ದಿನ ಭವಿಷ್ಯ ಆಗಸ್ಟ್ 5 ಈ ದಿನ ಈ ಒಂದು ರಾಶಿಯವರಿಗೆ ವಿದೇಶದಿಂದ ಸಿಹಿ ಸುದ್ದಿ

*ಇಂದಿನ ಪಂಚಾಂಗ*

ಗುರುವಾರ-ಆಗಸ್ಟ್ -5,2021
ಸಂವತ್ಸರ : ಪ್ಲವ ನಾಮ ಸಂವತ್ಸರ
ಆಯನಂ : ದಕ್ಷಿಣಾಯಣ
ಋತು : ಗ್ರೀಷ್ಮ
ಮಾಸ : ಆಷಾಡ ಮಾಸ
ಪಕ್ಷ :  ಕೃಷ್ಣಪಕ್ಷ

ವಾಸರ : ಬೃಹಸ್ಪತಿವಾಸರ

ತಿಥಿ: ದ್ವಾದಶೀ ಸಂ.5:08 ವರೆಗೆ, ನಂತರ ತ್ರಯೋದಶಿ

ನಕ್ಷತ್ರ:  ಆರಿದ್ರ ಪೂರ್ಣ ರಾತ್ರಿ ವರೆಗೆ

ಯೋಗ: ಹರ್ಷಣ ಶುಕ್ರವಾರ ಬೆ.1:14 ವರೆಗೆ, ನಂತರ ವಜ್ರ

ಕರಣ: ತೈತಲೆ ಸಂ.5:08 ವರೆಗೆ, ಗರಜ ಶುಕ್ರವಾರ ಬೆ.5:52 ವರೆಗೆ, ನಂತರ ವಣಿಜ

ಅಭಿಜಿತ್ ಮುಹೂರ್ತ: ಮ.12:00 ಇಂದ ಮ.12:51 ವರೆಗೆ

ಅಮೃತಕಾಲ: ರಾ.7:42 ಇಂದ ರಾ.9:27 ವರೆಗೆ

ಸೂರ್ಯ ರಾಶಿ : ಕರ್ಕ

ಚಂದ್ರ ರಾಶಿ : ಮಿಥುನ
———————
ರಾಹುಕಾಲ : 1:30 pm – 3:00 pm
ಗುಳಿಕಕಾಲ : 9:00 am – 10:30 am
ಯಮಗಂಡ : 6:00 am – 7:30 am
———————
ಸೂರ್ಯೋದಯ : 06:06 am
ಸೂರ್ಯಾಸ್ತ  : 06:45 pm
ಚಂದ್ರೋದಯ : 03:52 am ಮರುದಿನ
ಚಂದ್ರಾಸ್ಥ  : 04:19 pm
———————-
ದಿನ ವಿಶೇಷ: ಕಾಮಿಕಾ ಏಕಾದಶಿ ಪಾರಣ, ಪ್ರದೋಷ ವ್ರತ
———————–
*॥ಸರ್ವೆಜನಃ ಸುಖಿನೋಭವಂತು॥*

ಮೇಷ
ವೈಯಕ್ತಿಕ ಜೀವನದಲ್ಲಿ ಅಭಿವೃದ್ಧಿ. ದಾಂಪತ್ಯ ಸಮಸ್ಯೆಗಳಿಗೆ ಪರಿಹಾರ ದೊರೆತು ನೆಮ್ಮದಿ.

ವೃಷಭ
ಸಹೋದರರಿಂದ ಸಲಹೆ, ಸಹಕಾರ ದೊರಕಿ ಗೃಹ ನಿರ್ಮಾಣ ಕಾರ್ಯಗಳಲ್ಲಿ ಪ್ರಗತಿ. ವಿದೇಶದಿಂದ ಪ್ರಮುಖ ಸುದ್ದಿಯೊಂದು ಬರುವ ಸಾಧ್ಯತೆ ಇದೆ.

ಮಿಥುನ
ಪ್ರಾಪ್ತವಯಸ್ಕರಿಗೆ ಉತ್ತಮ ಸಂಬಂಧಗಳು ದೊರಕುವ ಸಾಧ್ಯತೆ. ಗೃಹ ನಿರ್ಮಾಣ ಕಾರ್ಯಗಳಲ್ಲಿ ಸ್ವಲ್ಪಮಟ್ಟಿನ ತೊಡಕು. ಮಕ್ಕಳಿಂದ ಶುಭ ವಾರ್ತೆ.

