ಹಾಡಹಗಲೇ ಯುವತಿಯ ಕೊಲೆ : ಬೆಚ್ಚಿಬಿದ್ದ ಜನ

ಉಡುಪಿ : ಯುವತಿಯ ಸ್ಕೂಟಿಯನ್ನು ತಡೆದು ನಿಲ್ಲಿಸಿದ ಯುವಕ ಆಕೆಯ ಕುತ್ತಿಗೆಗೆ ಚಾಕು ಇರಿದಿದ್ದಾನೆ. ಹಾಡಹಗಲೇ ಯುವತಿಗೆ ಯುವಕನೊಬ್ಬ ಚಾಕು ಇರಿದ ಘಟನೆ ಉಡುಪಿಯ ಸಂತೆಕಟ್ಟೆ ಬಳಿ ನಡೆದಿದೆ.

ಸೌಮ್ಯಶ್ರೀ ಎಂಬುವಳು ಇರಿತಕ್ಕೊಳಗಾದ ಯುವತಿಯಾಗಿದ್ದಾಳೆ. ಮೆಡಿಕಲ್​ನಲ್ಲಿ ಕೆಲಸ ಮಾಡುತ್ತಿದ್ದ ಯುವಕ, ಯುವತಿಯು ಕುಸಿದು ಬೀಳುತ್ತಿದ್ದಂತೆ ತನಗೆ ತಾನೇ ಚಾಕು ಇರಿದುಕೊಂಡಿದ್ದಾನೆ. ವಾರದ ಹಿಂದೆ ಯುವತಿಗೆ ಬೇರೆ ಯುವಕನೊಂದಿಗೆ ನಿಶ್ಚಿತಾರ್ಥ ಆಗಿತ್ತು ಎನ್ನಲಾಗಿದೆ.ಯುವಕ ಹಾಗೂ ಯುವತಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇಬ್ಬರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇರಿತಕ್ಕೆ ಕಾರಣ ಏನು ಅನ್ನೋದರ ಕುರಿತಾಗಿ ತನಿಖೆ ಮುಂದುವರಿದಿದೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!