ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿಮಾನಿಗಳಿಗೆ ಸಿಹಿಸುದ್ದಿ …!!!

ರಚಿತಾ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಾಯಕ ನಟಿ. ರಚಿತಾ ಕನ್ನಡದ ಕಿರುತೆರೆಯ ದೈನಿಕ ಧಾರಾವಾಹಿ ‘ಅರಸಿ’ ಎಂಬ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಕಿರುತೆರೆ ವೃತ್ತಿಜೀವನದ ನಂತರ ರಚಿತಾ ಅವರು ತಮ್ಮ ಮೊದಲನೆಯ ಚಿತ್ರ “ಬುಲ್ ಬುಲ್”ನಲ್ಲಿ ದರ್ಶನ್ ಜೊತೆಗ ನಾಯಕಿಯಾಗಿ ನಟಿಸಿದರು.

ಮೊದಲಿಗೆ ಅವರು ಯಶಸ್ಸು ಕಂಡ ಚಿತ್ರ ಬುಲ್ ಬುಲ್. ನಂತರ, ದಿಲ್ ರಂಗೀಲಾ, ಅಂಬರೀಶ, ರನ್ನ , ರಥಾವರ, ಚಕ್ರವ್ಯೂಹ , ಭರ್ಜರಿ , ಪುಷ್ಪಕ ವಿಮಾನ , ಸೀತಾರಾಮ ಕಲ್ಯಾಣ , ನಟಸಾರ್ವಭೌಮ, ಆಯುಷ್ಮಾನ್ ಭವ ಚಿತ್ರಗಳಲ್ಲಿ ನಟಿಸಿದರು.

ರಚಿತಾ ಅವರು ಭಾರತೀಯ ಶಾಸ್ತ್ರೀಯ ಭರತನಾಟ್ಯ ನೃತ್ಯಗಾರ್ತಿ ಯಾಗಿದ್ದರು. ರಚಿತಾ ಅವರು 40 ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ ಮತ್ತು ಅವರ ತಂದೆ ಕೂಡ ಭಾರತೀಯ ಶಾಸ್ತ್ರೀಯ ಭರತನಾಟ್ಯ ನೃತ್ಯಗಾರ. ಅವರ ತಂದೆಯವರು 500 ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. ಕಿರುತೆರೆ ಮತ್ತು ಚಲನಚಿತ್ರ ನಟಿಯಾದ ನಿತ್ಯಾ ರಾಮ್ ಅವರು ರಚಿತಾ ರಾಮ್ ಅವರ ಸಹೋದರಿ..

ಸದ್ಯ ಇದೀಗ ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಏಕ್ ಲವ್ ಯಾ ಸಿನಿಮಾದ ಮೂಲಕ ರಚಿತಾ ಸ್ಟಾರ್‌ ನಟರ ಜೊತೆಗಷ್ಟೇ ನಟಿಸುತ್ತಾರೆ ಎಂಬ ಹಣೆಪಟ್ಟಿಯಿಂದಲೂ ಹೊರಬಂದಿದ್ದು, ಗಟ್ಟಿಯಾದ ಕಥೆ ಇದ್ದರೆ ಹೊಸ ನಿರ್ದೇಶಕರು, ನಟರ ಜೊತೆಗೂ ನಾನು ನಟಿಸಲು ಸದಾ ಸಿದ್ಧ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಪ್ರಸ್ತುತ ಡಿಂಪಲ್ ಕ್ವೀನ್ ‘ಲಿಲ್ಲಿ’ ಚಿತ್ರದಲ್ಲಿ ನಿರತರಾಗಿದ್ದು ನವರಸ ನಾಯಕ ಜಗ್ಗೇಶ್ ಅಭಿನಯದ ‘ನೀರ್‌ ದೋಸೆ’ ಚಿತ್ರದಲ್ಲಿ ಕೆಲಸ ಮಾಡಿದ್ದ ವಿಜಯ್‌ ಎಂಬುವವರು ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ಶಿವರಾಜ್‌ಕುಮಾರ್‌ ನಾಯಕರಾಗಿದ್ದ ‘ಆಯುಷ್ಮಾನ್‌ಭವ’ ಚಿತ್ರದಲ್ಲಿ ರಚಿತಾ ರಾಮ್ ಮಾನಸಿಕ ಅಸ್ವಸ್ಥೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಅಮೋಘ ಅಭಿನಯದಿಂದ ಎಲ್ಲರ ಗಮನ ಸೆಳೆದಿದ್ದರು. ಇದೀಗ ‘ಲಿಲ್ಲಿ’ ಚಿತ್ರದಲ್ಲಿ ಅವರು ಮನೊವೈದ್ಯೆಯಾಗಿ ಬಣ್ಣ ಹಚ್ಚುತ್ತಿದ್ದು, ಚಿತ್ರದಲ್ಲಿ ಅವರ ಪಾತ್ರದ ಹೆಸರು ‘ಡಾ.ಮಾಹಿ’. ಸವಾಲಿನ ಪಾತ್ರದ ಜೊತಗೆ ವಿಭಿನ್ನವಾದ ಲುಕ್‌ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರಂತೆ.

