ಸೆ. 6ರಿಂದ 6-8ನೇ ತರಗತಿಗಳು ಆರಂಭ: ವೇಳಾಪಟ್ಟಿ, ಮಾರ್ಗಸೂಚಿ

ಬೆಂಗಳೂರು: ರಾಜ್ಯದಲ್ಲಿ 6-8ನೇ ತರಗತಿಯನ್ನ ಸೆಪ್ಟೆಂಬರ್ 6 ರಿಂದ ಪುನಾರಂಭಿಸಲು ಸರ್ಕಾರ ತೀರ್ಮಾನಿಸಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಆ.31 ಅಧಿಕೃತವಾಗಿ ಸುತ್ತೋಲೆ ಹೊರಡಿಸಿದೆ.

ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಶೇಕಡಾ 20 ಗಿಂ ಕಡಿಮೆ ಇರುವ ತಾಲೂಕು, ವಲಯಗಳಲ್ಲಿ (ಕೇರಳ ರಾಜ್ಯದೊಡನೆ ಗಡಿ ಹಂಚಿಕೊಂಡಿರುವ ತಾಲೂಕುಗಳನ್ನ ಹೊರತುಪಡಿಸಿ) 9 ಮತ್ತು 10ನೇ ತರಗತಿಗಳ ಜೊತೆಗೆ 6 ರಿಂದ 8ನೇ ತರಗತಿಗಳನ್ನ ಪೂರ್ಣ ಪ್ರಮಾಣದಲ್ಲಿ ತರಗತಿ ಆರಂಭಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.

ಮಾರ್ಗಸೂಚಿ

  • ಪಾಸಿಟಿವಿಟಿ ಶೇ.2 ಕ್ಕಿಂತ ಕಡಿಮೆ ಇರುವ ತಾಲೂಕು ವಲಯಗಳಲ್ಲಿ ಶಾಲೆ ಆರಂಭ* ಈಗಾಗಲೇ ಬಿಡುಗಡೆ ಮಾಡಲಾಗಿರುವ SOP ಪಾಲಿಸುವುದು* ಮಕ್ಕಳು ಶಾಲೆಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ* ಅನುಮತಿ ಪತ್ರದಲ್ಲಿ ವಿದ್ಯಾರ್ಥಿಯ ಕೋವಿಡ್ ಸೋಂಕು ಇಲ್ಲದೆ ಇರೋದನ್ನ ಪೋಷಕರು ಧೃಢಿಕರಿಸಬೇಕು* ಕುಡಿಯುವ ‌ನೀರು ಹಾಗೂ ಆಹಾರ ಮನೆಯಿಂದಲೇ ತರಬೇಕು* ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು* ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ* ಆನ್ ಲೈನ್ ತರಗತಿಗೂ ಅವಕಾಶ* ಕೇರಳ ಗಡಿಭಾಗಕ್ಕೆ ಹೊಂದಿಕೊಂಡಿರುವ  ತಾಲ್ಲೂಕು ಹಾಗೂ ವಲಯ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ಶಾಲೆ ಪ್ರಾರಂಭ ಮಾಡಬೇಕು
  • 6 ರಿಂದ 8 ನೇ ತರಗತಿ ನಿರ್ವಹಣೆ ವೇಳಾಪಟ್ಟಿ* ಪಾಳಿ ಪದ್ಧತಿಯಲ್ಲಿ ಮಕ್ಕಳಿಗೆ ‌ಪಾಠ* ಸೋಮವಾರ ದಿಂದ ಶುಕ್ರವಾರದವರೆಗೆ ಮಾತ್ರ ತರಗತಿ ನಡೆಸಬೇಕು8ನೇ ತರಗತಿ ಮಕ್ಕಳಿಗೆ ಮಧ್ಯಾಹ್ನ ತರಗತಿ ನಡೆಸುವುದು, ಮಧ್ಯಾಹ್ನ 2 ಗಂಟೆಯಿಂದ  4:30 ರ ತರಗತಿ ನಡೆಸುವುದು ಬೆಳಿಗ್ಗೆ 10: 30 ರಿಂದ ಮಧ್ಯಾಹ್ನ 1:30 ರವರೆಗೆ* 15 ರಿಂದ 20 ಮಕ್ಕಳ ತಂಡ ರಚಿಸಿ ಮಕ್ಕಳಿಗೆ ಪಾಠ ಮಾಡಬೇಕು

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!