ಪ್ರೇಮ್ ನಿರ್ದೇಶನದಲ್ಲಿ ಧ್ರುವಾ ಸರ್ಜಾ ಸಿನೆಮಾ

ಚಿತ್ರರಂಗದ ಚಟುವಟಿಕೆಗಳು ಆರಂಭಗೊಳ್ಳುತ್ತಿರುವ ಬೆನ್ನಲ್ಲೇ ಆಕ್ಷ್ಯನ್ ಪ್ರಿನ್ಸ್ ಧ್ರುವ್ ಸರ್ಜಾ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದ್ದು, ಪ್ರೇಮ್ ಮತ್ತು ಧ್ರುವ್ ಸರ್ಜಾ ಹೊಸ ಚಿತ್ರವೊಂದಕ್ಕೆ ಒಂದಾಗುತ್ತಿದ್ದಾರೆ ಸ್ಯಾಂಡಲ್ ವುಡ್ ಕೊರೋನಾ ಅಬ್ಬರಕ್ಕೆ ಸ್ಥಗಿತಗೊಂಡಿದ್ದ ಸಿನಿಮಾ ಚಟುವಟಿಕೆಗಳು ನಿಧಾನಕ್ಕೆ ಆರಂಭವಾಗುತ್ತಿದೆ. .

ಸದ್ಯ ತಮ್ಮ ಬಾಮೈದನಿಗಾಗಿ ಏಕ್ ಲವ್ ಯಾ ಸಿನಿಮಾ ನಿರ್ಮಿಸುತ್ತಿರುವ ನಿರ್ದೇಶಕ ಪ್ರೇಮ್ ಮುಂದಿನ ಸಿನಿಮಾದಲ್ಲಿ ಧ್ರುವ್ ಸರ್ಜಾಗೆ ಆಕ್ಷ್ಯನ್ ಕಟ್ ಹೇಳಲಿದ್ದಾರೆ. ಪ್ರೊಡಕ್ಷನ್ ಹೌಸ್ ವೊಂದು ಸಿನಿಮಾಕ್ಕೆ ಬಂಡವಾಳ ಹೂಡಲಿದೆ.

ಮಾಸ್ ಹಾಗೂ ಕಮರ್ಷಿಯಲ್ ಸಿನಿಮಾ ನಿರ್ಮಾಣಕ್ಕೆ ಪ್ರೇಮ್ ನಿರ್ಧರಿಸಿದ್ದು, ಧ್ರುವ್ ಸರ್ಜಾ ನಾಯಕರಾಗಿ ಮಿಂಚಲಿದ್ದಾರೆ. ಟೈಟಲ್ ಫೈನಲ್ ಆಗಿದ್ದು, ಅಗಸ್ಟ್ ಅಂತ್ಯದ ವೇಳೆ ಪ್ರೇಮ್ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದ್ದಾರಂತೆ.

ಸದ್ಯ ಧ್ರುವ್ ಸರ್ಜಾ ಎಪಿ ಅರ್ಜುನ್ ಸಿನಿಮಾವೊಂದರಲ್ಲಿ ನಟಿಸುತ್ತಿದ್ದು, ಶೂಟಿಂಗ್ ಆರಂಭವಾಗಲಿದೆ. ಈ ಸಿನಿಮಾಗೆ ಅಗಸ್ಟ್ 15 ರಂದು ಮುಹೂರ್ತ ನಡೆಯಲಿದೆ. ಈ ಸಿನಿಮಾದ ಬಳಿಕ ಪ್ರೇಮ್ ಜೊತೆ ಧ್ರುವ್ ಸರ್ಜಾ ನಟಿಸಲಿದ್ದಾರೆ. ಧ್ರುವ್ ಸರ್ಜಾ ಈಗಾಗಲೇ ರಾಘವೇಂದ್ರ್ ಹೆಗಡೆ ಹಾಗೂ ಎ.ಹರ್ಷ ಜೊತೆಗೂ ಸಿನಿಮಾಕ್ಕೆ ಸೈ ಎಂದಿದ್ದಾರೆ.

ತಮ್ಮ ಭಾಮೈದ ರಾಣಾಗಾಗಿ ಏಕ್ ಲವ್ ಯಾ ಸಿನಿಮಾ ನಿರ್ಮಿಸುತ್ತಿರುವ ಪ್ರೇಮ್, ಈ ಚಿತ್ರದ ಗೀತೆಗೆ ಮಂಗ್ಲಿಯವರಿಂದ ಜೀವತುಂಬಿಸಿದ್ದು, ಸಿನಿಮಾ ಗೆಲ್ಲಿಸಲು ಸರ್ಕಸ್ ನಡೆಸಿದ್ದಾರೆ.

You May Also Like

error: Content is protected !!