ವಿಶ್ವ ಛಾಯಾಗ್ರಹಣ ದಿನ ಇತಿಹಾಸ, ಮಹತ್ವ

ಜಗತ್ತಿನ ವಿಸ್ಮಯ, ನೈಜ ಚಿತ್ರಣಗಳನ್ನು ಸೆರೆಹಿಡಿಯುವ ಛಾಯಾಗ್ರಹಣ ಅತ್ಯಂತ ಸವಾಲಿನ ಹಾಗೂ ಸೃಜನಾತ್ಮಕ ಕಲೆ/ವೃತ್ತಿ. ಜಾಗತಿಕ ಮಟ್ಟದಲ್ಲಿ ಛಾಯಾಗ್ರಹಣಕ್ಕೆ ಕೊಟ್ಟಿರುವ ಪ್ರಾಮುಖ್ಯತೆಯ ಪ್ರತೀಕವಾಗಿ ಪ್ರತಿ ವರ್ಷ ಆಗಸ್ಟ್ 19ರಂದು ವಿಶ್ವ ಛಾಯಾಗ್ರಾಹಣ ದಿನ ಆಚರಿಸಲಾಗುತ್ತಿದೆ.

ಛಾಯಾಗ್ರಹಣಕ್ಕಿರುವ ಸಾಮರ್ಥ್ಯವನ್ನು ‘ಒಂದು ಚಿತ್ರ ಸಾವಿರ ಪದಗಳಿಗೆ ಸಮ’, ‘ಪದಗಳಲ್ಲಿ ವರ್ಣಿಸಲಸಾಧ್ಯವಾದ ಅದೆಷ್ಟೋ ಮಾತುಗಳನ್ನು ಕೇವಲ ಒಂದು ಚಿತ್ರ ಬಿಡಿಸಿಡುತ್ತದೆ; ಎಂಬಂಥ ಮಾತುಗಳು ತಿಳಿಸುತ್ತದೆ.

ವಿಶ್ವ ಛಾಯಾಗ್ರಹಣ ದಿನದ ಇತಿಹಾಸ
1939ರ ಆಗಸ್ಟ್ 19ರಂದು ಫ್ರಾನ್ಸ್ ದೇಶದಲ್ಲಿ ಮೊದಲ ಬಾರಿಗೆ ವಿಶ್ವ ಛಾಯಾಗ್ರಹಣ ದಿನವನ್ನು ಘೋಷಿಸಿತು. ಆದರೆ ಜಾಗತಿಕ ಮಟ್ಟದಲ್ಲಿ ಛಾಯಾಚಿತ್ರಕ್ಕಿರುವ ಮನ್ನಣೆ ಗಮನಿಸಿ 2010ರ ಆಗಸ್ಟ್ 19ರಂದು ವಿಶ್ವ ಮಟ್ಟದಲ್ಲಿ ಭಾರತವೂ ಸೇರಿದಂತೆ ಅಂದಾಜು 100 ದೇಶಗಳು ಆನ್ ಲೈನ್ ಗ್ಯಾಲರಿಗಳು ಮೊದಲ ಛಾಯಾಗ್ರಹಣ ದಿನವನ್ನು ಆಚರಿಸಿತು. ಮೊಟ್ಟ ಮೊದಲ ಬಾರಿಗೆ ನಡೆದ ಈ ಛಾಯಾಗ್ರಹಣ ದಿನ ನಂತರ ಇತಿಹಾಸದ ಪುಟ ಸೇರಿತು.

ಛಾಯಾಗ್ರಹಣ ದಿನ ಆಚರಣೆಯ ಮಹತ್ವ
ಛಾಯಾಗ್ರಾಹಕರು ತಮ್ಮ ಯೋಚನೆಗಳನ್ನು ಹಂಚಿಕೊಳ್ಳಲು, ಪ್ರೋತ್ಸಾಹಿಸುವ ಮೂಲಕ, ವಿಶ್ವ, ದೇಶ, ರಾಜ್ಯ ಮಟ್ಟಗಳಲ್ಲಿ ಕಲಾವಿದರ ಅತ್ಯುತ್ತಮ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಈ ದಿನವನ್ನು ವಿಶೇಷವಾಗಿ ಆಚರಿಸುತ್ತಾರೆ. ಮುಂದಿನ ಪೀಳಿಗೆಗೆ ತಜ್ಞರ ಅನುಭವ, ತಾಂತ್ರಿಕ ಕೌಶಲ್ಯಗಳು, ಪ್ರೇರಣೆ ನೀಡುವ ಮೂಲಕ ಈ ದಿನವನ್ನು ಸಾಕಾರಗೊಳಿಸುತ್ತಾರೆ. ಇದಕ್ಕಾಗಿ ವಿಶ್ವಾದ್ಯಂತ ಅಸಂಖ್ಯ ಛಾಯಾಗ್ರಾಹಕರು ಈ ದಿನಕ್ಕಾಗಿ ಕಾತುರದಿಂದ ಕಾಯುತ್ತಾರೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!