‘ಆರೋಗ್ಯ ಇಲಾಖೆ’ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಬೆಂಗಳೂರು : ರಾಜ್ಯ ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ ಅಭಿಯಾನ ( NHM) ಅಡಿಯಲ್ಲಿ ಖಾಲಿ ಇರುವಂತ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಪದವೀಧರರಿಂದ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅಧಿಸೂಚನೆ ಹೊರಡಿಸಿದ್ದು, ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ ಖಾಲಿ ಇರುವಂತ ಮೆಂಟಲ್ ಹೆಲ್ತ್, ಡೆಮೋಗ್ರಫಿ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಕುರಿತಂತೆ http://karunadu.karnataka.gov.in ಜಾಲತಾಣಕ್ಕೆ ಭೇಟಿ ನೀಡಿ, ಹುದ್ದೆಗಳ ವಿವಿರ ಹಾಗೂ ವಿದ್ಯಾರ್ಥತೆಗೆ ಸಂಬಂಧಿಸಿದಂತ ಮಾಹಿತಿ ಅನುಸಾರ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ.

ಹುದ್ದೆಗಳ ವಿವರ

ಮೆಟರ್ನಲ್ ಹೆಲ್ತ್ ಅಂಡ್ ಫ್ಯಾಮಿಲಿ ಪ್ಲಾನಿಂಗ್ – 01
ಲಕ್ಷ್ಯ ಕಾರ್ಯಕ್ರಮ ಸಮನ್ವಯಕಾರ – 01
ಎಚ್ ಎಂಐ ಎಸ್ ಹಾಗೂ ಎಂಸಿಟಿಎಸ್ ಸಮನ್ವಯಕಾರ – 01
ಸಲಹೆಗಾರರು – 01
ಕಾರ್ಯಕ್ರಮ ಸಹಾಯಕ – 02
ಸಿಎಸ್ ಟಿ ಸಮನ್ವಯಕಾರರು – 01
ಸಲಹೆಗಾರ – ಚೈಲ್ಡ್ – 01
ವೇತನ ಶ್ರೇಣಿ – ಹುದ್ದೆಗೆ ಅನುಗುಣವಾಗಿ ನಿಗದಿ ಪಡಿಸಿದಂತೆ ರೂ.25,000 ದಿಂದ 60 ಸಾವಿರದವರೆಗೆ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 05-08-2021 ಆಗಿರುತ್ತದೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!