ಒಂದೇ ಮನೆಯಲ್ಲಿದ್ದರು ಪತ್ನಿ-ಪತಿ ಸ್ನೇಹಿತ! ಬಯಲಾಯ್ತು ಚೆಂದುಳ್ಳಿ ಚೆಲುವೆಯ ಅಸಲಿ ಮುಖ

ಬೆಂಗಳೂರು: ಆಟೋ ಚಾಲಕನ ಕೊಲೆ ಪ್ರಕರಣವನ್ನು ಬೇಧಿಸಿರುವ ಕೆಜಿ ನಗರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಆಟೋ ಚಾಲಕನ ಪತ್ನಿ ಮತ್ತವಳ ಪ್ರಿಯಕರ ಸೇರಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಮಂಡ್ಯ ಮೂಲದ ಕೆಆರ್ ಪೇಟೆ ಮೂಲದ ಸಂಜು ಮತ್ತು ಆತನ ಸಂಬಂಧಿ ಹಾಸನ ಜಿಲ್ಲೆ ಅರಕಲಗೂಡು ನಿವಾಸಿ ಸುಬ್ರಮಣ್ಯ ಬಂಧಿತ ಆರೋಪಿಗಳು. ಕೊಲೆಯಾದ ಕಾರ್ತಿಕ್ ಪತ್ನಿ ರಂಜಿತಾ ತಲೆ ಮರೆಸಿಕೊಂಡಿದ್ದಾಳೆ. ಕಾರ್ತಿಕ್ ಮದ್ದೂರು ತಾಲೂಕಿನವರಾಗಿದ್ದು, ಶ್ರೀನಗರ ಸಮೀಪದ ಬೃಂದಾವನ ನಗರದಲ್ಲಿ ವಾಸವಿದ್ದರು.

ಕಾರ್ತಿಕ್ ಮತ್ತು ರಂಜಿತಾ 2016 ರಲ್ಲಿ ಮದುವೆಯಾಗಿದ್ದರು. ಆತನ ಆಪ್ತ ಸ್ನೇಹಿತನಾಗಿದ್ದ ಸಂಜು ಕೂಡ ಆಟೋ ಚಾಲಕನಾಗಿದ್ದು ದಂಪತಿ ಜೊತೆಯಲ್ಲಿಯೇ ವಾಸವಿದ್ದ. ಕಾರ್ತಿಕ್ ಮತ್ತು ಸಂಜು ಒಂದೇ ಆಟೋವನ್ನು ಓಡಿಸುತ್ತಿದ್ದರು. ಕಾರ್ತಿಕ್ ರಾತ್ರಿ ಶಿಫ್ಟ್ ಮಾಡುತ್ತಿದ್ದ. ಜುಲೈ 29 ರ ರಾತ್ರಿ ಮನೆಯಿಂದ ತೆರಳಿದ ಕಾರ್ತಿಕ್ ವಾಪಸ್ ಬಂದಿರಲಿಲ್ಲ. ಆಗಸ್ಚ್ 1 ರಂದು ಆತನ ಪತ್ನಿ ರಂಜಿತಾ ಕೆಜಿ ನಗರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಿಸಿದ್ದರು.

ರಂಜಿತಾ ಮತ್ತು ಸಂಜು ಅನೈತಿಕ ಸಂಬಂಧ ಹೊಂದಿದ್ದರು, ಇವರ ಸಂಬಂಧಕ್ಕೆ ಕಾರ್ತಿಕ್ ಅಡ್ಡಿ ಆಗಬಹುದೆಂದು ತಿಳಿದು ಕೊಲೆಗೆ ಸ್ಕೆಚ್ ಹಾಕಿ. ಜುಲೈ 29 ರಂದು ಕಾರ್ತಿಕ್ ನನ್ನ ಆರೋಪಿ ಸಂಜೀವ್, ಸುಬ್ರಮಣ್ಯ ಇಬ್ಬರು ಸೇರಿ ಚನ್ನಪಟ್ಟಣ ಕಡೆ ಕರೆದುಕೊಂಡು ಹೋಗಿದ್ದಾರೆ. ದಾರಿ ಮಧ್ಯೆ ಪಾರ್ಟಿ ಹೆಸರಲ್ಲಿ ಕಾರ್ತಿಕ್‍ಗೆ ಕಂಠ ಪೂರ್ತಿ ಮದ್ಯ ಕುಡಿಸಲಾಗಿದೆ. ಬಳಿಕ ಮಾರಕಾಸ್ತ್ರಗಳಿಂದ ಕೊಲೆ ಮಾಡಿ ವೃಷಭವತಿ ನದಿಗೆ ಮೂಟೆ ಕಟ್ಟಿ ಎಸೆದು ಬಂದಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ರಂಜಿತಾ ನಾಪತ್ತೆಯಾಗಿದ್ದಾಳೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!