ಅನುಗ್ರಹ ಯೋಜನೆಯಡಿ ತಾಲ್ಲೂಕಿನ ರೈತರಿಗೆ 26 ಲಕ್ಷ ರೂ. ಹಣ ಬಿಡುಗಡೆ


ಶಿರಾ :‌ ಅಕಾಲಿಕವಾಗಿ ಮೃತಪಟ್ಟ ಕುರಿ ಮತ್ತು ಮೇಕೆಗಳಿಗೆ ಅನುಗ್ರಹ ಯೋಜನೆಯಡಿ ಶಿರಾ ತಾಲ್ಲೂಕಿನ 600 ಜನ ಕುರಿಗಾಹಿ ಫಲಾನುಭವಿಗಳಿಗೆ ಸುಮಾರು 26 ರೂ. ಲಕ್ಷ ಮೊತ್ತ ಪರಿಹಾರ ಧನ ಬಿಡುಗಡೆಯಾಗಿದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಕುರಿ ಮತ್ತು ಮೇಕೆಗಳು ಅಕಾಲಿಕವಾಗಿ ಮೃತಪಟ್ಟರೆ ಪ್ರತಿ ಕುರಿ ಮತ್ತು ಮೇಕೆಗೆ ಅನುಗ್ರಹ ಯೋಜನೆಯಡಿ 5000 ರೂ.ಗಳನ್ನು ಪರಿಹಾರವಾಗಿ ನೀಡಲಾಗುತ್ತಿತ್ತು. ಈ ಅನುಗ್ರಹ ಯೋಜನೆ ತಾತ್ಕಾಲಿಕವಾಗಿ ಸ್ಥಗಿತವಾಗಿತ್ತು. ಈ ಬಗ್ಗೆ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹಾಗೂ ನಾನು ಅಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದೆವು ನಮ್ಮ ಮನವಿಯನ್ನು ಪುರಸ್ಕರಿಸಿದ ಯಡಿಯೂರಪ್ಪ ಅವರು ಬಜೆಟ್ ಅಧೀವೇಶನದಲ್ಲಿ ಅನುಮೋದನೆ ನೀಡಿ ಅನುಗ್ರಹ ಯೋಜನೆಯನ್ನು ಮುಂದುವರೆಸಿ ರೈತರಿಗೆ ಅನುಕೂಲ ಮಾಡಿದ್ದಾರೆ. ಈ ಅನುಗ್ರಹ ಯೋಜನೆ ಮುಂದುವರೆಯಲು ಸಹಕರಿಸಿ ರೈತರಿಗೆ ಪರಿಹಾರ ಧನ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ, ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರಿಗೆ ಹಾಗೂ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದ ಅಧ್ಯಕ್ಷ ಶರಣು ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಸದ್ಯ 2019-20 ನೇ ಸಾಲಿನಲ್ಲಿ 26 ಲಕ್ಷ ರೂ. ಅನುದಾನವನ್ನು ಕಳೆದ ಶನಿವಾರ ಈಗಾಗಲೇ ರೈತರಿಗೆ ಆನ್‍ಲೈನ್ ಮೂಲಕ ಅವರ ಖಾತೆಗೆ ಜಮಾ ಮಾಡಲಾಗಿದೆ. ಇನ್ನೆರಡು ತಿಂಗಳಲ್ಲಿ 2020-21 ಸಾಲಿನ ಪರಿಹಾರ ಧನವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!