ರೈಡರ್ ಸಿನಿಮಾದ ನಿಖಿಲ್ ಕುಮಾರಸ್ವಾಮಿ ಪಾತ್ರದ ಬಗ್ಗೆ ಸಿಕ್ತು ಅಪ್ಡೇಟ್

ಸಿನಿಮಾ ನಟ ನಿಖಿಲ್ ಹಾಗೂ ಯುವ ರಾಜಕಾರಣಿ ಕುಮಾರಸ್ವಾಮಿ ರೈಡರ್ ಸಿನಿಮಾದ ಶೂಟಿಂಗ್ ಭರದಿಂದ ಸಾಗಿದೆ. ತೆಲುಗಿನ ನಿರ್ದೇಶಕ ವಿಜಯ್ ಕುಮಾರ್ ನಿರ್ದೇಶನದ ಮೊದಲ ಕನ್ನಡ ಚಿತ್ರ ಇದಾಗಿದ್ದು, ಈ ಚಿತ್ರದಲ್ಲಿ ನಿಖಿಲ್ ಇದೇ ಮೊದಲ ಬಾರಿಗೆ ಕ್ರೀಡಾಪಟು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.

ಫ್ಯಾಮಿಲಿ ಆಡಿಯನ್ಸ್ ಮತ್ತು ಯುವ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ರೈಡರ್ ಚಿತ್ರ ಸಿದ್ಧವಾಗುತ್ತಿದ್ದು, ಈ ಸಿನಿಮಾದಲ್ಲಿ ನಿಖಿಲ್ ಕುಮಾರಸ್ವಾಮಿ ಬಾಸ್ಕೆಟ್ ಬಾಲ್ ಪ್ಲೇಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಯಾವುದೇ ರಾಜಕೀಯ ಅಂಶವನ್ನು ಸೇರಿಸದೇ ಮನೋರಂಜನಾತ್ಮಕವಾಗಿ ಹೆಣೆದಿದ್ದಾರಂತೆ.

ಸಿನಿಮಾದ ಬಗ್ಗೆ ವಿವರಣೆ ನೀಡಿರುವ ನಿರ್ದೇಶಕ ವಿಜಯ್ ಕುಮಾರ್, ರೈಡರ್ ಕ್ರೀಡೆಯನ್ನು ಆಧರಿಸಿದ ಒಂದು ಮನೋರಂಜನಾತ್ಮಕ ಸಿನಿಮಾ. ನಿಖಿಲ್ ಕುಮಾರ್ ಸ್ವಾಮಿ ಆಕ್ಷ್ಯನ್ ಹೀರೋ ರೀತಿಯ ಲುಕ್ ಹೊಂದಿದ್ದಾರೆ. ಅವರು ತುಂಬ ಎಕ್ಸಪ್ರೆಸ್ಸಿವ್ ನಟ. ಈ ಸಿನಿಮಾದಲ್ಲಿ ಎಲ್ಲ ರೀತಿಯ ರಸಗಳನ್ನು ತೆರೆಗೆ ತರುವ ಪ್ರಯತ್ನ ಮಾಡಿದ್ದೇವೆ. ಉದಾಹರಣೆಗೆ ಕಾಮಿಡಿ ಭಾವನಾತ್ಮಕತೆಯನ್ನು ಆಕ್ಷ್ಯನ್ ಡ್ಯಾನ್ಸ್ ಹೀಗೆ ಎಲ್ಲವನ್ನು ತೆರೆಗೆ ತರಲಾಗಿದೆ. ನಿಖಿಲ್ ಕುಮಾರಸ್ವಾಮಿ ಫರ್ಪೆಕ್ಟ್ ನಟ ಎಂದು ವಿಜಯ್ ಕುಮಾರ್ ಹೇಳಿದ್ದಾರೆ.

ಬಾಸ್ಕೆಟ್ ಬಾಲ್ ಆಟಗಾರನಾದ ನಾಯಕ ನಿಖಿಲ್ ಕುಮಾರಸ್ವಾಮಿ ಕಾಲೇಜು ಮುಗಿದ ಮೇಲೆ ಏನು ಮಾಡುತ್ತಾನೆ ಎಂಬ ಕತೆಯನ್ನು ಸಿನಿಮಾ ಹೊಂದಿದೆ. ಲೇಹ್ ಲಡಾಖ್ , ಶಿರಸಿ,ಕಾಶ್ಮೀರ ಸೇರಿದಂತೆ ಹಲವೆಡೆ ಸಿನಿಮಾ ಶೂಟಿಂಗ್ ಮಾಡಲಾಗಿದೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರೋ ಸಿನಿಮಾದ ಟ್ರೇಲರ್ ಕೂಡ ರಿಲೀಸ್ ಆಗಲಿದೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!