ಒಲಿಂಪಿಕ್ಸ್ ಪದಕ ಪಟ್ಟಿ : 41ನೇ ಸ್ಥಾನಕ್ಕೆ ಕುಸಿದ ಭಾರತ..!

ಟೋಕಿಯೋ: ದಿನದಿಂದ ದಿನಕ್ಕೆ ಉತ್ತಮ ಪ್ರದರ್ಶನ ತೋರುತ್ತಾ ಪದಕಗಳನ್ನು ಸೂರೆಗೊಳ್ಳುತ್ತಿರುವ ಚೀನಾದ ಅಥ್ಲೀಟ್‍ಗಳು ಪಾಯಿಂಟ್ಸ್ ಪಟ್ಟಿಯಲ್ಲಿ ತಮ್ಮ ದೇಶವನ್ನು ಟಾಪ್ ಆಗಿಸುವಲ್ಲಿ ಯಶಸ್ವಿಯಾಗಿದ್ದರೆ, ಭಾರತ ತಂಡವು 41ನೆ ಸ್ಥಾನಕ್ಕೆ ಕುಸಿದಿದೆ. ಚೀನಾದ ಅಥ್ಲೀಟ್‍ಗಳು ಇದುವರೆಗೂ 11 ಚಿನ್ನ, 5 ಬೆಳ್ಳಿ, 8 ಕಂಚಿನ ಪದಕಗಳೊದಿಗೆ ಒಟ್ಟು 24 ಪದಕಗಳನ್ನು ಗೆಲ್ಲುವ ಮೂಲಕ ಅಗ್ರಸ್ಥಾನಿಯಾಗಿದ್ದರೆ, ಜಪಾನ್ ತಂಡವು 11 ಚಿನ್ನ, 4 ಬೆಳ್ಳಿ, 5 ಕಂಚು ಸೇರಿ 20 ಪದಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ, ಅಮೆರಿಕಾ ಅಥ್ಲೀಟ್‍ಗಳು ಪದಕ ಸೂರೆಗೊಳ್ಳು ವಲ್ಲಿ ನಿರತರಾಗಿದ್ದು ಆ ದೇಶದ ಆಟಗಾರರು ಇದುವರೆಗೂ 10 ಚಿನ್ನ, 11 ರಜತ, 9 ಕಂಚಿನ ಪದಕಗಳೊಂದಿಗೆ ಒಟ್ಟು 30 ಪದಕಗಳನ್ನು ತಮ್ಮದಾಗಿಸಿಕೊಂಡಿದೆ.

ನಾಲ್ಕನೇ ಸ್ಥಾನದಲ್ಲಿ ರಷ್ಯಾ 19 ಪದಕ ( 7ಚಿನ್ನ, 8 ರಜತ, 4 ಕಂಚು), 5ನೇ ಸ್ಥಾನದಲ್ಲಿ ಆಸ್ಟ್ರೇಲಿಯಾ 15 ಪದಕ (6 ಚಿನ್ನ, 1 ಬೆಳ್ಳಿ, 8 ಕಂಚು), 6ನೇ ಸ್ಥಾನದಲ್ಲಿ ಇಂಗ್ಲೆಂಡ್ 15 ಪದಕ ( 5 ಚಿನ್ನ, 6 ರಜತ, 4 ಕಂಚು), 7ನೇ ಸ್ಥಾನದಲ್ಲಿ ಕೊರಿಯಾ 10 ಪದಕ (3 ಸ್ವರ್ಣ, 2 ಬೆಳ್ಳಿ, 5 ಕಂಚು), 8ನೇ ಸ್ಥಾನದಲ್ಲಿ ಫ್ರಾನ್ಸ್ 8 ಪದಕ (3 ಚಿನ್ನ, 2 ರಜತ, 3 ಕಂಚು), 9ನೇ ಸ್ಥಾನದಲ್ಲಿ ನೆದರ್‍ಲ್ಯಾಂಡ್ 9 ಪದಕ (2 ಚಿನ್ನ, 5 ಬೆಳ್ಳಿ, 2 ಕಂಚು) ಹಾಗೂ 10 ನೇ ಸ್ಥಾನದಲ್ಲಿ ಕೆನಡಾ 9 ಪದಕ ( 2 ಸ್ವರ್ಣ, 3 ಬೆಳ್ಳಿ, 4 ಕಂಚು) ಪದಕಗಳನ್ನು ತನ್ನದಾಗಿಸಿಕೊಂಡಿದೆ.
ಪಾಯಿಂಟ್ಸ್ ಪಟ್ಟಿಯಲ್ಲಿ 41ನೆ ಸ್ಥಾನದಲ್ಲಿರುವ ಭಾರತದ ಪರ ವೇಟ್ ಲಿಫ್ಟಿಂಗ್‍ನಲ್ಲಿ ಮಣಿಪುರದ ಮೀರಾಬಾಯಿ ಚಾನು ಅವರು ಬೆಳ್ಳಿ ಪದಕ ಗೆದ್ದಿದ್ದು ಬಿಟ್ಟರೆ ಉಳಿದ ಆಟಗಾರರು ಪ್ರಶಸ್ತಿ ಸುತ್ತನ್ನು ಪ್ರವೇಶಿಸುವಲ್ಲಿ ಎಡವಿದ್ದಾರೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!