BIG BREAKING : ಇಂದು ನೂತನ ಸಚಿವರ ಪ್ರಮಾಣವಚನ ಫಿಕ್ಸ್ : ಸಂಪುಟಕ್ಕೆ ಸೇರಲಿರುವ ಸಂಭಾವ್ಯ ಸಚಿವರ ಪಟ್ಟಿ

ಬೆಂಗಳೂರು : ಅಂತೂ ಇಂತು ನೂತನ ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ರಚನೆಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಇಂದು ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ಈ ಮೂಲಕ ಸಿಎಂ ಬೊಮ್ನಾಯಿ ಸಂಪುಟಕ್ಕೆ ನೂತನ ಸಚಿವರು ಸೇರ್ಪಡೆಗೊಳ್ಳಲಿದ್ದಾರೆ.

ದೆಹಲಿಗೆ ತೆರಳಿದ್ದಂತ ಸಿಎಂ ಬಸವರಾಜ ಬೊಮ್ಮಾಯಿ ಇಂದು ಬೆಂಗಳೂರಿಗೆ ವಾಪಾಸ್ ಆಗಲಿದ್ದಾರೆ. ಇಂತಹ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ನೂತನ ಸಚಿವ ಸಂಪುಟ ರಚನೆಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಇದರ ಜೊತೆಗೆ ಸಂಪುಟ ರಚನೆಗೆ ಮೂರು ಸೂತ್ರಗಳನ್ನು ನೀಡಿದೆ. ಅದೆಂದರೇ, ಪ್ರಾದೇಶಿಕ ಸಮತೋಲನ, ಜಾತಿವಾರು ಪ್ರಾತಿನಿಧ್ಯತೆ, ಹೊಸಬರಿಗೆ ಆದ್ಯತೆ ನೀಡೋದಕ್ಕೆ ತಿಳಿಸಿದೆ.

ಈ ಕುರಿತಂತೆ ಸುದ್ದಿಗಾರರೊಂದಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿಯವರು, ದೆಹಲಿಯಿಂದ ಬೆಂಗಳೂರಿಗೆ ಹೊರಡಲಿದ್ದೇನೆ. ಇನ್ನೊಂದು ಎರಡು ಹೆಸರುಗಳನ್ನು ಆಡ್ ಮಾಡೋದು ಬಾಕಿ ಇದೆ. ಡಿಸಿಎಂ ಲೀಸ್ಟ್ ಫೈನಲ್ ಆಗಿಲ್ಲ. ಎಲ್ಲಾ ರೆಡಿ ಆದರೆ ಇಂದು ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ ಎಂದರು.

ಈ ಬಗ್ಗೆ ಮಾತನಾಡಿರುವಂತ ಬಿ.ಸಿ.ಪಾಟೀಲ್, ಸಿಎಂ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಇಂದು ಸಚಿವನಾಗಿ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದೇನೆ. ಎಂದಿನಂತೆ ನಿಮ್ಮ ಸಹಕಾರ ಕ್ಷೇತ್ರದ ಜನತೆಯ ಆಶೀರ್ವಾದ ಇರಲಿ ಎಂಬುದಾಗಿ ತಿಳಿಸಿದ್ದಾರೆ.

ಹಾಗಾದರೆ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಯಾರು ಇನ್.? ಯಾರು ಔಟ್.? ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ

ಸಂಪುಟಕ್ಕೆ ಸೇರುವ ಸಂಭವನೀಯ ಸಚಿವರ ಪಟ್ಟಿ

1 ಆರ್ – ಅಶೋಕ್
2 ಡಾ.ಅಶ್ವಥ್ ನಾರಾಯಣ
3 ಬೈರತಿ ಬಸವರಾಜು
4 ಎಸ್.ಟಿ.ಸೋಮಶೇಖರ್
5 ಮುನಿರತ್ನ
6 ಡಾ.ಕೆ ಸುಧಾಕರ್
7 ಶ್ರೀರಾಮುಲು
8 ಜೆ.ಸಿ.ಮಾಧುಸ್ವಾಮಿ
9 ಪೂರ್ಣಿಮಾ ಶ್ರೀನಿವಾಸ್
10 ಉಮೇಶ್ ಕತ್ತಿ
11 ರಾಜುಗೌಡ ನಾಯಕ್
12 ಬಿ.ಸಿ.ಪಾಟೀಲ್
13 ಅರವಿಂದ್ ಬೆಲ್ಲದ್ ಅಥವಾ ಶಂಕರ್ ಪಾಟೀಲ್ ಮುನೇನಕೊಪ್ಪ
14 ರೇಣುಕಾಚಾರ್ಯ ಅಥವಾ ಮಾಡಾಳ್ ವಿರೂಪಾಕ್ಷಪ್ಪ
15 ಆನಂದ್ ಸಿಂಗ್
16ಬಿ.ವೈ.ವಿಜೇಯೇಂದ್ರ
17 ಎಂ.ಪಿ.ಕುಮಾರಸ್ವಾಮಿ
18 ವಿ.ಸುನಿಲ್ ಕುಮಾರ್
19 ಎಸ್ ಅಂಗಾರ
20 ದತ್ತಾತ್ರೇಯ ಪಾಟೀಲ್ ರೇವೂರ
21 ಬಾಲಚಂದ್ರ ಜಾರಕಿಹೊಳಿ
22 ಈಶ್ವರಪ್ಪ ಅಥವಾ ಅರಗ ಜ್ಞಾನೇಂದ್ರ
23 ಕೆ.ಗೋಪಾಲಯ್ಯ
24 ಕೆ.ನಾರಾಯಣಗೌಡ
25 ಶಿವರಾಂ ಹೆಬ್ಬಾರ್ ಅಥವಾ ವಿಶ್ವೇಶ್ವರ ಹೆಗಡೆ ಕಾಗೇರಿ
26 ಮುರುಗೇಶ್ ನಿರಾಣಿ

ಸಂಪುಟದಿಂದ ಯಾರಿಗೆ ಔಟ್.?

ಗೋವಿಂದ ಕಾರಜೋಳ
ಈಶ್ವರಪ್ಪ
ಸೋಮಣ್ಣ
ಸುರೇಶ್ ಕುಮಾರ್
ಕೋಟಾ ಶ್ರೀನಿವಾಸ ಪೂಜಾರಿ
ಶಶಿಕಲಾ ಜೊಲ್ಲೆ
ಪ್ರಭು ಚೌಹ್ವಾಣ್
ಸಿ.ಸಿ.ಪಾಟೀಲ್
ಲಕ್ಷ್ಮಣ್ ಸವಧಿ
ಶ್ರೀಮಂತ ಪಾಟೀಲ್

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!