ಸಂಪುಟ ರಚನೆ: ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ..!

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರ ಸಂಪುಟಕ್ಕೆ ಸೇರ್ಪಡೆಯಾಗಲು ಸಚಿವಾಕಾಂಕ್ಷಿಗಳ ಲಾಬಿ ಮುಂದುವರಿದಿದ್ದು, ಸಂಪುಟ ರಚನೆಯ ಹಲವು ಲೆಕ್ಕಾಚಾರಗಳು ಸುದ್ದಿ‌ ಸೇರ್ಪಡೆ ಮಾಡುತ್ತಿವೆ. ನಾಳೆ ಪುನಃ ದಹಲಿಗೆ ತೆರಳಲಿರುವ ಬೊಮ್ಮಯಿ ಅವರು ವರಿಷ್ಟರನ್ನು ಭೇಟಿ ಮಾಡಿ ಸಂಪುಟ ರಚನೆಗೆ ನೂತನ ಸಚಿವರ ಪಟ್ಟಿಗೆ ಹಸಿರು ನಿಶಾನೆ ಪಡೆಯಲಿದ್ದಾರೆ‌.

ಸಂಪುಟವನ್ನು ಸೇರಬಹುದಾದ 6 ಮಂದಿ ಸಚಿವರ ಬಗ್ಗೆ ಚರ್ಚೆ ಈಗಾಗಲೇ ಪೂರ್ಣಗೊಂಡಿದೆ. ಇದಲ್ಲದೆ, ಹೈಕಮಾಂಡ್ ತಾನಾಗೇ 7 ಮಂದಿಯ ಹೆಸರನ್ನು ಪ್ರಸ್ತಾಪ ಮಾಡಿದೆ ಎಂದು ಹೇಳಲಾಗುತ್ತಿದ್ದು, ಒಟ್ಟಾರೆ ಹೊಸ ಸಂಪುಟದಲ್ಲಿ 20 ಮಂದಿ ಸಚಿವರು ಇರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ, 2 ಹಂತಗಳಲ್ಲಿ ಸಂಪುಟ ರಚನೆಯಾಗುವ ಸಂಭವ ಇದೆ. ಮೊದಲ ಹಂತದಲ್ಲಿ 20ರಿಂದ 25 ಮಂದಿ ಸಂಪುಟ ಸೇರುವ ಸಾಧ್ಯತೆಗಳಿವೆ. 10ರಿಂದ 12 ಸಚಿವರನ್ನು ಕೈಬಿಡಲಿದ್ದು, ಇದರಲ್ಲಿ ಇಬ್ಬರಿಂದ ಮೂವರು ವಲಸಿಗರು ಇರಲಿದ್ದಾರೆ ಎನ್ನಲಾಗಿದೆ.

ಸಮುದಯವಾರು ಹರಿದಾಡುತ್ತಿರುವ ಹೆಸರು:
ಲಿಂಗಾಯತ ಸಮುದಾಯ:

ಅರವಿಂದ ಬೆಲ್ಲದ್
ಬಸನಗೌಡ ಪಾಟೀಲ್ ಯತ್ನಾಳ್
ತಿಪ್ಪಾರೆಡ್ಡಿ
ಮುರುಗೇಶ್ ನಿರಾಣಿ
ಉಮೇಶ್ ಕತ್ತಿ
ಲಕ್ಷ್ಮಣ ಸವದಿ/ಆನಂದ ಮಾಮನಿ
ಜೆ.ಸಿ.ಮಾಧುಸ್ವಾಮಿ/ವೀರಣ್ಣ ಚರಂತಿಮಠ
ಎಸ್.ವಿ.ರವೀಂದ್ರ ನಾಥ್/ಬಿಸಿ ನಾಗೇಶ್

ಒಕ್ಕಲಿಗ ಸಮುದಾಯ:
ಸಿ.ಪಿ.ಯೋಗೇಶ್ವರ್
ಆರ್.ಅಶೋಕ್
ಅಶ್ವಥ್ ನಾರಾಯಣ್
ನಾರಾಯಣಗೌಡ
ಎಸ್.ಟಿ.ಸೋಮಶೇಖರ್
ಡಾ.ಕೆ.ಸುಧಾಕರ್
ಕೆ.ಗೋಪಾಲಯ್ಯ/ಎಸ್.ಆರ್.ವಿಶ್ವನಾಥ್

ಎಸ್​ಸಿ-ಎಸ್​ಟಿ ಸಮುದಾಯ:
ಶ್ರೀರಾಮುಲು
ರಮೇಶ್ ಜಾರಕಿಹೊಳಿ/ಬಾಲಚಂದ್ರ ಜಾರಕಿಹೊಳಿ
ಗೋವಿಂದ ಕಾರಜೋಳ/ಎಂ.ಪಿ.ಕುಮಾರಸ್ವಾಮಿ
ಅರವಿಂದ ಲಿಂಬಾವಳಿ
ಎಸ್.ಅಂಗಾರ
ರಾಜುಗೌಡ/ಶಿವನಗೌಡ ನಾಯಕ್
ಪಿ.ರಾಜೀವ್/ದುರ್ಯೋಧನ ಐಹೊಳೆ

ಹಿಂದುಳಿದ ವರ್ಗ:
ಎಂಟಿಬಿ ನಾಗರಾಜ್
ಭೈರತಿ‌ ಬಸವರಾಜು
ಮುನಿರತ್ನಂ
ಆರ್.ಶಂಕರ್/ಕೆ.ಎಸ್.ಈಶ್ವರಪ್ಪ
ಸುನೀಲ್ ಕುಮಾರ್/ಕುಮಾರ ಬಂಗಾರಪ್ಪ
ಪೂರ್ಣಿಮಾ ಶ್ರೀನಿವಾಸ್

ಇತರೆ ಸಮುದಾಯ:
ಎಸ್.ಸುರೇಶ್ ಕುಮಾರ್
ಡಾ.ರಾಮದಾಸ್
ಆನಂದ್ ಸಿಂಗ್
ಶಿವರಾಂ ಹೆಬ್ಬಾರ್

You May Also Like

error: Content is protected !!