ದಿನ ಭವಿಷ್ಯ ಆಗಸ್ಟ್ 6 ಈದಿನ ಈ ನಾಲ್ಕು ರಾಶಿಯವರಿಗೆ ಮುಟ್ಟಿದೆಲ್ಲ ಚಿನ್ನ

*ಇಂದಿನ ಪಂಚಾಂಗ*

ಶುಕ್ರವಾರ-ಆಗಸ್ಟ್ -6,2021
ಸಂವತ್ಸರ : ಪ್ಲವ ನಾಮ ಸಂವತ್ಸರ
ಆಯನಂ : ದಕ್ಷಿಣಾಯಣ
ಋತು : ಗ್ರೀಷ್ಮ
ಮಾಸ : ಆಷಾಡ ಮಾಸ
ಪಕ್ಷ :  ಕೃಷ್ಣಪಕ್ಷ

ವಾಸರ : ಭಾರ್ಗವವಾಸರ

ತಿಥಿ: ತ್ರಯೋದಶೀ ಸಂ.6:28 ವರೆಗೆ, ನಂತರ ಚತುರ್ದಶಿ

ನಕ್ಷತ್ರ:  ಆರಿದ್ರ ಬೆ.6:38 ವರೆಗೆ, ನಂತರ ಪುನರ್ವಸು

ಯೋಗ: ವಜ್ರ ಶನಿವಾರ ಬೆ.1:10 ವರೆಗೆ, ನಂತರ ಸಿದ್ಧಿ

ಕರಣ: ವಣಿಜ ಸಂ.6:27 ವರೆಗೆ, ವಿಷ್ಟಿ ಪೂರ್ಣ ರಾತ್ರಿ ವರೆಗೆ

ಅಭಿಜಿತ್ ಮುಹೂರ್ತ: ಮ.12:00 ಇಂದ ಮ.12:51 ವರೆಗೆ

ಅಮೃತಕಾಲ: ಶನಿವಾರ ಬೆ.5:42 ಇಂದ ಶನಿವಾರ ಬೆ.7:25 ವರೆಗೆ

ಸೂರ್ಯ ರಾಶಿ : ಕರ್ಕ

ಚಂದ್ರ ರಾಶಿ : ಮಿಥುನ ಮರುದಿನ ಬೆ.01:55, ನಂತರ ಕರ್ಕ
———————
ರಾಹುಕಾಲ : 10:30 am – 12:00 pm
ಗುಳಿಕಕಾಲ : 7:30 am – 9:00 am
ಯಮಗಂಡ : 3:00 pm – 4:30 pm
———————
ಸೂರ್ಯೋದಯ : 06:06 am
ಸೂರ್ಯಾಸ್ತ  : 06:45 pm
ಚಂದ್ರೋದಯ : 04:46 am ಮರುದಿನ
ಚಂದ್ರಾಸ್ಥ  : 05:11 pm
———————-
ದಿನ ವಿಶೇಷ: ಸಾವನ ಶಿವರಾತ್ರಿ,ಮಾಸಿಕ ಶಿವರಾತ್ರಿ, ಪ್ರದೋಷ
———————–
*॥ಸರ್ವೆಜನಃ ಸುಖಿನೋಭವಂತು॥*

ಮೇಷ
ಸಂಕಷ್ಟಗಳು ಕಡಿಮೆಯಾಗಿ ಕೆಲಸ–ಕಾರ್ಯಗಳು ಸುಗಮ ಚಾಲನೆ ಪಡೆದುಕೊಳ್ಳುವವು. ಸಿಟ್ಟು ಸೆಡವುಗಳಿಂದಾಗಿ ತೊಂದರೆ. ಅನಿರೀಕ್ಷಿತ ಅನಾವಶ್ಯಕ ಖರ್ಚು ಸಂಭವಿಸುವವು. ಆರೋಗ್ಯದಲ್ಲಿ ಸುಧಾರಣೆ.

ವೃಷಭ
ಉದರಶೂಲೆ ಮುಂತಾದ ಉದರ ಸಂಬಂಧಿ ಸಣ್ಣಪುಟ್ಟ ತೊಂದರೆ ಬರಬಹುದು. ಹೊಸ ಕಾರ್ಯಯೋಜನೆ ಪ್ರಾರಂಭಿಸದಿರುವುದೇ ಒಳ್ಳೆಯದು.

