ದಿನ ಭವಿಷ್ಯ ಆಗಸ್ಟ್ 3 ಈ ದಿನ ಈ ರಾಶಿಯವರಿಗೆ ಸ್ಥಿರಾಸ್ತಿ ಖರೀದಿ

*ಇಂದಿನ ಪಂಚಾಂಗ*

03-08-2021 : ಮಂಗಳವಾರ
ಸಂವತ್ಸರ : ಪ್ಲವ ನಾಮ ಸಂವತ್ಸರ
ಆಯನಂ : ದಕ್ಷಿಣಾಯಣ
ಋತು : ಗ್ರೀಷ್ಮ
ಮಾಸ : ಆಷಾಡ ಮಾಸ
ಪಕ್ಷ :  ಕೃಷ್ಣಪಕ್ಷ

ವಾಸರ : ಭೌಮವಾಸರ

ತಿಥಿ: ದಶಮೀ ಮ.12:59 ವರೆಗೆ, ನಂತರ ಏಕಾದಶಿ

ನಕ್ಷತ್ರ:  ರೋಹಿಣಿ ಬುಧವಾರ ಬೆ.1:44 ವರೆಗೆ, ನಂತರ ಮೃಗಶಿರ

ಯೋಗ: ಧ್ರುವ ಬುಧವಾರ ಬೆ.0:06 ವರೆಗೆ, ನಂತರ ವ್ಯಾಘಾತ

ಕರಣ: ವಿಷ್ಟಿ ಮ.12:59 ವರೆಗೆ, ಬವ ಬುಧವಾರ ಬೆ.2:10 ವರೆಗೆ, ನಂತರ ಬಾಲವ

ಅಭಿಜಿತ್ ಮುಹೂರ್ತ: ಮ.12:00 ಇಂದ ಮ.12:51 ವರೆಗೆ

ಅಮೃತಕಾಲ: ರಾ.10:08 ಇಂದ ರಾ.11:56 ವರೆಗೆ

ಸೂರ್ಯ ರಾಶಿ : ಕರ್ಕ

ಚಂದ್ರ ರಾಶಿ :  ವೃಷಭ
———————
ರಾಹುಕಾಲ : 3:00 pm – 4:30 pm
ಗುಳಿಕಕಾಲ : 12:00 pm – 1:30 pm
ಯಮಗಂಡ : 9:00 am – 10:30 am
———————
ಸೂರ್ಯೋದಯ : 06:06 am
ಸೂರ್ಯಾಸ್ತ  : 06:46 pm
ಚಂದ್ರೋದಯ : 02:12 am ಮರುದಿನ
ಚಂದ್ರಾಸ್ಥ  : 02:35 pm
———————-
ದಿನ ವಿಶೇಷ: ಭದ್ರಾ, ರೋಹಿಣಿ ವ್ರತ, ತುಳಸಿದಾಸ ಆರಾಧನೆ
———————–
*॥ಸರ್ವೆಜನಃ ಸುಖಿನೋಭವಂತು॥*

ಮೇಷ
ಆರ್ಥಿಕ ಸಮಸ್ಯೆಗಳು ಪರಿಹಾರ ಕಾಣುವವು. ಚಿನ್ನಾಭರಣ – ಸ್ಥಿರಾಸ್ತಿ ಖರೀದಿ ಸಾಧ್ಯತೆ. ಉದ್ಯೋಗದಲ್ಲಿ ಪ್ರಗತಿ. ಪತ್ನಿಯ ಆರೋಗ್ಯದಲ್ಲಿ ವ್ಯತ್ಯಯ ಸಾಧ್ಯತೆ.

ವೃಷಭ
ಕುಟುಂಬದ ಹಿರಿಯರ ಮನೋಭಿಲಾಷೆಗಳು ಈಡೇರುವವು. ಸಂಗಾತಿಯಿಂದ ಸಹಕಾರ. ಆರ್ಥಿಕವಾಗಿ ಅಭಿವೃದ್ಧಿಯಿಂದಾಗಿ ಸಂತೃಪ್ತಿ.

