100 ಲಕ್ಷ ಕೋಟಿ ರೂ. ಗತಿಶಕ್ತಿ ಯೋಜನೆ ಏನಿದು ಮೋದಿ ಮಾಸ್ಟರ್ ಪ್ಲಾನ್

ನವದೆಹಲಿ: ದೇಶದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಎಂದು ವಿಶ್ಲೇಷಿಸುವ 100 ಲಕ್ಷ ಕೋಟಿ ರೂಪಾಯಿ ಮೌಲ್ಯದ ಗತಿಶಕ್ತಿ ಯೋಜನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.

ಸ್ವತಂತ್ರ್ಯ ದಿನಾಚರಣೆಯ 75 ಅಮೃತ ಮಹೋತ್ಸವದ ಸಂದರ್ಭದಲ್ಲಿ ಕೆಂಪುಕೋಟೆಯ ಮೇಲೆ ಧ್ವಜಾರೋಹಣ ಮಾಡಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ಗತಿಶಕ್ತಿ ಯೋಜನೆ ಉದ್ಯೋಗಾವಕಾಶಗಳನ್ನು ಮತ್ತು ಕೈಗಾರಿಕೆಗಳ ಉತ್ಪಾದಕತೆಯನ್ನು ಸ್ಪೋಟಕ ಮಾದರಿಯಲ್ಲಿ ವೃದ್ಧಿಗೊಳಿಸಲಿದೆ ಎಂದಿದ್ದಾರೆ.

ದೇಶದ ಮೂಲ ಸೌಲಭ್ಯ ಅಭಿವೃದ್ಧಿ, ನಿರ್ಮಾಣದಲ್ಲಿ ಸಮಗ್ರ ಮತ್ತು ಸಂಯೋಜಿತ ದೃಷ್ಟಿಕೋನಗಳ ಅಗತ್ಯವಿದೆ. ಹೊಸ ಯುಗ ಹಾಗೂ ನವೀನ ತಂತ್ರಜ್ಞಾನವನ್ನು ಬಳಸಿಕೊಂಡು ನಾವು ವಿಶ್ವದರ್ಜೆಯ ಉತ್ಪನ್ನಗಳನ್ನು ತಯಾರಿಸಬೇಕಿದೆ. ಪ್ರಸ್ತುತ ಸಾರಿಗೆ ವ್ಯವಸ್ಥೆ ಉದ್ಯಮಕ್ಕೆ ಸೌಹಾರ್ಧವಾಗಿಲ್ಲ.

ಪ್ರಯಾಣದ ಅವಯನ್ನು ಕಡಿಮೆ ಮಾಡಿದರೆ ಉತ್ಪಾದನೆ ಮತ್ತಷ್ಟು ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ಗತಿಶಕ್ತಿ ದೂರದೃಷ್ಟಿಯ ಯೋಜನೆಯಾಗಲಿದೆ.
ಆರ್ಥಿಕ ವಲಯಗಳ ಅಭಿವೃದ್ಧಿ, ಚಾಲ್ತಿಯಲ್ಲಿರುವ ಉದ್ಯಮಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಗತಿಶಕ್ತಿ ನೆರವಾಗಲಿದೆ ಎಂದಿದ್ದಾರೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!