ದಿನ ಭವಿಷ್ಯ ಆಗಸ್ಟ್ 8 ಈ ದಿನ ಈ ರಾಶಿಯವರಿಗೆ ಧನ ಲಾಭ

*ಇಂದಿನ ಪಂಚಾಂಗ*

ಭಾನುವಾರ-ಆಗಸ್ಟ್ -8,2021
ಸಂವತ್ಸರ : ಪ್ಲವ ನಾಮ ಸಂವತ್ಸರ
ಆಯನಂ : ದಕ್ಷಿಣಾಯಣ
ಋತು : ಗ್ರೀಷ್ಮ
ಮಾಸ : ಆಷಾಡ ಮಾಸ
ಪಕ್ಷ :  ಕೃಷ್ಣಪಕ್ಷ

ವಾಸರ : ರವಿವಾಸರ

ತಿಥಿ: ಅಮಾವಾಸ್ಯೆ ರಾ.7:19 ವರೆಗೆ, ನಂತರ ಪಾಡ್ಯ

ನಕ್ಷತ್ರ:  ಪುಷ್ಯ ಬೆ.9:19 ವರೆಗೆ, ನಂತರ ಆಶ್ಲೇಷ

ಯೋಗ: ವ್ಯತೀಪಾತ ರಾ.11:38 ವರೆಗೆ, ನಂತರ ವರಿಯಾನ್

ಕರಣ: ಚತುಷ್ಪಾದ ಬೆ.7:19 ವರೆಗೆ, ನಾಗವ ರಾ.7:19 ವರೆಗೆ, ನಂತರ ಕಿಂಸ್ತುಘ್ನ

ಅಭಿಜಿತ್ ಮುಹೂರ್ತ: ಮ.12:00 ಇಂದ ಮ.12:50 ವರೆಗೆ

ಅಮೃತಕಾಲ: ಯಾವುದೂ ಇಲ್ಲ

ಸೂರ್ಯ ರಾಶಿ : ಕರ್ಕ

ಚಂದ್ರ ರಾಶಿ : ಕರ್ಕ
———————
ರಾಹುಕಾಲ : 4:30 pm – 6:00 pm
ಗುಳಿಕಕಾಲ : 3:00 pm – 4:30 pm
ಯಮಗಂಡ : 12:00 pm – 1:30 pm
———————
ಸೂರ್ಯೋದಯ : 06:06 am
ಸೂರ್ಯಾಸ್ತ  : 06:44 pm
ಚಂದ್ರೋದಯ : ಇಲ್ಲ
ಚಂದ್ರಾಸ್ಥ  : 06:50 pm
———————-
ದಿನ ವಿಶೇಷ: ಆಶಾಡ ಅಮಾವಾಸ್ಯೆ, ದರ್ಶ ಅಮಾವಾಸ್ಯೆ ,ಅಂವಾಧಾನ, ಹರಿಯಾಲಿ ಅಮಾವಾಸ್ಯೆ
———————–
*॥ಸರ್ವೆಜನಃ ಸುಖಿನೋಭವಂತು॥*

ಮೇಷ
ರಾಜಕಾರಣಿಗಳ ಮಾತಿಗೆ ಮರುಳಾಗುವ ಸಾಧ್ಯತೆ. ಹಿತ ಶತ್ರುಗಳ ಭರವಸೆಗಳ ಬಗ್ಗೆ ಎಚ್ಚರಿಕೆ ಅಗತ್ಯ

ವೃಷಭ
ಉದ್ಯೋಗದಲ್ಲಿರುವವರಿಗೆ ಸ್ಥಾನ ಬದಲಾವಣೆ ಅಥವಾ ಬಡ್ತಿಯಿಂದಾಗಿ ಉತ್ತಮ ಆದಾಯ ಲಭಿಸಲಿದೆ. ಉತ್ತಮ ಆರೋಗ್ಯ.

ಮಿಥುನ
ಬರಹಗಾರರಿಗೆ, ಕಲಾವಿದರುಗಳು ಪ್ರಶಸ್ತಿ ಫಲಕಗಳಿಗೆ ಭಾಜನರಾಗುವ ಸಾಧ್ಯತೆ. ಮಕ್ಕಳು ನೇತ್ರ ಸಂಬಂಧಿ ತೊಂದರೆ ಅನುಭವಿಸಬೇಕಾದೀತು.

ಕಟಕ
ಸಂಗೀತಗಾರರಿಗೆ ಉತ್ತಮ ದಿನವಾಗಿದ್ದು ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಗಲಿದೆ. ವಾಹನ ಖರೀದಿಯಲ್ಲಿ ಎಚ್ಚರಿಕೆ ಉತ್ತಮ.

ಸಿಂಹ
ಬಂಧುಗಳ ಆಗಮನದಿಂದಾಗಿ ಮನೆಯಲ್ಲಿ ಹಬ್ಬದ ವಾತಾವರಣ ನೆಲೆಸಲಿದೆ.

ಕನ್ಯಾ
ಹೊಸ ಪುಸ್ತಕ ಅಥವಾ ಗ್ರಂಥ ಸಂಪಾದನೆಯಾಗಲಿದೆ. ವಿವಾಹದ ವಿಷಯದಲ್ಲಿ ನೇರ ಮಾತುಕತೆಯಿಂದಾಗಿ ಯಶಸ್ವಿ. ವಿದ್ಯಾರ್ಥಿಗಳಿಗೆ ಶುಭ.

ತುಲಾ
ರಾಜಕೀಯ ಭವಿಷ್ಯದ ಬಗ್ಗೆ ಪ್ರಭಾವಿ ರಾಜಕಾರಣಿಗಳೊಂದಿಗೆ ಚರ್ಚೆಯಲ್ಲಿ ಭಾಗವಹಿಸಿ ಮಹತ್ತರ ನಿರ್ಣಯವೊಂದನ್ನು ಕೈಗೊಳ್ಳುವ ಸಾಧ್ಯತೆ.

ವೃಶ್ಚಿಕ
ಸಂಪಾದನೆಯಲ್ಲಿ ಏರುಮುಖವನ್ನು ಕಾಣುವಿರಿ. ವಾದವಿವಾದಗಳು ಬಗೆಹರಿದು ನಿರಾಳತೆ.
ಧನು
ಸಂಸಾರದಲ್ಲಿ ನೆಮ್ಮದಿ. ಬೆಂಕಿಯ ವಿಷಯದಲ್ಲಿ ಜಾಗೃತಿ ಅಗತ್ಯ.

ಮಕರ
ಮಾತುಗಳಿಗೆ ಮನ್ನಣೆ ಹೊಂದುವಿರಿ. ಸಹೋದ್ಯೋಗಿಗಳ ಉತ್ತಮ ಸಹಕಾರದಿಂದಾಗಿ ಕಾರ್ಯಬಾಹುಳ್ಯದ ನಡುವೆಯೂ ನೆಮ್ಮದಿ.

ಕುಂಭ
ಸತ್ಕಾರ ಸಮಾರಂಭಗಳಲ್ಲಿ ಭಾಗಿ. ವಾಹನ ಮತ್ತು ಯಂತ್ರಗಳ ಬಿಡಿಭಾಗಗಳ ವ್ಯಾಪಾರದಿಂದಾಗಿ ವಿಶೇಷ ಲಾಭ. ಉತ್ತಮ ಆರೋಗ್ಯವು ನಿಮ್ಮದಾಗಲಿದೆ.

ಮೀನ
ಆರಕ್ಷಕ/ ರಕ್ಷಣಾ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಬಿಡುವಿಲ್ಲದ ಕೆಲಸ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!