ರೈತರಿಗೆ ಸಿಹಿ ಸುದ್ದಿ: KSRTC’ಯಿಂದ ಹಣ್ಣು, ತರಕಾರಿ ಸಾಗಾಟಕ್ಕೆ ‘ಹವಾನಿಯಂತ್ರಿತ ಬಸ್’ ಸೇವೆ

ಬೆಂಗಳೂರು : ಇದುವರೆಗೆ ಟೆಂಪೋ, ಆಟೋಗಳ ಮೂಲಕ ಮಾರುಕಟ್ಟೆಗಳಿಗೆ ರೈತರು ತಾವು ಬೆಳೆದಂತ ಹಣ್ಣು, ತರಕಾರಿ ಸಾಗಿಸಲಾಗುತ್ತಿತ್ತು. ಆದ್ರೇ.. ಇನ್ಮುಂದೆ ಕೆ ಎಸ್ ಆರ್ ಟಿ ಸಿ ಹವಾನಿಯಂತ್ರಿತ ಬಸ್ ಗಳ ಮೂಲಕವೂ, ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡಬಹುದಾಗಿದೆ. ಇದಕ್ಕಾಗಿಯೇ KSRTC ನೂತನವಾಗಿ ಹವಾನಿಯಂತ್ರಿತ ಬಸ್ ಗಳನ್ನು ಕೂಡ ಆರಂಭಿಸಲಿದೆ. ಈ ಮೂಲಕ ರೈತರಿಗೆ ಗುಡ್ ನ್ಯೂಸ್ ದೊರೆತಂತೆ ಆಗಿದೆ.

ಕೊರೋನಾ ನಂತ್ರದಿಂದಾಗಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವಂತ ಕೆ ಎಸ್ ಆರ್ ಟಿಸಿ ( KSRTC), ಇದೀಗ, ಈ ಸಂಕಷ್ಟದಿಂದ ಪಾರಾಗಲು ಹೊಸ ಮಾರ್ಗ ಹುಡುಕಿಕೊಂಡಿದೆ. ಅದೇ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸಾರಿಗೆ ಬಸ್ ಗಳಲ್ಲಿ ಕೃಷಿ ಉತ್ಪನ್ನಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಾಟಕ್ಕೆ ಮುಂದಾಗಿದೆ.

ಈ ಕುರಿತಂತೆ ಮಾಹಿತಿ ನೀಡಿದಂತ ಕೆ ಎಸ್ ಆರ್ ಟಿ ಸಿಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ ಕಳಸದ ( KSRTC MD Shivayogi C Kalasad ) ಅವರು, ಹವಾನಿಯಂತ್ರಿತ ಹಳೆಯ ಬಸ್ ಗಳ ಮೂಲಕ ಪ್ರಾಯೋಗಿಕವಾಗಿ ಒಂದು ತಿಂಗಳ ಕಾಲ, ರೈತರ ಕೃಷಿ ಉತ್ಪನ್ನಗಳನ್ನು ಸಾಗಾಟಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಕೋವಿಡ್ ಬಳಿಕ ನಿಗಮಕ್ಕೆ ಆದಾಯ ಗಳಿಕೆ ಸಂಬಂಧ ಈ ಯೋಜನೆ ರೂಪಿಸಲಾಗಿದೆ ಎಂದಿದ್ದಾರೆ.

ಮೊದಲ ಹಂತದಲ್ಲಿ ಚಿಕ್ಕಬಳ್ಳಾಪುರ, ಕೋಲಾರ, ಹೊಸಪೇಟೆ ಮತ್ತು ಬೆಂಗಳೂರು ಸುತ್ತಮುತ್ತಲ ನಗರಗಳಿಂದ ಬಸ್ ಗಳ ಕಾರ್ಯಾಚರಣೆ ಮಾಡಲಿದ್ದಾವೆ. ಬೆಂಗಳೂರು ನಗರಕ್ಕೆ ಸುತ್ತಮುತ್ತಲ ಪ್ರದೇಶಗಳಿಂದ ತರಕಾರಿ ಮತ್ತು ಹಣ್ಣುಗಳ ಸರಬರಾಜಿಗಾಗಿ ಹಳೆಯ ಹವಾನಿಯಂತ್ರಿತ ಬಸ್ ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ತರಕಾರಿ, ಹಣ್ಣಮ ಮತ್ತು ಇತರೆ ಕೃಷಿ ಉತ್ಪನ್ನಗಳಿಗಾಗಿ ಸದ್ಯ ನಿಗಮದಲ್ಲಿ ಇರುವಂತ ಹವಾನಿಯಂತ್ರಿತ ಹಳೆಯ ಬಸ್ ಗಳ ಮೂಲಕ ಕೆ ಆರ್ ಮಾರುಕಟ್ಟೆ, ಕಲಾಸಿಪಾಳ್ಯಕ್ಕೆ ತಲುಪಿಸುವ ಕಾರ್ಯವನ್ನು ಕೈಗೊಳ್ಳಲಿದ್ದೇವೆ. ಈ ಮೂಲಕ ರೈತರಿಗೂ ಅನುಕೂಲವಾಗಿ, ನಿಗಮಕ್ಕೂ ಆದಾಯ ಗಳಿಕೆಯಾಗಲಿದೆ ಎಂದರು.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!