ಶಾಲೆಗಳ ಆರಂಭಕ್ಕೆ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು : ರಾಜ್ಯದಲ್ಲಿ ಶಾಲೆಗಳ ಆರಂಭಿಸೋಕೆ ಮುಹೂರ್ತ ಫಿಕ್ಸ್ ಆಗಿದ್ದು, ಇದೀಗ ರಾಜ್ಯ ಸರ್ಕಾರ 9 ರಿಂದ 10 ನೇ ತರಗತಿ ಪ್ರಾರಂಭಕ್ಕೆ ಅಧಿಕೃತ ಗೈಡ್ ಲೈನ್ಸ್ ಬಿಡುಗಡೆ ಮಾಡಿದೆ. ಇದರಲ್ಲಿ ಬಹುತೇಕ ಕಳೆದ ಬಾರಿ ಶಾಲೆಗಳು ಪ್ರಾರಂಭಕ್ಕೆ ವಿಧಿಸಲಾಗಿದ್ದ ಮಾರ್ಗಸೂಚಿಯೇ ಇದೆ.
ಸರ್ಕಾರದ ಮಾರ್ಗಸೂಚಿಯಲ್ಲಿ ಏನಿದೆ..?
ಶಾಲೆಗೆ ಬರುವುದಕ್ಕೆ ಪೋಷಕರ ಅನುಮತಿ ಪತ್ರ ತರಬೇಕು
ಶಾಲೆಯಲ್ಲಿ ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.
ಸೋಮವಾರದಿಂದ ಶುಕ್ರವಾರದವರೆಗೆ ಅರ್ಧದಿನ ತರಗತಿ (ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ)
ಶನಿವಾರ ಬೆಳಗ್ಗೆ 10ರಿಂದ ಮ.12.50ರವರೆಗೆ ತರಗತಿ
ವಿದ್ಯಾರ್ಥಿಗಳಿಗೆ ಭೌತಿಕ ಹಾಜರಾತಿ ಕಡ್ಡಾಯವಿರುವುದಿಲ್ಲ
ಮಗುವಿಗೆ ಕೊರೊನಾ ಲಕ್ಷಣದ ಇಲ್ಲದಿರುವುದನ್ನು ಕುರಿತು ಪೋಷಕರು ದೃಢಪಡಿಸಬೇಕು.
ಶಾಲೆಯ ಆವರಣವನ್ನು ಸ್ಯಾನಿಟೈಸ್ ಮಾಡಬೇಕು

ವಿದ್ಯಾರ್ಥಿಗಳು ಅನುಸರಿಸಬೇಕಾದ ಗೈಡ್ ಲೆನ್ಸ್
ಸಾಮಾಜಿಕ ಅಂತರ, ಹ್ಯಾಂಡ್ ವಾಶ್ ಮಾಡುವುದು
ಮನೆಯಿಂದಲೇ ಊಟ ಹಾಗೂ ಬಿಸಿ ನೀರನ್ನು ತರಬೇಕು
ಪೆನ್ನು, ನೋಟ್ ಬುಕ್, ನೀರಿನ ಬಾಟಲ್ ಹಂಚಿಕೊಳ್ಳಬಾರದು
ಕೋವಿಡ್ ಲಕ್ಷಣ ಕಂಡು ಬಂದಲ್ಲಿ ರಜೆ ಪಡೆಯಬೇಕು.
ಶಿಕ್ಷಕರಿಗೆ ಆರ್ ಟಿ ಪಿಸಿಆರ್ ನಲ್ಲಿ ನೆಗೆಟಿವ್ ರಿಪೋರ್ಟ್‌ ಕಡ್ಡಾಯ ಎಂದು ತಿಳಿಸಿದೆ

You May Also Like

error: Content is protected !!