ಬಿಎಸ್ ವೈ ಉತ್ತಮ ಮುಖ್ಯಮಂತ್ರಿ: ಡಿ ಸಿ ಗೌರೀಶಂಕರ್

ತುಮಕೂರು: ಸಿಎಂ ಬಿಎಸ್ ವೈ ನಾನು ಕಂಡಂತಹ ಉತ್ತಮ ಮುಖ್ಯಮಂತ್ರಿ,ಇದು ನನ್ನ ವೈಯಕ್ತಿಕ ಅಭಿಪ್ರಾಯ. ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನ ಅಧಿಕಾರಕ್ಕೆ ತರಲು ಬಿ ಎಸ್ ವೈ ತುಂಬಾ ಶ್ರಮ ಪಟ್ಟರು, ಅವರ ಪರವಾಗಿ ಹಲವಾರು ಮಠಾಧೀಶರು ದೊಡ್ಡಮಟ್ಟದ ಹೋರಾಟ ಮಾಡಿದರು ಎಂದು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಊರುಕೆರೆ ಗ್ರಾಮದಲ್ಲಿ ನೂತನ ಗ್ರಾಮಪಂಚಾಯ್ತಿ ಕಟ್ಟಡ ಉದ್ಘಾಟಿಸಿ ಬಳಿಕ ಸುದ್ದಿಗಾರರೊಂದಿಗೆ ಗ್ರಾಮಾಂತರ ಶಾಸಕ ಡಿ ಸಿ ಗೌರೀಶಂಕರ್ ಮಾತನಾಡಿದರು.

ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಮಾಡಬಾರದು ಅಂತ ಸಂದೇಶ ಕೊಟ್ರು. ಬಿಜೆಪಿ ಹೈ ಕಮಾಂಡ್ ಬಹಳ ಬಲಿಷ್ಠವಾಗಿದೆ.ಯಾರ ಮಾತಿಗೂ ಸೊಪ್ಪು ಹಾಕದೆ ಅವರ ಅಜಂಡಾ ಏನಿದೆ 75 ವರ್ಷಕ್ಕಿಂದ ಮೇಲ್ಪಟ್ಟವರಿಗೆ ಅಧಿಕಾರ ಕೊಡ್ಬೇಕೋ ಬೇಡ್ವೋ ಎಂಬುದನ್ನ ನಿರ್ಧರಿಸಿದೆ.

ಬಿಜೆಪಿ ಹೈ ಕಮಾಂಡ್ ಆದಷ್ಟು ಬೇಗ ರಾಜ್ಯಕ್ಕೆ ಒಬ್ಬ ಒಳ್ಳೆ ಸಿಎಂ ಕೊಡಬೇಕು ಎಂದರು.

You May Also Like

error: Content is protected !!