ಆಗಸ್ಟ್ 10 ರಿಂದ ಮನದರಸಿ ಚಿತ್ರೀಕರಣ

ಪಿ ಕೆ ಆರ್ ಪ್ರೊಡಕ್ಷನ್ ಲಾಂಛನದಲ್ಲಿ
ಟಿ.ಎಸ್.ಕೃಷ್ಣಮೂರ್ತಿ (ತೋಸಿ) ಅವರ ನಿರ್ದೇಶನದಲ್ಲಿ ತಯಾರಾಗುತ್ತಿರುವ “ಮನದರಸಿ”
ಚಿತ್ರ ಇದೆ ಆಗಸ್ಟ್ 10 ರಿಂದ ಆರಂಭವಾಗಲಿದೆ.

ಟಿ.ಎಸ್.ಕೃಷ್ಣಮೂರ್ತಿ ಈ ಚಿತ್ರಕ್ಕೆ ಕಥೆ ಚಿತ್ರಕಥೆ ಮತ್ತು ನಿರ್ದೇಶನದ ಹೊಣೆಯನ್ನು ಹೊತ್ತಿದ್ದಾರೆ,

ವಿಭಿನ್ನ ಆಲೋಚನೆಗಳನ್ನು ಪ್ರೇಕ್ಷಕರು ಮನಸಾರೆ ಮೆಚ್ಚುತ್ತಿದ್ದಾರೆ. ಹೀಗಾಗಿ ಹೊಸ ವಿಭಿನ್ನ ಆಲೋಚನೆಯೊಂದಿಗೆ ಗುರುತಿಸಿಕೊಳ್ಳುತ್ತಿರುವ ಹೊಸ ನಿರ್ದೇಶಕರಲ್ಲಿ ಕೆಲವರು ಭರವಸೆ ಮೂಡಿಸುತ್ತಿದ್ದಾರೆ. ಅಂತವರ ಸಾಲಿಗೆ ಹೊಸ ಸೇರ್ಪಡೆ ನಿರ್ದೇಶಕ ಟಿ ಎಸ್ ಕೃಷ್ಣಮೂರ್ತಿ

‘ಮನದರಸಿ’ ಅನ್ನುವುದು ಅದ್ಭುತ ಅನುಭವ. ಅದರ ಸುತ್ತಲೇ ಸಿನಿಮಾದ ಜರ್ನಿ ಇದೆ. ಇದು ಪ್ರೇಮಕತೆಯಲ್ಲ ಆದರೂ ಪ್ರೇಮವಿದೆ. ಮಾಮೂಲು ಕಾಮಿಡಿ ಸಿನಿಮಾ ಅಲ್ಲ, ಆದರೂ, ಮನರಂಜನೆ ಇದೆ. ಆ್ಯಕ್ಷನ್ ಸಿನಿಮಾ ಅಲ್ಲ ಹೊಡೆದಾಟದ ದೃಶ್ಯಗಳಿವೆ. ಸದ್ಯ ತೆರೆಗೆ ಬರುತ್ತಿರುವ ಸಿನಿಮಾಗಿಂತ ನನ್ನ ಚಿತ್ರದ ಕಥೆ ಸಿಕ್ಕಾಪಟ್ಟೆ ಭಿನ್ನವಿದೆ. ನನ್ನ ಕಥೆ ಕುರಿತು ನನಗೆ ಅಪಾರ ನಂಬಿಕೆ ಇದೆ’ ಅಂತಾರೆ ನಿರ್ದೇಶಕ ಕೃಷ್ಣಮೂರ್ತಿ

ಚಿತ್ರದ ಮತ್ತೊಂದು ವಿಶೇಷತೆ ಅಂದರೆ, ನಟ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ರೂಪೇಶ್ ಈ ಚಿತ್ರದ ನಾಯಕ, ನಟ ನಿರ್ದೇಶಕರಾಗಿ ಗುರುತಿಸಿಕೊಂಡಿರುವವರಿಗೆ ನಿರ್ದೇಶನ ಮಾಡುವುದು ಒಂದು ಸವಾಲೇ ಸರಿ ಅಂತಾರೆ ನಿರ್ದೇಶಕ ಕೃಷ್ಣಮೂರ್ತಿ.

