ಕಬ್ಬು ಬೆಳೆಗಾರರಿಗೆ ಪ್ರತಿ ಕ್ವಿಂಟಲ್​ಗೆ 290 ರೂ. ಎಫ್ ಆರ್ ಪಿ ಏರಿಕೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ದೇಶದ 5 ಕೋಟಿ ಕಬ್ಬು ಬೆಳೆಯುವ ರೈತರಿಗೆ ಸಿಹಿ ಸುದ್ದಿ ನೀಡಿದೆ. ಪ್ರತಿ ಕ್ವಿಂಟಲ್​​ ಕಬ್ಬಿನ ಮೇಲೆ ಎಫ್​​​ಆರ್​​ಪಿ (Fair and Remunerative Price) ಹೆಚ್ಚಿಸಲು ಇಂದಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಪಿಯೂಷ್​ ಗೋಯಲ್​ ಮಾಹಿತಿ ನೀಡಿದ್ದಾರೆ

ಸಚಿವ ಸಂಪುಟ ಸಭೆ ನಡೆದ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಪಿಯೂಷ್​ ಗೋಯಲ್​, ಕಬ್ಬು ಬೆಳೆಗಾರರ ಹಿತದೃಷ್ಟಿ ಕಾಪಾಡುವ ಉದ್ದೇಶದಿಂದ ಮುಂದಿನ ಬೆಳೆಗೆ ಅನ್ವಯವಾಗುವ ರೀತಿಯಲ್ಲಿ ಪ್ರತಿ ಕ್ವಿಂಟಲ್​ ಕಬ್ಬಿನ ಮೇಲೆ 290 ರೂ. ಎಫ್​​ಆರ್​ಪಿ ಏರಿಕೆ ಮಾಡಲಾಗಿದೆ ಎಂದರು. ಇದರಿಂದ ದೇಶದ 5 ಕೋಟಿ ಕಬ್ಬು ಬೆಳೆಗಾರರು ಇದರ ಲಾಭ ಪಡೆದುಕೊಳ್ಳಲಿದ್ದಾರೆ.

ಏನಿದು ಎಫ್​​ಆರ್​ಪಿ?: ಕೇಂದ್ರ ಕಬ್ಬು ಬೆಳೆಗಾರರಿಗೆ ನೀಡುವ ಪ್ರೋತ್ಸಾಹದಾಯಕ ದರವಾಗಿದ್ದು, ಮುಂದಿನ ಸೀಸನ್​ಗೆ ಅನ್ವಯವಾಗುವಂತೆ ಇದರಲ್ಲಿ 5 ರೂಪಾಯಿ ಏರಿಕೆ ಮಾಡಿದೆ. ಕಬ್ಬಿನಿಂದ ಉತ್ಪಾದನೆಗೊಳ್ಳುವ ಸಕ್ಕರೆ ಶೇ. 10ರಷ್ಟಾಗಿದ್ದರೆ ಕಬ್ಬು ಬೆಳೆಗಾರರಿಗೆ 290 ರೂ ಸಿಗಲಿದೆ

ಕಬ್ಬಿನಿಂದ ಉತ್ಪಾದಿಸಲಾದ ಸಕ್ಕರೆ ಪ್ರಮಾಣ ಎಷ್ಟು ಎಂಬುದೇ ಎಫ್​ಆರ್​ಪಿ. ಶೇ. 10ರಷ್ಟು ಎಫ್​ಆರ್​ಪಿ ಎಂದರೆ 1 ಕ್ವಿಂಟಲ್​ ಕಬ್ಬಿನಿಂದ 10 ಕೆಜಿ ಸಕ್ಕರೆ ತಯಾರಿಸಬಹುದು. ಈ ಯೋಜನೆಯಿಂದ ಮುಂದಿನ ಸೀಸನ್​​ನಲ್ಲಿ ಸುಮಾರು 1 ಲಕ್ಷ ಕೋಟಿ ರೂ. ರೈತರಿಗೆ ಹೆಚ್ಚುವರಿಯಾಗಿ ಸಿಗಲಿದೆ.

2020-21ನೇ ಸಾಲಿನಲ್ಲಿ 2,976 ಲಕ್ಷ ಟನ್​ (91,000 ಕೋಟಿ ರೂ ಮೌಲ್ಯ) ಕಬ್ಬು ವಿವಿಧ ಕಾರ್ಖಾನೆಗಲ್ಲಿ ನುರಿಸಲಾಗಿದ್ದು, ಮುಂದಿನ ವರ್ಷ 3,088 ಲಕ್ಷ ಟನ್​​ ನುರಿಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!