ಶಿರಾ ಮದಲೂರು ಕೆರೆಗೆ ನೀರಿನ ರಾಜಕೀಯಕ್ಕೆ ಜೆಡಿಎಸ್ ಖಂಡನೆ..!


ಶಿರಾ: ಮದಲೂರು ಕೆರೆಗೆ ನೀರು ಹರಿಸುವ ವಿಚಾರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ರಾಜಕೀಯ ಮಾಡುತ್ತಿವೆ.ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಟಿ.ಬಿ ಜಯಚಂದ್ರರವರು ಮದಲೂರು ಕೆರೆಗೆ ನೀರು ಹರಿಸಲು 50 ಕೋಟಿ ಹಣ ತಂದು ಚಾನಲ್ ಕಾಮಗಾರಿ ಮಾಡಿದ್ದು ನಾವು ಎಂದು ಬೊಬ್ಬೆಹೊಡೆಯುವವರು ಅಂದು ಕಾನೂನಿನ ಸಚಿವರಾಗಿದ್ದ ಜಯಚಂದ್ರರವರು ನೀರು ಹರಿಸಲು ಆಲುಗೇಶನ್ ಮಾಡಲಿಲ್ಲ ಏಕೆ..? ಇಷ್ಟು ವರ್ಷ ಚಾನಲ್ ಮಾಡಿದ್ದು ನಾನು ಎಂದು ಕಾಂಗ್ರೆಸ್ ಪಕ್ಷ ರಾಜಕೀಯ ಮಾಡಿಕೊಂಡು ಜನರನ್ನು ಮೂರ್ಖರನ್ನಾಗಿ ಮಾಡಿತ್ತು.ಕಳೆದ ಉಪಚುನಾವಣೆಯಲ್ಲಿ ಅಧಿಕಾರ ಹಿಡಿಯಲೇಬೇಕೆಂದು ಬಿಜೆಪಿ ಪಕ್ಷ ಮದಲೂರು ಕೆರೆಯ ಅಂಗಳದಲ್ಲಿ ಸಮಾವೇಶ ಮಾಡಿ ನೀರು ಹರಿಸಿ ಇನ್ನೂ ಆರು ತಿಂಗಳಲ್ಲಿ ಬಾಗಿನ ಅರ್ಪಿಸುತ್ತೇನೆ ಎಂದು ಹೇಳಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರವರು ಶಿರಾ ಜನರ ಆಕ್ರೋಶಕ್ಕೆ ಗುರಿಯಾಗಬಾರದೆಂದು ಸ್ವಲ್ಪ ಮಟ್ಟಿಗೆ ನೀರು ಹರಿಸಿದರು.ಆದರೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿರವರು ಕೆಡಿಪಿ ಸಭೆಯಲ್ಲಿ ಮದಲೂರು ಕೆರೆಗೆ ನೀರು ಹರಿಸಲು ಆಲುಗೇಶನ್ ಆಗಿಲ್ಲ ಅದ್ದರಿಂದ ನೀರು ಹರಿಸಬೇಡಿ ಹಾಗೇನಾದರೂ ನೀರನ್ನು ಹರಿಸಿದರೆ ಜೈಲಿಗೆ ಹಾಕುತ್ತೇನೆ ಎಂದು ಅಧಿಕಾರಿಗಳಿಗೆ ಹೇಳಿರುವುದು ಖಂಡನೀಯ,ಉಪಚುನಾವಣೆಯ ಸಮಯದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಹೇಳಿದ್ದಾಗ ನೀವು ಸುಮ್ಮನೆ ಇದ್ದಿದ್ದು ಏಕೆ? ಶಿರಾ ತಾಲ್ಲೂಕಿನ ಜನರನ್ನು ಮರಳುಮಾಡಿ,ಉಪಚುನಾವಣೆಯಲ್ಲಿ ಗೆಲ್ಲಬೇಕು ಎಂದು ಅಂದು ಮಾತು ಕೊಟ್ಟಿದ್ದು ಇಷ್ಟು ಬೇಗ ಮರೆತುಬಿಟ್ರಾ ನಿಮ್ಮ ರಾಜಕೀಯ ಶಿರಾ ತಾಲ್ಲೂಕಿನ ಜನರಿಗೆ ತಿಳಿದಿದೆ.ಎರಡು ರಾಷ್ಟ್ರೀಯ ಪಕ್ಷಗಳು ಮದಲೂರು ಕೆರೆಗೆ ನೀರನ್ನು ಹರಿಸುವಲ್ಲಿ ರಾಜಕೀಯ ಮಾಡಿಕೊಂಡೆ ಬಂದಿದ್ದಾರೆ.ಆದರೆ ಪ್ರಾದೇಶಿಕ ಪಕ್ಷ ಜೆಡಿಎಸ್ ಯಾವತ್ತು ಮದಲೂರು ಕೆರೆಯ ನೀರಿನ ವಿಚಾರದಲ್ಲಿ ರಾಜಕೀಯ ಮಾಡಿಲ್ಲ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ತಾಲ್ಲೂಕು ಜೆಡಿಎಸ್ ಮುಖಂಡ ರಾಮಕೃಷ್ಣ ಹೇಳಿದ್ದಾರೆ.

ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಿ: ನಂಜಾವಧೂತ ಶ್ರೀಗಳು

ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವಲ್ಲಿ ತಾರತಮ್ಯ ಮಾಡಬಾರದು, ಆದಷ್ಟು ಬೇಗ ನೀರು ಬಿಟ್ಟು ಕೊಟ್ಟ ಮಾತಿನಂತೆ ಮದಲೂರು ಕೆರೆ ತುಂಬಿಸಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಬಾಗಿನ ಅರ್ಪಿಸಲಿ ಎಂದು ಪಟ್ಟನಾಯಕನಹಳ್ಳಿ ನಂಜಾವಧೂತ ಶ್ರೀಗಳು ಅಭಿಮತ ವ್ಯಕ್ತಪಡಿಸಿದ್ದಾರೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!