ಪೂಜನೀಯವಳು

ನನವ್ವ ನೀರೆಯಾಗಿ ನೀರನ್ನು ತರುವಳು
ನನ್ನ ದಾಹವನ್ನು ನೀಗಿಸಿ ನಗಿಸಿ ನಗುವಳು
ಮನಸ್ಸರಳಿಸಿ ಭೂ ಧರೆಯ ಮೇಲೆ ಮೆರೆಯುವಳು
ಮಿತವಾಗಿದೆ ಮನವು ಹಿತವಾಗಿದೆ ತನುವು
ಹಿತ ಮಿತ ಹಿತ ಮಿತ ಹಿತ ಮಿತ ಹಿತ

ಮೋಡ ಕರಗಿ ಹನಿಗಳ ರಾಶಿಯಾಗಿ
ಇಳೆಯಾ ಮೇಲೆ ಮುತ್ತಿನ ಸುರಿಮಳೆಯಾಗಿ
ನನ್ನವ್ವ ಮಲ್ಲಿಗೆ ತೋಟದಲ್ಲಿ ಘಮಿಸುವಳು
ನನ್ನವ್ವ ಹಸಿರ ಕಾನನದಲ್ಲಿ ನರ್ತಿಸುವಳು

ಸಕಲ ಜೀವರಾಶಿಗಳ ಮನವು ತಂಪಿನಲ್ಲಿ ತೋಯ್ದು
ಭೋರ್ಗರೆದು ಬಂದ ನದಿಯಲ್ಲಿ ತನವು ಮೇಯ್ದು
ಸಂತಸದಿಂದ ತುಂಬಿರುವ ತೆನೆಗಳು ಕಂಡು ಸಂಭ್ರಮಿಸುವಳು
ಹರ್ಷೊತ್ಕಾರದಿಂದ ತುಂಬಿರುವ ಬೆಳೆಗಳು ಕಂಡು ಸಂತೈಸುವಳು

ಅಂದದ ಕಟ್ಟೊಯೊಳಗೆ ಹರಿಯುವ ನೀರು ನಿಲ್ಲಿಸುವಳು
ಚೆಂದದ ಮನೆಯೊಳಗೆ ನೀರು ಬಳಕೆಯಾಗುವಂತೆ ಮಾಡುವಳು
ಸಿಹಿ ಮಾತಿನಿಂದ ಹಿತವನ್ನು ಆರೈಸುವ ನೀರಾಕೆಯಿವಳು
ಈ ಅನುರಾಗ ನೆಲದ ಜಲವಾಗಿರುವ ಜೀವಂತ ಪೂಜನೀಯಿವಳು
ಮಿತವಾಗಿದೆ ಮನವು ಹಿತವಾಗಿದೆ ತನುವು
ಹಿತ ಮಿತ ಹಿತ ಮಿತ ಹಿತ ಮಿತ ಹಿತ

ಅನುರಾಗ್ ಭೀಮಸಂದ್ರ
ರಂ.ಅ.ಕೇ (ಡ್ರಾಮಾ ಡಿಪ್ಲೋಮಾ) ಬಿಎ
ರಂಗಭೂಮಿ ಕಲಾವಿದ
ಭೀಮಸಂದ್ರ, ತುಮಕೂರು

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!