ಸೆಪ್ಟೆಂಬರ್ 25 ರಂದು ಭಾರತ ಬಂದ್ ಗೆ ಕರೆ

ಬೆಂಗಳೂರು : ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಅಖಿಲ‌ ಭಾರತ ಕಿಸಾನ್ ಸಮಿತಿ ಆಶ್ರಯದಲ್ಲಿ ಭಾರತ್‌ ಬಂದ್‌ ಗೆ ಕರೆ ನೀಡಲಾಗಿದೆ. ಸೆಪ್ಟೆಂಬರ್ 25ರಂದು ಭಾರತ್‌ ಬಂದ್‌ ಮಾಡುವಂತೆ ಅಖಿಲ‌ ಭಾರತ ಕಿಸಾನ್ ಸಮಿತಿ ಕರೆ ನೀಡಿದೆ.

ಈ ಕುರಿತು ಆಲ್ ಇಂಡಿಯಾ ಕಿಸಾನ್ ಸಂಘರ್ಷ ಸಮಿತಿಯ ಮುಖ್ಯಸ್ಥ ಯೋಗೇಂದ್ರ ಯಾದವ್ ಹೇಳಿದ್ದಾರೆ. ಸೆಪ್ಟೆಂಬರ್ 25ರಂದು ದೇಶವ್ಯಾಪಿ ಬಂದ್ ಗೆ ಕರೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಬಂದ್ ಆಚರಿಸುವ ಕುರಿತು ನಾವು ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ರೈತ ಸಂಘದ ಮುಖಂಡ ಕುರುಬೂರು ಶಾಂತಕುಮಾರ್ ಮಾಹಿತಿ ನೀಡಿದ್ದಾರೆ.

ಕರ್ನಾಟಕ ಬಂದ್ಗೆ ಕಾರ್ಮಿಕ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ಮುಂಬೈ ಕರ್ನಾಟಕ ಸಂಘಟನೆ ಮತ್ತು ಬೆಂಗಳೂರು ಮೂಲದ ಸಂಘಟನೆಗಳ ಬೆಂಬಲ ಸಿಗಬಹುದು ಎನ್ನಲಾಗಿದೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!