ಮಿಥುನ
ಬಹುದಿನಗಳ ಸಮಸ್ಯೆಯಿಂದ ಪರಿಹಾರ ದೊರೆತು ನೆಮ್ಮದಿ. ಬಂಧುಗಳ ಆಗಮನವನ್ನು ನಿರೀಕ್ಷಿಸಿ.

ಕಟಕ
ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದ್ದು ಜಾಗೃತೆ ವಹಿಸಿ. ಅನಾವಶ್ಯಕ ದಂಡ ತೆರಬೇಕಾದಿತು.

ಸಿಂಹ
ಆದಾಯದಲ್ಲಿ ಹೆಚ್ಚಳ ಕಂಡುಬಂದು ಪರಿಸ್ಥಿತಿ ಸುಧಾರಿಸುವುದು. ವಾಹನ ಖರೀದಿ ಭಾಗ್ಯ. ಉದ್ಯೋಗ ಕ್ಷೇತ್ರದಲ್ಲಿ ಗೌರವಾದರಗಳು ಸಿಗಲಿವೆ.

ಕನ್ಯಾ
ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಖರ್ಚು. ನಿಮ್ಮ ಉತ್ತಮ ನಡುವಳಿಕೆಯಿಂದಾಗಿ ಗೌರವಾದರ. ಆರೋಗ್ಯ ವೃದ್ಧಿ ನೆಮ್ಮದಿಯ ಜೀವನ.

ತುಲಾ
ವೃಥಾ ವೈಮನಸ್ಸು. ಆರ್ಥಿಕ ವಿಷಯದಲ್ಲಿ ಯಥಾಸ್ಥಿತಿ ಮುಂದುವರೆದು, ಕೆಲಸ ಕಾರ್ಯಗಳಲ್ಲಿ ಉತ್ಸಾಹ.

ವೃಶ್ಚಿಕ
ಉದ್ಯೋಗ ಅಥವಾ ವಾಸದ ಸ್ಥಾನ ಪಲ್ಲಟವಾಗುವ ಸಾಧ್ಯತೆ. ಉತ್ತಮ ಸ್ಥಾನ ದೊರಕುವುದು.

ಧನು
ನೌಕರಿಯ ವಿಷಯದಲ್ಲಿ ಉನ್ನತ ಸ್ಥಾನ ಅಥವಾ ಬದಲಾವಣೆ ಕಂಡುಬರುವುದು. ಆರ್ಥಿಕ ಅನುಕೂಲತೆ ಉತ್ತಮಗೊಳ್ಳುವುದು. ಮಕ್ಕಳಿಂದ ಸಂತಸ.

ಮಕರ
ಮಾನಸಿಕ ಚಂಚಲತೆಯುಂಟಾಗಿ ದುಸ್ವಪ್ನಗಳು ಉಂಟಾಗಬಹುದು. ಮನೆಯವರ ಆರೋಗ್ಯದೆಡೆಗೆ ಹೆಚ್ಚಿನ ಗಮನ ಅಗತ್ಯ.

ಕುಂಭ
ಉದ್ಯೋಗದಲ್ಲಿ ಹೆಚ್ಚಿನ ಒತ್ತಡ. ಆಹಾರದಲ್ಲಿನ ವ್ಯತ್ಯದಿಂದಾಗಿ ಅಜೀರ್ಣ ಸಂಬಂಧಿ ರೋಗಗಳು ಕಂಡುಬರಬಹುದು.

ಮೀನ
ಉಳಿತಾಯದಲ್ಲಿ ಪ್ರಗತಿ. ಆರೋಗ್ಯದಲ್ಲಿ ಸುಧಾರಣೆ. ಸಂತಾನ ಭಾಗ್ಯ ಪ್ರಾಪ್ತಿ. ನಿಂತುಹೋದ ಯೋಜನೆಗಳು ಪುನರಾರಂಭಗೊಳ್ಳುವವು.

You May Also Like

error: Content is protected !!