಿ ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿಗೆ ಸಂಬಂಧಿಸಿದ 8441.5 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳಿಗೆ ಜಾರಿ ನಿರ್ದೇಶನಾಲಯವು ವರ್ಗಾಯಿಸಿತ್ತು. ದೇಶದ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳಲ್ಲಿ ಸಾಲ ಪಡೆದು ವಂಚಿಸಲಾಗಿದೆ. ಮೂವರು ಉದ್ಯಮಿ ಮಾಡಿರುವ ವಂಚನೆಯಿಂದಾಗಿ ಬ್ಯಾಂಕ್​ಗಳಿಗೆ 22,586 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಜಾರಿ ನಿರ್ದೇಶನಾಲಯ ನೀಡಿರುವ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿತ್ತು.

ಎಸ್‌ಬಿಐ ನೇತೃತ್ವದ ಒಕ್ಕೂಟದ ಪರವಾಗಿ ಸಾಲ ಮರುಪಡೆಯುವಿಕೆ ನ್ಯಾಯಮಂಡಳಿ ಯುನೈಟೆಡ್ ಬ್ರೂವರೀಸ್ ಲಿಮಿಟೆಡ್‌ನ ಷೇರುಗಳನ್ನು 5824.50 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ಆ ಮೂಲಕ ಜೂನ್ 25ರೊಳಗೆ ಷೇರುಗಳ ಮಾರಾಟದಿಂದ 800 ಕೋಟಿ ರೂ.ಗಳ ಹೆಚ್ಚಿನ ಪಡೆಯುವ ಬಗ್ಗೆ ನಿರೀಕ್ಷಿಸಲಾಗಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳು ಈಗಾಗಲೇ ಷೇರುಗಳನ್ನು ಮಾರಾಟ ಮೂಲಕ 1357 ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡಿಕೊಂಡಿವೆ.

ವಿಜಯ್ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟೇಟ್ ಕೋರ್ಟ್ ಆದೇಶಿಸಿದ್ದು, ಯುಕೆ ಹೈಕೋರ್ಟ್ ಈ ಆದೇಶವನ್ನು ಎತ್ತಿ ಹಿಡಿದಿದೆ. ಯುಕೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅನುಮತಿ ನಿರಾಕರಿಸಿ ಹಿನ್ನೆಲೆ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಅಂತಿಮವಾಗಲಿದೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!