ಪ್ಲೇ ಗರ್ಲ್ ಆಲ್ಬಂ ಸಾಂಗ್ ಯೂಟ್ಯೂಬ್ ಲ್ಲಿ ಸದ್ದು ಮಾಡುತ್ತಿದೆ


  • ಬೆಂಗಳೂರು : ಎಂ.ಕೆ.ಆಡಿಯೋ ಬೆಂಗಳೂರ ಅವರು ಯೂಟ್ಯೂಬ್ ಚಾನೆಲ್ ಗಾಗಿ ಉಮೇಶ್.ಕೆ.ಎನ್, ಹಾಗೂ ಸಿರಿ ಅಭಿನಯದ ‘ಪ್ಲೇ ಗರ್ಲ್’ ಆಲ್ಬಂ ಸಾಂಗ್ ಕನ್ನಡ ಮತ್ತು ತೆಲಗು ಆವೃತ್ತಿಯಲ್ಲಿ ಬಿಡುಗಡೆ ಆಗಿದ್ದು ಇದೀಗ ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿವೆ.
    ಕಳೆದ ಏಳೆಂಟು ವರ್ಷಗಳಿಂದ ಕಿರುಚಿತ್ರ ಹಾಗೂ ಸಿನಿಮಾಗಳಿಗೆ ವಿಭಿನ್ನ ಪ್ರಚಾರ ನೀಡುತ್ತಿದ್ದ ಯುವಿ ಡಿಜಿಟಲ್ ಪ್ರಮೋಷನ್ ಸಂಸ್ಥಾಪಕ ಹಾಗೂ ಮಲ್ಟಿ ಟ್ಯಾಲೆಂಟ್ ಆಗಿರುವ ಬೆಂಗಳೂರಿನ ಉಮೇಶ್ ಕೆ.ಎನ್. ಈ ಆಲ್ಬಂಸಾಂಗ್ ನಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಮೊದಲ ಪ್ರಯತ್ನವೇ ಇದಾಗಿದ್ದು ಆಫೀಶಿಯಲ್ ಮ್ಯೂಜಿಕ್ ವಿಡಿಯೋ ಯೂಟ್ಯೂಬ್ ಚಾನೆಲ್ ದಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
    ಸತತ ಒಂದು ವಾರಗಳ ಕಾಲ ಮೈಸೂರ ಸುತ್ತಮುತ್ತ ಚಿತ್ರೀಕರಣ ನಡೆಸಲಾದ ಈ ಆಲ್ಬಂ ಸಾಂಗ್ ನಲ್ಲಿ ಹೊಸ ಕಲಾವಿದರು ಅತಿ ಕಡಿಮೆ ವೆಚ್ಚದಲ್ಲಿ ಅದ್ದೂರಿ ಗೀತೆ ನಿರ್ಮಿಸುವ ಪ್ರಯತ್ನ ಮಾಡಿದ್ದಾರೆ.
    ನಾನಿಕೃಷ್ಣ, ಶಿವು, ಸುರೇಶ್ ಮನೋಜ್ಞವಾಗಿ ಅಭಿನಯಿಸಿದ್ದು ಯುವ ಮನಸ್ಸನ್ನು ಸೆಳೆಯುತ್ತಿದ್ದಾರೆ . ತಂತ್ರಜ್ಞಾನ ಬಳಗದಲ್ಲಿ -ಸಾಹಿತ್ಯ, ಸಂಗೀತ, ಹಿನ್ನೆಲೆಗಾಯನ ಮಂಜುಕವಿ, ಸಂಕಲನ ನಾನಿಕೃಷ್ಣ, ಎಸ್.ಜೆ.ಸಂಜಯ್, ವಿಎಫ್ ಎಕ್ಸ್ ನವೀನ್ ಮನೋಸಂಕಲ್ಪ, ವಾದ್ಯ ಸಂಯೋಜನೆ ವೈಶಾಕ್ ಶಶಿಧರನ್, ಮಿಕ್ಸಿಂಗ್ ಮತ್ತು ಮಾಸ್ಟರಿಂಗ್ ನವೀನ್ ಕುಮಾರ್, ಬಿ.ಆರ್, ಡಿಓಪಿ-ಎಸ್.ಜೆ.ಸಂಜಯ್, ಅರುಣ ,ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ ,ಡಾ.ವೀರೇಶ್ ಹಂಡಗಿ, ಪ್ರಚಾರಕಲೆ ವಿಶ್ವಪ್ರಕಾಶ ಮಲಗೊಂಡ ಮಾಡಿದ್ದು ಗೆಳೆಯರೆಲ್ಲರ ಸಹಕಾರದಲ್ಲಿ ಈ ವೀಡಿಯೋ ಆಲ್ಬಂಸಾಂಗ್ ಸಿನಿಮಾದ ಹಾಡಿಗೇನೂ ಕಡಿಮೆ ಇಲ್ಲದಂತೆ ದೃಶ್ಯವನ್ನು ಕಣ್ಣಿಗೆ ಕಟ್ಟಿಕೊಡುತ್ತಿದೆ.
    ನಮ್ಮ ತಂಡ ಬಹಳಷ್ಟು ಕಷ್ಟಪಟ್ಟು ಈ ಹಾಡಿನ ಚಿತ್ರೀಕರಣ ಮಾಡಿದ್ದು ಎಲ್ಲ ಪ್ರೇಕ್ಷಕ ಆಭಿಮಾನಿಗಳು ನಮಗೆ ಬೆಂಬಲಿಸುತ್ತಿದ್ದು ಫೋನ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಮಾಧ್ಯಮ ವರ್ಗದವರೂ ಪ್ರೋತ್ಸಾಹ ನೀಡುತ್ತಿದ್ದು ಇನ್ನೂ ಹೆಚ್ಚಿನ ಉತ್ಸಾಹ ನೀಡಿದೆ. ನಮ್ಮಂತ ಯುವ ಹೊಸ ಪ್ರತಿಭೆಗಳು ಬೆಳೆಯಲು ಪ್ರೋತ್ಸಾಹ ನೀಡಿದ ಎಲ್ಲ ಪತ್ರಿಕೆ, ವೆಬ್ ನ್ಯೂಸ್ ನ , ಸಂಪಾದಕರು, ಪತ್ರಿಕಾ ಬಳಗಕ್ಕೆ ಮತ್ತು ಸ್ಥಳೀಯ ಟಿವಿ ಚಾನೆಲ್ ಗಳವರಿಗೆ ನಮ್ಮ ತಂಡ ಕೃತಜ್ಞರಾಗಿದ್ದೇವೆ. ನಮ್ಮ ಮೊದಲ ಪ್ರಯತ್ನಕ್ಕೆ ಸಿಕ್ಕ ಈ ಯಶಸ್ಸು ನಮ್ಮ ತಂಡಕ್ಕೆ ಹೊಸ ಹೆಜ್ಜೆ ಇಡಲು ಪ್ರೇರಣೆಯಾಗಿದೆ ಎಂದು ನಟ ಉಮೇಶ್ ತಿಳಿಸಿದ್ದಾರೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!