ಕೊರೋನಾ ಹೆಚ್ಚಳ: ವೀಕೆಂಡ್ ಲಾಕ್ ಡೌನ್, ಕರ್ಫ್ಯೂ ಭೂತ..!

ಬೆಂಗಳೂರು: ನಗರದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರು ಯಾವ ಕ್ರಮಬೇಕಾದರೂ ತೆಗೆದುಕೊಳ್ಳಬಹುದು. ಕಂಟೈನ್ಮೆಂಟ್, ಸೀಲ್‍ಡೌನ್, ಕಫ್ರ್ಯೂ ಸೇರಿದಂತೆ ಪರಿಸ್ಥಿತಿಗೆ ಅನುಗುಣವಾಗಿ ಕ್ರಮಜರುಗಿಸಲು ರಾಜ್ಯ ಸರ್ಕಾರ ಅವಕಾಶ ನೀಡಿದೆ.ಈ ಹಿಂದೆ ಕೋವಿಡ್‍ಗೆ ಸಂಬಂಸಿದಂತೆ ಸರ್ಕಾರದ ಆದೇಶವನ್ನು ಬಿಬಿಎಂಪಿ ಪಾಲನೆ ಮಾಡಬೇಕಿತ್ತು. ಸರ್ಕಾರದ ಗಮನಕ್ಕೆ ತಂದು ಕಾರ್ಯನಿರ್ವಹಿಸಬೇಕಿತ್ತು ಹಾಗೂ ಬಿಬಿಎಂಪಿ ಸರ್ಕಾರದ ಆದೇಶಕ್ಕೆ ಕಾಯಬೇಕಿತ್ತು.ಆದರೆ,ಇದೀಗ ಸರ್ಕಾರ ಬಿಬಿಎಂಪಿಗೆ ಸ್ವತಂತ್ರ ಅಕಾರ ನೀಡಿದೆ. ಕೋವಿಡ್ ನಿಯಂತ್ರಣಕ್ಕೆ ಸಂಬಂಸಿದಂತೆ ಯಾವ ಕ್ರಮಬೇಕಾದರೂ ಜಾರಿಗೆ ತರಬಹುದು.

ಕೇರಳ ರಾಜ್ಯದಿಂದ ಬರುವ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಕೇರಳದಿಂದ ಬಂದವರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ. ರಿಪೋರ್ಟ್ ಇಲ್ಲದವರಿಗೆ ಸಿಬ್ಬಂದಿಗಳು ಕೋವಿಡ್ ಟೆಸ್ಟ್ ಮಾಡುತ್ತಿದ್ದಾರೆ. ಕೇರಳ ರಾಜ್ಯದಲ್ಲಿ ಕೊರೊನಾತಂಕ ಹೆಚ್ಚಾದ ಕಾರಣ ಕೇರಳದಿಂದ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ 72 ಗಂಟೆಗಳ ಹಿಂದಿನ ಕೊರೊನಾ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಲಾಗಿದೆ.

ವಿಕೇಂಡ್ ದಿನ ಪಾರ್ಟಿಗಳ ಸಂಖ್ಯೆ ಹೆಚ್ಚಿದ್ದು, ಪಬ್‍ಗಳಿಗೆ ಅನುಮತಿ ಇಲ್ಲದಿದ್ದರು ಓಪನ್ ಆಗಿವೆ. ಹೀಗಾಗಿ ವಿಕೇಂಡ್ ಕಫ್ರ್ಯೂ ಜಾರಿಗೆ ಬಿಬಿಎಂಪಿ ಸರ್ಕಾರಕ್ಕೆ ಮನವಿ ಮಾಡಿದೆ. ಬಿಬಿಎಂಪಿ ಅಕಾರಿಗಳ ಜೊತೆ ಮುಖ್ಯಮಂತ್ರಿಗಳು ಚರ್ಚಿಸಿ ನಂತರ ಆದೇಶ ಹೊರಡಿಸಲಿದ್ದಾರೆ ಎನ್ನಲಾಗಿದೆ.

ಅತೀ ಹೆಚ್ಚು ಸೋಂಕಿತರು ಪತ್ತೆಯಾಗುವ ಪ್ರದೇಶದ ಮಾರುಕಟ್ಟೆ, ಮದುವೆ ಸಮಾರಂಭ, ಚೌಲ್ಟ್ರಿ, ಹೋಟೆಲ್ಸï ಬಂದ್ ಮಾಡಲಾಗುವುದು. ನಗರದಲ್ಲಿ ಮದುವೆ , ಸಭೆ ಸಮಾರಂಭ, ಪಾರ್ಟಿಗಳಲ್ಲಿ ಭಾಗಿಯಾಗುವುದರಿಂದ ಸೋಂಕು ಹೆಚ್ಚು ಹರಡುವ ಸಾಧ್ಯತೆ ಇದೆ.

ಯಾವ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗತ್ತೋ ಅಂತಹ ಪ್ರದೇಶದಲ್ಲಿರುವ ಕಲ್ಯಾಣಮಂಟಪ, ಪಾರ್ಟಿ ಹಾಲï, ಮಾರುಕಟ್ಟೆಗಳನ್ನು 7 ದಿನಗಳ ಕಾಲ ಬಂದ್ ಮಾಡಲು ಬಿಬಿಎಂಪಿ ಪ್ಲಾನ್ ಮಾಡಿದೆ.ಸಾರ್ವಜನಿಕರು ಸಾಮೂಹಿಕವಾಗಿ ಸೇರುವ ಪ್ರದೇಶಗಳನ್ನೂ ನಿರ್ಬಂಧ ಮಾಡಲಾಗುವುದು. ಹೆಚ್ಚು ಸೋಂಕಿತರು ಇರುವ ಪ್ರದೇಶದಲ್ಲಿ 7 ದಿನಗಳ ಕಾಲ ಯಾವುದೇ ಕಾರ್ಯಕ್ರಮಗಳು ನಡೆಸುವಂತಿಲ್ಲ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!