ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮೊದಲನೆ ಕೆಲಸವೇ ಜಾತಿಗಣತಿ ವರದಿ ಪಡೆಯೋದು: ಸಿದ್ದರಾಮಯ್ಯ


ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ‌ ಜಾತಿಗಣತಿ ವರದಿ ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.. ಮೈಸೂರಿನಲ್ಲಿ ಮಾತನಾಡಿರುವ ಅವರು ಸರ್ಕಾರ ಬಂದ ವೇಳೆ‌ ಮೊದಲ ಕೆಲಸವೇ ಜಾತಿಗಣತಿ ರಿಪೋರ್ಟ್ ಪಡೆಯೋದು. ವರದಿ ತೆಗೆದುಕೊಂಡು ಅದನ್ನ ಚರ್ಚೆಗೆ ಇಡುತ್ತೇ‌ನೆ ಎಂದಿದ್ದಾರೆ. ಇದೇ ವೇಳೆ ರಿಪೋರ್ಟ್ ಪಡೆಯದಿದ್ದರೆ ಅದರಲ್ಲಿ‌ ಎನಿದೆ ಅಂತ ತಿಳಿಯೋದಾದ್ರು ಹೇಗೆ. ನನ್ನ ಸರ್ಕಾರ ಇದ್ದಾಗ ಜಾತಿಗಣತಿ ಮಾಡಿಸಿದೆ. ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಅದು ರೆಡಿಯಾಯ್ತು. ಆದರೆ ಪುಟ್ಟರಂಗಶೆಟ್ಟಿ ಇದ್ದಾಗ ಅದನ್ನ ತೆಗೆದುಕೊಳ್ಳದಂತೆ ಹೇಳಿದ್ರು‌. ಆ ರಿಪೋರ್ಟ್ ಪಡೆಯದಂತೆ ಕುಮಾರಸ್ವಾಮಿ ಸೂಚಿಸಿದ್ರು. ಆದರೆ ನಾನು ಅದನ್ನ ರಿಪೋರ್ಟ್ ತೆಗೆದುಕೊಂಡು ಚರ್ಚೆ ಮಾಡಿಸುತ್ತೇನೆ ಎಂದಿದ್ದಾರೆ.

ಇದೇ ವೇಳೆ ಮೇಕೆದಾಟು ಯೋಜನೆ ವಿಚಾರವಾಗಿ ಮಾತನಾಡಿ , ತಮಿಳುನಾಡಿನ ಪಾಲಿಗೆ ಧಕ್ಕೆ ಆದಾಗ ಮಾತ್ರ ವಿರೋಧ ಮಾಡ್ತಾರೆ. ಸರ್ಕಾರಕ್ಕೆ ಕಮಿಟ್ ಮೆಂಟ್ ಇದ್ದರೆ ಯೋಜನೆ ಮಾಡಬೇಕು. ಕೇಂದ್ರದ ಟ್ರಿಬ್ಯೂನಲ್ ಬಳಿ ಹೋಗಿ ಅನುಮತಿ ಪಡೆಯಲಿ. ಆ ನಂತರ ಯೋಜನೆ‌ ಪ್ರಾರಂಭ ಮಾಡಲಿ. ಅದನ್ನ ಬಿಟ್ಟು ತಮಿಳುನಾಡಿಗೆ ಪತ್ರ ಬರೆದು ಕೇಳ್ತಿವಿ ಮಾಡ್ತೀವಿ ಅಂದ್ರೆ ಹೇಗೆ? ಮೊದಲು ಯೋಜನೆಯನ್ನ ಕೈಗೆತ್ತಿಕೊಂಡು ಶುರು ಮಾಡಬೇಕು ಎನ್ನುವ ಮೂಲಕ ಚರ್ಚೆಯೇ ಮಾಡದೆ ಸಿದ್ದರಾಮಯ್ಯ ವಿದ್ಯುತ್ ಕಾಯ್ದೆ ವಿರೋಧ ಮಾಡ್ತಿದ್ದಾರೆಂಬ ಬಿಜೆಪಿ ಟ್ವೀಟ್ ಗೆ ವ್ಯಂಗ್ಯವಾಡಿದ್ದಾರೆ. ರಾಜ್ಯ ಬಿಜೆಪಿ ಕೇಂದ್ರ ಹೇಳಿದಂತೆ ಮಾಡ್ತಿಲ್ಲ ಎಂದು ಹೇಳಲಿ. ಆಗ ನಾನು ವಿರೋಧವೇ ಮಾಡಲ್ಲ. ಅವರು ಹೇಳಲ್ಲ, ನಾನು ವಿರೋಧ ಮಾಡೋದು ಬಿಡಲ್ಲ ಎಂದಿದ್ದಾರೆ.

You May Also Like

error: Content is protected !!