ವಿಶ್ವ ಪರಿಸರ ಸಂರಕ್ಷಣಾ ದಿನ

ಸ್ಥಿರ ಸಮಾಜಕ್ಕೆ ಅಡಿಪಾಯ ಹಾಕಲು ಆರೋಗ್ಯಕರ ಪರಿಸರ ಮುಖ್ಯ. ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಪರಿಸರವನ್ನು ಉಳಿಸುವ ಮತ್ತು ಸಂರಕ್ಷಿಸುವ ಸಲುವಾಗಿ ಪ್ರತಿವರ್ಷ ಜುಲೈ 28ರಂದು ವಿಶ್ವ ಪರಿಸರ ಸಂರಕ್ಷಣಾ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ.

ದೈನಂದಿನ ಜೀವನಕ್ಕೆ ಬೇಕಾದ ನೀರು, ಗಾಳಿ, ಮಣ್ಣು, ಖನಿಜಗಳು, ಮರಗಳು, ಪ್ರಾಣಿಗಳು, ಆಹಾರ ಮತ್ತು ಅನಿಲಗಳಂತಹ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಎಲ್ಲರೂ ಅವಲಂಬಿಸಿದ್ದೇವೆ. ಇದನ್ನೆಲ್ಲಾ ಪ್ರಕೃತಿ ನಮಗೆ ನಿಸ್ವಾರ್ಥದಿಂದ ಕೊಡುತ್ತಿದೆ. ಆದರೂ ಮನುಷ್ಯ ಅದನ್ನು ಉಳಿಸಿಕೊಳ್ಳದೆ ನಾಶ ಮಾಡುತ್ತಿದ್ದಾನೆ. ಜಾಗತಿಕ ಸಂರಕ್ಷಣಾ ಸಂಸ್ಥೆಯ ವರ್ಲ್ಡ್‌ ವೈಲ್ಡ್‌ ಲೈಫ್‌ ಫೌಂಡೇಷನ್‌ ವರದಿ ಪ್ರಕಾರ 1970 ರಿಂದೀಚೆಗೆ ನಾವು ಭೂಮಿಯ ಮೇಲೆ ಬೀರುವ ಒತ್ತಡವು ದ್ವಿಗುಣವಾಗುತ್ತಿದೆ ಮತ್ತು ನಾವು ಅವಲಂಬಿಸಿರುವ ಸಂಪನ್ಮೂಲಗಳು ಶೇ. 33ಕ್ಕೆ ಇಳಿಕೆಯಾಗಿವೆ. ಇದು ಹೀಗೆ ಮುಂದುವರೆದರೆ ಭೂಮಿ ಅಳಿಯುವುದರಲ್ಲಿ ಸಂಶಯವಿಲ್ಲ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಜಾಗತಿಕವಾಗಿ ಏರುತ್ತಿರುವ ಜನಸಂಖ್ಯೆ, ಪರಿಸರ ಮಾಲಿನ್ಯ, ನಗರೀಕರಣ, ಕೈಗಾರಿಕರಣ, ಅರಣ್ಯನಾಶದಿಂದ ತಾಪಮಾನ ಏರುತ್ತಿದೆ, ಮಳೆ ಇಳಿಮುಖವಾಗುತ್ತಿದೆ. ಪರಿಸರ ಮಾಲಿನ್ಯ, ಪ್ರಕೃತಿ ವಿಕೋಪಗಳು ಉಂಟಾಗುತ್ತಿವೆ. ಇಂಥ ಸಮಸ್ಯೆಗಳನ್ನು ನಿಯಂತ್ರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ನೈಸರ್ಗಿಕ ಸಂಪನ್ಮೂಲಗಳ ಮಿತ ಬಳಕೆ, ಮಳೆ ನೀರು ಸಂಗ್ರಹ, ಶಕ್ತಿ ಸಂಪನ್ಮೂಲಗಳ ಮಿತ ಬಳಕೆ, ಪ್ಲಾಸ್ಟಿಕ್‌ ಬಳಕೆ ನಿಯಂತ್ರಿಸುವುದು, ಕ್ರಿಮಿನಾಶಕ ಬಳಕೆ ಕಡಿಮೆ ಮಾಡುವುದು ಇನ್ನಿತರ ಪರಿಸರ ಸಂರಕ್ಷಣಾ ವಿಷಯದ ಬಗ್ಗೆ ಗಮನ ಹರಿಸುವುದರಿಂದ ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸಿ ಸಂರಕ್ಷಿಸಬಹುದಾಗಿದೆ ಎನ್ನುತ್ತಾರೆ ಪರಿಸರ ತಜ್ಞರು. ಈ ದಿನದಂದು ಪರಿಸರ ಸಂರಕ್ಷಣಾ ವಿಷಯ ಕುರಿತು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಪರಿಸರ ಸಂರಕ್ಷಣಾ ದಿನ’ ದಂದು ನಾವು ಪ್ರತಿಜ್ಞೆಗೈಯೋಣ “ನಾವು ಇಂದಿನಿಂದ ಪರಿಸರವನ್ನು ಮಾಲಿನ್ಯ ಮಾಡುವುದನ್ನು ನಿಲ್ಲಿಸುತ್ತೇವೆ. ನಾವು ವಾಸಿಸುವ ಪರಿಸರವನ್ನು ಚೆನ್ನಾಗಿಟ್ಟುಕೊಂಡು ಹೇಗೆ ನಮ್ಮ ಹಿರಿಯರು ಪರಿಸರವನ್ನು ಕಾಪಾಡಿಕೊಂಡು ನಮಗೆ ನೀಡಿದರೋ ಹಾಗೇ ನಾವು ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರವನ್ನು ಕೊಡುತ್ತೇವೆ”. “We the People : United for the Global Environment”..

– ವಿಶ್ವದ ಪರಿಸರಕ್ಕಾಗಿ ನಾವೆಲ್ಲ ಒಂದಾಗೋಣ

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!