ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತು

ನವದೆಹಲಿ : ಕೆಂಪುಕೋಟೆಯ ಮೇಲೆ ಧ್ವಜಾರೋಹಣ ನಡೆದ ನಂತರ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ.

ಭಾರತ ಲಸಿಕೆಗಾಗಿ ಬೇರೆ ದೇಶಗಳನ್ನು ಅವಲಂಬಿತರಾಗಬಾರದು. ವಿಶ್ವದ ದೊಡ್ಡ ಲಸಿಕಾ ಅಭಿಯಾನ ಭಾರತದಲ್ಲಿ ನಡೆಯುತ್ತಿದೆ. ಈಘಲೇ ದೇಶದಲ್ಲಿ 54 ಕೋಟಿ ಜನರು ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಇದನ್ನು ನಾನು ಹೆಮ್ಮೆಯಿಂದ ಹೇಳುತ್ತೇನೆ ಎಂದು ಮೋದಿ ಹೇಳಿದ್ದಾರೆ.

ಪ್ರಪಂಚದ ಬೇರೆ ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಕಡಿಮೆ ಜನರಿಗೆ ಕೊರೊನಾ ಸೋಂಕು ತಗುಲಿದೆ. ಇನ್ನೂ ನಮ್ಮಿಂದ ಬಹಳಷ್ಟು ಜನರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಕೊರೊನಾದಿಂದ ಎಷ್ಟೋ ಮಕ್ಕಳು ಅನಾಥರಾಗಿದ್ದಾರೆ. ಕೊರೋನಾ ನಮಗೆ ದೊಡ್ಡ ಸವಾಲಾಗಿದೆ. ಭಾರತ ವಿಕಾಸ ಯಾತ್ರೆಯಲ್ಲಿ ಹೊಸ ಸಂಕಲ್ಪಗಳೊಂದಿಗೆ ನಾವು ಮುನ್ನಡೆಯಬೇಕಾಗಿದೆ. ಮುಂದಿನ 25 ವರ್ಷಗಳ ನಂತರ ಸ್ವಾತಂತ್ರ್ಯೋತ್ಸವದ ಶತಮಾನೋತ್ಸವ ಆಚರಣೆ ನಡೆಯಲಿದೆ ಎಂದರು.

ನಾವೆಲ್ಲರೂ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’ ಶ್ರದ್ಧೆಯೊಂದಿಗೆ ಜೊತೆಯಾಗಿದ್ದೇವೆ. ಇದರೊಂದಿಗೆ ‘ಸಬ್ ಕಾ ಪ್ರಯಾಸ್’ ಘೋಷಣೆಯೂ ನಮ್ಮದಾಗಬೇಕಿದೆ. ಹೊಸ ಸಂಕಲ್ಪಗಳೊಂದಿಗೆ ನಾವು ಮುನ್ನಡೆಯಬೇಕಿದೆ. ಗ್ರಾಮಗಳಲ್ಲಿ ಶೇ. 100 ರಷ್ಟು ರಸ್ತೆ, ಬ್ಯಾಂಕ್ ಖಾತೆ, ಆಯುಷ್ಮಾನ್ ಕಾರ್ಡ್, ಉಜ್ವಲ ಯೋಜನೆ, ವಿಮಾ ಯೋಜನೆ, ಪಿಂಚಣಿ ಯೋಜನೆ, ವಸತಿ ಯೋಜನೆ ಜನರಿಗೆ ತಲುಪಬೇಕು. ಸರ್ಕಾರಿ ಯೋಜನೆಗಳ ವೇಗ ಮೊದಲಿಗಿಂತ ಹೆಚ್ಚು ವೇಗವಾಗಿ ಜನರಿಗೆ ತಲುಪುತ್ತಿವೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

You May Also Like

error: Content is protected !!