ಡಿಕ್ವೆಲ್ಲಾ, ಮೆಂಡಿಸ್, ಗುಣತಿಲಕಗೆ ಒಂದು ವರ್ಷ ನಿಷೇಧ: 10 ಮಿಲಿಯನ್ ರೂ. ದಂಡ

ಕೊಲಂಬೊ: ಕಳೆದ ತಿಂಗಳು ಇಂಗ್ಲೆಂಡ್ ಪ್ರವಾಸದಲ್ಲಿ ಕೋವಿಡ್-19 ಶಿಷ್ಟಾಚಾರ ಉಲ್ಲಂಘನೆಗಾಗಿ ಹಿರಿಯ ಆಟಗಾರರಾದ ಕುಶಾಲ್ ಮೆಂಡಿಸ್, ನಿರೋಶನ್ ಡಿಕ್ವೆಲ್ಲಾ, ಧನುಷ್ಕಾ ಗುಣತಿಲಕ ಅವರಿಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಒಂದು ವರ್ಷ ನಿಷೇಧ ವಿಧಿಸಿದೆ. ಅಲ್ಲದೇ, 10 ಮಿಲಿಯನ್ ಶ್ರೀಲಂಕನ್ ರೂ. ದಂಡವನ್ನು ವಿಧಿಸಲಾಗಿದೆ.

ಈ ಮೂವರು ಆಟಗಾರರು ನಿಗದಿತ ಓವರ್ ಗಳ ಸರಣಿ ವೇಳೆಯಲ್ಲಿ ನಿಗದಿತ ಹೋಟೆಲ್ ನಿಂದ ಹೊರಹೋಗುವ ಮೂಲಕ ಬಯೋ ಬಬಲ್ ನಿಯಮ ಉಲ್ಲಂಘನೆ ಮಾಡಿರುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಅದ್ದರಿಂದ ಅವರನ್ನು ಮಧ್ಯದಲ್ಲಿಯೇ ಸ್ವದೇಶಕ್ಕೆ ಕಳುಹಿಸಲಾಗಿತ್ತು. ಅಮಾನತು ಕೂಡಾ ಮಾಡಲಾಗಿತ್ತು.

ಡಿಕ್ವೇಲಾ ಅವರನ್ನು 18 ತಿಂಗಳ ಅಮಾನತ್ತಿನೊಂದಿಗೆ ಮೆಂಡಿಸ್ ಮತ್ತು ಗುಣತಿಲಕ ಅವರನ್ನು ಎರಡು ವರ್ಷ ನಿಷೇಧಿಸುವಂತೆ ನಿವೃತ್ತ ನ್ಯಾಯಾಧೀಶರ ನೇತೃತ್ವದ ಶಿಸ್ತುಪಾಲನಾ ಸಮಿತಿ ಶಿಫಾರಸು ಮಾಡಿತ್ತು.

ಆದಾಗ್ಯೂ, ಮೂವರು ಆಟಗಾರರನ್ನು ಒಂದು ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಹಾಗೂ ಆರು ತಿಂಗಳು ದೇಶಿಯ ಕ್ರಿಕೆಟ್ ನಿಂದ ನಿಷೇಧಿಸಲು ಶಿಸ್ತು ಪಾಲನಾ ಸಮಿತಿ ಶುಕ್ರವಾರ ನಿರ್ಧರಿಸಿತು. ಆಟಗಾರರಿಂದ ಮತ್ತೊಂದು ಉಲ್ಲಂಘನೆಯಿದ್ದರೆ ಒಂದು ವರ್ಷದ ಅಮಾನತು ಶಿಕ್ಷೆಯನ್ನು ಎರಡು ವರ್ಷಗಳವರೆಗೆ ಮಾನ್ಯವಾಗಿರುತ್ತದೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!