ಯಾರೇ ಬೇಡ ಎಂದರೂ ಗಣೇಶ ಹಬ್ಬ ಆಚರಿಸುತ್ತೇವೆ : ಬಸನಗೌಡ ಪಾಟೀಲ್ ಯತ್ನಾಳ್

ವಿಜಯಪುರ : ಲಸಿಕೆ ಹಾಕಿಸುವ ಅಭಿಯಾನದಲ್ಲಿ ವಿಜಯಪುರ ನಗರ ನಂಬರ್ 1 ಇದೆ. ಮೂರನೇ ಅಲೆ ನಮ್ಮ ಜಿಲ್ಲೆಗೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಪಾಸಿಟಿವ್ ರೋಗಿಗಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಬೇರೆಯವರೆಲ್ಲ ತಮ್ಮ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ನಮಗೆ ಮಾತ್ರ ಆ ಹಕ್ಕು ಇಲ್ಲವಾ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.

ಇಲ್ಲಿಯ ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೇರೆಲ್ಲಾ ಕಾರ್ಯಕ್ರಮಗಳನ್ನು ಮಾಡುವವರು ಮಾಡಿಕೊಳ್ಳುತ್ತಿದ್ದಾರೆ. ಜನರು ಅಪಾರ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಅದೇ ಗಣಪತಿ ಹಬ್ಬ ಬಂದಾಗ ನಿರ್ಬಂಧ ವಿಧಿಸುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಹಿಂದೂಗಳ ಪ್ರಮುಖ ಹಬ್ಬ ಗಣಪತಿ ಹಬ್ಬಕ್ಕೆ ನಿರ್ಬಂಧ ಹೇರಲು ಬಂದರೆ ನಾವು ಸುಮ್ಮನಿರುವುದಿಲ್ಲ. ಗಣೇಶ ಹಬ್ಬಕ್ಕೆ ಕಾನೂನು ಮಾಡಿದರೆ ನಾವೇನೂ ಕೇಳಲ್ಲ. ಬಾಳ ಅಂದರೆ ಅವರು ನನಗೆ ಗುಂಡು ಹಾರಿಸಹುದು. ನಾ ಸತ್ತರೂ ಹೆಸರು ತಗೊಂಡ ಸಾಯಬೇಕು ಎಂದು ಹೇಳಿದ್ದಾರೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!