ಬಾಕ್ಸಿಂಗ್ ​ನಲ್ಲಿ ಕಂಚು ಗೆದ್ದ ಲವ್ಲೀನಾ

ಟೋಕಿಯೋ : ಬಾಕ್ಸಿಂಗ್ ​ನಲ್ಲಿ ಕಂಚು ಗೆದ್ದ ಲವ್ಲೀನಾ ಭಾರತದ ಹೆಮ್ಮೆಯ ಬಾಕ್ಸರ್ ಲವ್ಲೀನಾ ಬೋರ್ಗೊಹೈನ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚು ಪದಕ ಗೆದ್ದಿದ್ದಾರೆ. ಈ ಸಾಧನೆಯೊಂದಿಗೆ ಭಾರತದ ಪದಕಗಳ ಸಂಖ್ಯೆ ಮೂರಕ್ಕೇರಿದೆ. ಇಂದು ನಡೆದ ಮಹಿಳೆಯರ ಬಾಕ್ಸಿಂಗ್​ ವೆಲ್ಟರ್ ​​ವೇಯ್ಟ್ ಕ್ಯಾಟಗರಿ ಸೆಮಿಫೈನಲ್ಸ್ ಪಂದ್ಯದಲ್ಲಿ ಭಾರತದ ಲವ್ಲೀನಾ ಬೊರ್ಗೊಹೈನ್ ಪರಾಜಯ ಅನುಭವಿಸಿದರೂ, ಭಾರತಕ್ಕೆ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಇದು ಬಾಕ್ಸಿಂಗ್ ಕ್ಷೇತ್ರದಲ್ಲಿ ಭಾರತಕ್ಕೆ ಲಭಿಸಿರುವ ಈವರೆಗಿನ ಮೂರನೇ ಪದಕವಾಗಿದ್ದು, ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಒಟ್ಟಾರೆಯಾಗಿ ಲಭಿಸಿರುವ ಮೂರನೇ ಪದಕ ಕೂಡ ಆಗಿದೆ. ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮಹಿಳೆಯರ ವೆಲ್ಟರ್ ವೇಟ್ (69ಕೆಜಿ)ವಿಭಾಗದ ಸೆಮಿ ಫೈನಲ್ ನಲ್ಲಿ ಭಾರತದ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್ ಸೋಲನುಭವಿಸಿದರು. ಆದ್ರೆ ಕಂಚಿನ ಪದಕ ಗೆದ್ದು ಕೊಟ್ಟಿದ್ದಾರೆ.. ಜುಲೈ 30 ರಂದು ನಡೆದ ಕ್ವಾರ್ಟರ್​ ಫೈನಲ್ಸ್​ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಚೀನಾದ ಚೆನ್ ನೈನ್-ಚಿನ್ ಅವರನ್ನು 4:1 ಸ್ಕೋರ್​ನಿಂದ ಮಣಿಸಿ, ಸೆಮಿಫೈನಲ್ಸ್​ ತಲುಪಿದ್ದರು.

ಇಂದು ಟೋಕಿಯೋದ ಕೋಕುಗಿಕಾನ್ ಅರೆನಾದಲ್ಲಿ ನಡೆದ ಸೆಮಿಫೈನಲ್ಸ್​ನಲ್ಲಿ ವರ್ಲ್ಡ್​ ಚ್ಯಾಂಪಿಯನ್ ಆದ ಟರ್ಕಿಯ ಬುಸೆನಾಜ್ ಸೂರ್ಮೆನೆಲಿ ಅವರನ್ನು ಎದುರಿಸಿದ ಲವ್ಲೀನಾ, 0:5 ಸ್ಕೋರ್​ನೊಂದಿಗೆ ಸೋಲನುಭವಿಸಿದರು. ಲವ್ಲೀನಾ ಅವರು ಅಂತಿಮ -16ರ ಸುತ್ತಿನಲ್ಲಿ ಜರ್ಮನಿಯ ನದಿನ್ ಅಪೆಟ್ಜ್ ಅವರನ್ನು ಸೋಲಿಸಿ ಗಮನ ಸೆಳೆದಿದ್ದರು. ಕ್ವಾರ್ಟರ್ ಫೈನಲ್ ನಲ್ಲಿ ಚೈನೀಸ್ ತೈಪೆಯ ನೀನ್ ಚಿನ್ ಚೆನ್ ಅವರನ್ನು 4-1ರಿಂದ ಸೋಲಿಸಿ ಸೆಮಿ ಫೈನಲ್ ತಲುಪಿದ್ದರು. ಈಗಾಗಲೇ ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಮತ್ತು ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ.ಸಿಂಧು ಕಂಚು ಪದಕ ಗೆದ್ದಿದ್ದಾರೆ. ಈಗ ಮೂರನೇ ಪದಕಕ್ಕೆ ಮುತ್ತಿಟ್ಟಿರುವುದು ಸಹ ಮಹಿಳಾ ಕ್ರೀಡಾ ಪಟು.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!