ಕಟಕ
ಹಿರಿಯರ ಸಲಹೆ ಸೂಚನೆಗಳನ್ನು ನಿರ್ಲಕ್ಷಿಸದಿರಿ. ಯಾವುದೇ ಕೆಲಸ ಕಾರ್ಯಗಳಲ್ಲಿ ಆತುರತೆ ತೋರಿ ಗಂಡಾಂತರಕ್ಕೆ ಸಿಲುಕದಿರಿ. ಹಿತಶತ್ರುಗಳಿಂದ ಸಮಸ್ಯೆ.

ಸಿಂಹ
ನ್ಯಾಯಾಲಯದಲ್ಲಿ ಜಯ. ಚಿನ್ನ ಮುಂತಾದ ಹಳದಿ ಲೋಹ ವ್ಯಾಪಾರಿಗಳಿಗೆ ಉತ್ತಮ ಲಾಭದ ನಿರೀಕ್ಷೆ. ಕುಟುಂಬ ಸದಸ್ಯರಿಂದ ಉತ್ತಮ ಸಹಕಾರ.

ಕನ್ಯಾ
ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಮಕ್ಕಳಿಂದ ನೆಮ್ಮದಿ. ವಿದ್ಯಾಭ್ಯಾಸದಲ್ಲಿ ಉತ್ತಮ ಶ್ರದ್ಧೆಯಿಂದ ಸಫಲತೆ.

ತುಲಾ
ವೃತ್ತಿ ಸಮಸ್ಯೆಗಳಿಂದ ಪರಿಹಾರ. ಕಲಾವಿದರಿಗೆ ಉತ್ತಮ ಅವಕಾಶ ದೊರೆತು ಗೌರವಾದರಗಳು ಪ್ರಾಪ್ತವಾಗುವವು. ವಿವಾದಾತ್ಮಕ ಸಮಸ್ಯೆಗಳಿಂದ ಮುಕ್ತರಾಗುವಿರಿ.

ವೃಶ್ಚಿಕ
ಆರೋಗ್ಯದಲ್ಲಿ ಏರುಪೇರಾಗುವ ಸಂಭವ ಇರುವುದರಿಂದ ವೈದ್ಯರ ಸಲಹೆ ಅತ್ಯಗತ್ಯ. ಅನಾವಶ್ಯಕ ವ್ಯವಹಾರಕ್ಕೆ ತಲೆಹಾಕದಿರುವುದು ಉತ್ತಮ.

ಧನು
ನೆರೆಹೊರೆಯವರೊಂದಿಗೆ ಕಲಹ ಸಂಭವವಿದ್ದು ಸಮಾಧಾನದ ನಡವಳಿಕೆ ಅಗತ್ಯ. ಮಕ್ಕಳಿಂದ ನೆಮ್ಮದಿ ಸೌಖ್ಯ. ವಿವಾಹಾಕಾಂಕ್ಷಿಗಳಿಗೆ ವಿವಾಹ ಯೋಗ.

ಮಕರ
ನಿಷ್ಠೆ, ಪ್ರಾಮಾಣಿಕತೆಯಿಂದಾಗಿ ಯಶಸ್ಸು ಮತ್ತು ಪ್ರಶಂಸೆ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ. ಮೇಲಧಿಕಾರಿಗಳಿಂದ ಪ್ರಶಂಸೆ. ವ್ಯಾಪಾರಿಗಳಿಗೆ ಉದ್ಯಮದಲ್ಲಿ ಪ್ರಗತಿ.

ಕುಂಭ
ಕುಲದೇವತಾ ದರ್ಶನ ಲಭ್ಯ. ಋಣ ಪರಿಹಾರದಿಂದ ಸಂತೃಪ್ತಿ. ಆಸ್ತಿ ಅಥವಾ ಚಿನ್ನಾಭರಣಗಳನ್ನು ಖರೀದಿಸುವ ಸಾಧ್ಯತೆ. ವೃತ್ತಿಯಲ್ಲಿನ ಸಮಸ್ಯೆಗಳು ನಿವಾರಣೆ.

ಮೀನ
. ಆಧ್ಯಾತ್ಮಿಕ ಜೀವನದಲ್ಲಿ ಸಂತೃಪ್ತಿ. ವಿಶೇಷ ವ್ಯವಹಾರಗಳಲ್ಲಿ ಅಗತ್ಯ ಪ್ರೋತ್ಸಾಹಗಳು ದೊರಕುವುದು. ಸಹೋದರರಿಂದ ಸಹಕಾರ

You May Also Like

error: Content is protected !!