ಮಿಥುನ
ಶುಭ ಸಮಾರಂಭಗಳಲ್ಲಿ ಭಾಗಿ. ಕೆಲಸ ಕಾರ್ಯಗಳಲ್ಲಿ ಆತುರತೆ ಬೇಡ. ವ್ಯವಹಾರದಲ್ಲಿ ಆರ್ಥಿಕ ನಷ್ಟ ಸಾಧ್ಯತೆ.

ಕಟಕ
ಮಾತಿನಿಂದ ಗೌರವ ಪ್ರಾಪ್ತವಾಗುವುದು. ಸರ್ಕಾರದಿಂದಾಗುವ ಕೆಲಸ ಕಾರ್ಯಗಳು ಸುಗಮವಾಗುವವು.

ಸಿಂಹ
ಮನರಂಜನಾ ಕಾರ್ಯಕ್ರಮದಲ್ಲಿ ಭಾಗಿ. ಪ್ರಿಯ ವ್ಯಕ್ತಿಗಳ ಆಗಮನ. ಮಕ್ಕಳ ಶ್ರೇಯೋಭಿವೃದ್ಧಿಯಿಂದಾಗಿ ಮಾನಸಿಕ ತೃಪ್ತಿ. ಸಂತೋಷದ ವಾತಾವರಣ.

ಕನ್ಯಾ
ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶಗಳು ದೊರಕಲಿದೆ. ಉದ್ಯೋಗದಲ್ಲಿರುವವರಿಗೆ ಪದೋನ್ನತಿ ಅಥವಾ ಬದಲಾವಣೆ.

ತುಲಾ
ಶುಭಕಾರ್ಯಗಳ ಸಂಕಲ್ಪ ಈಡೇರಿ ಸಂತಸ ಮೂಡುವುದು. ಅವಸರದ ನಿರ್ಧಾರಗಳು ಸೂಕ್ತವಲ್ಲ. ಮಹಿಳೆಯರಿಗೆ ಗೌರವ ಪ್ರಾಪ್ತಿ.

ವೃಶ್ಚಿಕ
ಸಾಮಾಜಿಕ ಚಿಂತನೆಗಳಿಂದ ಗೌರವಾದರಗಳನ್ನು ಹೊಂದುವಿರಿ. ಕೃಷಿ ಕ್ಷೇತ್ರದಲ್ಲಿ ಧನ ಧಾನ್ಯಾಭಿವೃದ್ಧಿ ಕಂಡುಬರುವುದು. ಸಂಗಾತಿಯಿಂದ ಸಂತಸದ ಸುದ್ದಿ.

ಧನು
ಸಂಗಾತಿಯ ಸಹಕಾರದಿಂದಾಗಿ ಸಾಂಸಾರಿಕ ನೆಮ್ಮದಿ ದೊರಕುವುದು. ವಿವಾಹ ಸಂಬಂಧಗಳು ಕೂಡಿಬರಲಿವೆ. ಆಪ್ತರ ಆಗಮನ.

ಮಕರ
ಸರ್ಕಾರಿ ನೌಕರಿಯಲ್ಲಿರುವವರಿಗೆ ಬಡ್ತಿ. ಹೊಸ ಯೋಜನೆಯನ್ನು ನಿರೂಪಿಸುವಲ್ಲಿ ಯಶಸ್ಸು.

ಕುಂಭ
ಮನೆಯಲ್ಲಿ ವಸ್ತ್ರಾಭರಣ ಖರೀದಿ ಸಾಧ್ಯತೆ. ಶತ್ರುಬಾಧೆ ಉಲ್ಬಣ ಸಾಧ್ಯತೆ. ಆರೋಗ್ಯದ ಬಗ್ಗೆ ಎಚ್ಚರ.

ಮೀನ
ಸರ್ಕಾರಿ ನೌಕರರಿಗೆ ಕಾರ್ಯಗಳಲ್ಲಿ ಪ್ರಗತಿ ಉಂಟಾಗುವುದು. ಕುಟುಂಬದಲ್ಲಿ ಸೌಹಾರ್ದತೆ ಮೂಡಿ ಸಂತಸ ಮೂಡುವುದು.

You May Also Like

error: Content is protected !!