ಇತ್ತೀಚೆಗೆ ಆಟೋ ಮೇಲೆ ‘ಡಿಂಪಲ್ ಕ್ವೀನ್’ ರಚಿತಾ ರಾಮ್ ಫೋಟೋಗಳು ಹೆಚ್ಚು ಮಿಂಚುತ್ತಿವೆ. ಅಭಿಮಾನಿಯೊಬ್ಬ ತನ್ನ ಆಟೋ ಮೇಲೆ ರಚಿತಾ ಫೋಟೋ ಹಾಕಿಸಿಕೊಂಡು, ಅದನ್ನು ಸ್ವತಃ ರಚಿತಾ ರಾಮ್ ಬಳಿ ಅನಾವರಣ ಮಾಡಿಸಿದ್ದು ಸುದ್ದಿಯಾಗಿತ್ತು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿತ್ತು. ಇನ್ನು ರಚಿತಾ ರಾಮ್ ಸಹ ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದು, ಆಟೋ ಚಾಲಕ ರಿಜ್ವಾನ್‌ಗೆ ಜಾಗರೂಕತೆಯಿಂದ ಆಟೋ ಚಾಲನೆ ಮಾಡಿ ಎಂದು ಶುಭ ಹಾರೈಸಿದ್ದರು.

ಇದೀಗ ರಚಿತಾ ಮತ್ತೆ ಸುದ್ದಿಯಲ್ಲಿದ್ದಾರೆ. ಕೊರೋನಾ ಕಾಲದಲ್ಲಿ ಬೆಳೆದ ಬೆಳೆ ಮಾರಲಾಗದೇ ನಷ್ಟ ಅನುಭವಿಸುತ್ತಿರುವ ಅನ್ನದಾತರಿಗೆ ನನ್ನ ಬೆಂಬಲ ಎಂದಿರುವ ರಚಿತಾ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಹಸಿದವರಿಗೆ ಅನ್ನ ನೀಡುವ ಅನ್ನದಾತ ನಮ್ಮ ಬೆನ್ನುಲುಬು. ಆತನ ಬೆನ್ನಿಗೆ ನಾವೆಲ್ಲರೂ ನಿಲ್ಲುವುದು ಅವಶ್ಯವಾಗಿದೆ.

ಹೀಗಾಗಿ ಈ ದಿನಗಳಲ್ಲಿ ಕೊರೋನಾ ಸೋಂಕಿತ ರೈತರಿಗೆ ನಮ್ಮ ಕೈಲಾದ ಮಟ್ಟಿಗೆ ನೆರವಾಗುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ‘ವಿ ಸಪೋರ್ಟ್ ಫಾರ್ಮರ್ಸ್’ ಸಂಘಟನೆಗೆ ನನ್ನ ಬೆಂಬಲವಿದೆ. ನಿಮ್ಮ ಬೆಂಬಲ ವ್ಯಕ್ತಪಡಿಸಲು ನಿಮ್ಮ ಕೈಲಾದಷ್ಟು ಹಣವನ್ನು ಯುಪಿಐ ಕೋಡ್ ಮೂಲಕ ಸಹಾಯ ಮಾಡಿ’ ಎಂದು ರಚಿತಾ ಮನವಿ ಮಾಡಿದ್ದಾರೆ. ರಚಿತಾ ಈ ಮೂಲಕ ತಮ್ಮ ಅಭಿಮಾನಿಗಳಿಗೆ ಹೊಸ ಸಂದೇಶವನ್ನು ರವಾನಿಸಿದ್ದಾರೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!