ಮನದರಸಿ ಕಥೆಗೆ ಸ್ಪೂರದ್ರೂಪಿ ನಾಯಕ ನಟನ ಹುಡುಕಾಟದಲ್ಲಿದ್ದ ಚಿತ್ರ ತಂಡದ ಕಣ್ಣಿಗೆ ಬಿದ್ದಿದ್ದು ಸಾರಿಕಣೇ ಮತ್ತು ಧೂಳಿಪಟ ಖ್ಯಾತಿಯ ರೂಪೇಶ್ ಜಿ ರಾಜ್,
ರೂಪೇಶ್ ಬಗ್ಗೆ ಎರಡು ಮಾತು ಹೇಳಲೇಬೇಕು, ಇವರು ಸದಾ ಹಸನ್ಮುಖಿ, ಮತ್ತು ಸ್ನೇಹಜೀವ. ಇಂತಹ 2020-21 Covid ಟೈಂನಲ್ಲೂ ತನ್ನ ನಿರ್ದೇಶನದಲ್ಲಿ ಮೂರು ಚಿತ್ರಗಳ ಚಿತ್ರೀಕರಣ ಮಾಡಿ ಸಂಕಷ್ಟದಲ್ಲಿರುವ ಕಲಾವಿದರಿಗೆ ತಂತ್ರಜ್ಞರಿಗೆ ನೆರವಾಗಿದ್ದಾರೆ ಕಾಲಜ್ಞಾನ ಮತ್ತು ಬಯಲು ಸೆನ್ಸಾರ್ ಪ್ರಮಾಣಪತ್ರ ಪಡೆದಿವೆ ಹಾಗೂ ಪ್ರೇಮವ್ಯೂಹ ಸೆನ್ಸಾರ್ ಮಂಡಳಿ ಮುಂದಿದೆ.
ಇದಲ್ಲದೆ ಯಾವುದೇ ಸೋಷಿಯಲ್ ಮೀಡಿಯಾ ತೆಗೆದರು ರೂಪೇಶ್ ಜಿ ರಾಜ್ ಅವರ TikTok, Reels ವಿಡಿಯೋಗಳು ಮಿಲಿಯನ್ ಗಟ್ಟಲೆ Views ನೊಂದಿಗೆ ರಾರಾಜಿಸುತ್ತಿವೆ,
ಅಷ್ಟೊಂದು ಅಭಿಮಾನಿ ಬಳಗವನ್ನ ಹೊಂದಿದ್ದಾರೆ ರೂಪೇಶ್.

ಬೆಂಗಳೂರು, ಮಂಗಳೂರು, ತುಮಕೂರು, ಕೋಲಾರ, ಚಿಕ್ಕಮಗಳೂರು ಮುಂತಾದ ಕಡೆ ಚಿತ್ರಕ್ಕೆ 45 ದಿನಗಳ ಚಿತ್ರೀಕರಣ ನಡೆಯಲಿದೆ.
ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ವಿನು ಮನಸು ಸಂಗೀತ ನೀಡುತ್ತಿದ್ದಾರೆ, ವೀನಸ್ ಮೂರ್ತಿ ಛಾಯಾಗ್ರಹಣ, ನಾಗರಾಜ್ ಹರಸೂರ ಸಂಕಲನ, ತಿರುಪತಿ ಶ್ರೀನಿವಾಸ್ ನೃತ್ಯ ಸಂಯೋಜನೆ, ಕೌರವ ವೆಂಕಟೇಶ್ ಸಾಹಸ ನಿರ್ದೇಶನವಿರುವ ಈ ಚಿತ್ರ
ಅದ್ದೂರಿ ವೆಚ್ಚದಲ್ಲಿ ಅದ್ದೂರಿ ತಾರಾಗಣದೊಂದಿಗೆ ತಯಾರಾಗುತ್ತಿದೆ, ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರುತ್ತಾರೆ ಎಂದು ಚಿತ್ರ ತಂಡ ತಿಳಿಸಿದೆ.

You May Also Like

error: Content is protected !!