ಕೋವಿಡ್ ಲಸಿಕೆ ಪಡೆಯದ ಪಡಿತರ ಚೀಟಿದಾರರಿಗೆ `ರೇಷನ್’ ವಿತರಣೆ ಇಲ್ಲ!

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಕೊರೊನಾ 3 ನೇ ಅಲೆ ಆತಂಕದ ಭೀತಿ ಎದುರಾಗಿದ್ದು, ಕೊರೊನಾ3 ನೇ ಅಲೆ ತಡೆಗಟ್ಟಲು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕು ಆಡಳಿತ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, ಕೊರೊನಾ ವ್ಯಾಕ್ಸಿನ್ ಪಡೆಯದವರಿಗೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಪಡಿತರವನ್ನು ವಿತರಿಸಲಾಗುವುದಿಲ್ಲ ಎಂದು ಎಂದು ತಾಲೂಕು ಆಡಳಿತ ನಿರ್ಣಯ ಕೈಗೊಂಡಿದೆ.

ತಾಲೂಕಿನಲ್ಲಿ 18 ವರ್ಷ ಮೇಲ್ಪಟ್ಟವರು 1 ಮತ್ತು 2 ನೇ ಡೋಸ್ ಕೋವಿಡ್ ವ್ಯಾಕ್ಸಿನ್ ಅನ್ನು ಕಡ್ಡಾಯವಾಗಿ ಪಡೆದುಕೊಳ್ಳಲು ಹಾಗೂ ವ್ಯಾಕ್ಸಿನ್ ಪಡೆಯದಿದ್ದಲ್ಲಿ ಪಡಿತರ ನಿಲ್ಲಿಸುವುದಾಗಿ ಡಂಗೂರದ ಮೂಲಕ ಪ್ರಚಾರ ಮಾಡಲಾಗುತ್ತದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಪಡಿತರ ಚೀಟಿಯಲ್ಲಿರುವ 18 ವರ್ಷ ಮೇಲ್ಪಟ್ಟ ಎಲ್ಲಾ ಸದಸ್ಯರು 1 ಅಥವಾ 2 ನೇ ಡೋಸ್ ವ್ಯಾಕ್ಸಿಇನ್ ಪಡೆದ ಪ್ರಮಾಣ ಪತ್ರವನ್ನು ಹಾಜರುಪಡಿಸಿದಲ್ಲಿ ಮಾತ್ರ ಪಡಿತರ ವಿತರಿಸಲಾಗುವುದು ಎಂದು ತೀರ್ಮಾನಕ್ಕೆ ಬರಲಾಗಿದೆ.

ಪಡಿತರ ವಿತರಣೆಗೆ 2 ನೇ ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡ ಬಗ್ಗೆ ಮೊಬೈಲ್ ಸಂದೇಶವನ್ನು ಪರಿಗಣಿಸುವುದು. ವ್ಯಾಕ್ಸಿನ್ ಪಡೆಯದಿರುವ ಪಡಿತರದಾರರ ಮಾಹಿತಿಯನ್ನು ಸ್ಥಳೀಯ ಆಶಾ ಕಾರ್ಯಕರ್ತೆಯರಿಂದ ಪಡೆದುಕೊಳ್ಳಲು ತಾಲೂಕು ಆಡಳಿತ ಮುಂದಾಗಿದೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!