ಸರ್ಕಾರಿ ಗೌರವಗಳೊಂದಿಗೆ ಹುತಾತ್ಮ ಯೋಧನ ಅಂತ್ಯ ಸಂಸ್ಕಾರ

ಕಲಬುರಗಿ : ಉಗ್ರರೊಂದಿಗೆ ತ್ರಿಪುರಾದ ಧಲಾಯ್ ನಲ್ಲಿ ನಡೆದ ಕಾಳಗದಲ್ಲಿ ಹುತಾತ್ಮರಾಗಿದ್ದ ರಾಜ್ಯದ ಬಿಎಸ್ ಎಫ್ ಯೋಧ ರಾಜ್ ಕುಮಾರ್ ಎಂ.ಮವಿನ್ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.

ಆಳಂದ ತಾಲೂಕಿನ ಚಿಂಚನಸೂರು ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿದೆ. ಆ.5ರ ಮಧ್ಯಾಹ್ನದ ವರೆಗೂ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಕಲಬುರಗಿ – ಗ್ರಾಮೀಣ ಭಾಗದ ಶಾಸಕ ಬಸವರಾಜ ಮತ್ತಿಮಡು ಹುತಾತ್ಮ ಯೋಧನಿಗೆ ಗೌರವ ನಮನ ಸಲ್ಲಿಸಿ, ರಾಜ್ ಕುಮಾರ್ ಮಾವಿನ್ ಅವರ ಪುತ್ಥಳಿ ನಿರ್ಮಾಣಕ್ಕೆ ಸಂಪೂರ್ಣ ವೆಚ್ಚ ಭರಿಸುವುದಾಗಿ ಭರವಸೆ ನೀಡಿದ್ದಾರೆ.

ಹುತಾತ್ಮ ಯೋಧನಿಗೆ ಸರ್ಕಾರಿ ಗೌರವ ಸಲ್ಲಿಸುವುದಕ್ಕಾಗಿ ಪೊಲೀಸರು 3 ಸುತ್ತಿನ ಗುಂಡು ಹಾರಿಸಿದರು. ಡಿಸಿ ವಿ.ವಿ ಜ್ಯೋತ್ಸ್ನಾ, ಎಸ್ ಪಿ ಸಿಮಿ ಮರಿಯನ್ ಜಾರ್ಜ್, ಬಿಎಸ್ಎಫ್ ನ ಹಿರಿಯ ಅಧಿಕಾರಿಗಳು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.
ಬೌದ್ಧ ಧಾರ್ಮಿಕ ಪದ್ಧತಿಯಂತೆ ಅಂತ್ಯಕ್ರಿಯೆ ನಡೆದಿದೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!