ಶಾಲೆ ಆರಂಭಿಸಲು ಸರ್ಕಾರ ಆತುರದ ನಿರ್ಧಾರ ಮಾಡಿದಂತಿದೆ : ಎಚ್.ಕೆ.ಕುಮಾರಸ್ವಾಮಿ

ಬೆಂಗಳೂರು: ಇದೊಂದು ತಿಂಗಳು ಪರಿಸ್ಥಿತಿಯನ್ನು ಅವಲೋಕಿಸಿ ಅಕ್ಟೋಬರ್‍ನಲ್ಲಿ ಶಾಲೆ ಆರಂಭಿಸಬಹುದಿತ್ತು. ಆದರೆ ಸರ್ಕಾರ ಶಾಲೆ ಆರಂಭಿಸಲು ತೀರ್ಮಾನಿಸಿರುವುದರಿಂದ ಯಾವ ರೀತಿ ಪರಿಣಾಮವಾಗಲಿದೆ ನೋಡಬೇಕು ಎಂದರು.

ರಾಜ್ಯ ಸರ್ಕಾರ 6 ರಿಂದ 8ನೆ ತರಗತಿವರೆಗೆ ಶಾಲೆ ಆರಂಭಿಸಲು ಆತುರದ ನಿರ್ಧಾರ ಮಾಡಿದಂತಿದೆ. ಇನ್ನು ಒಂದು ತಿಂಗಳು ಕಾದು ನೋಡಬಹುದಿತ್ತು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ತಿಳಿಸಿದರು. ಸೆಪ್ಟೆಂಬರ್ ತಿಂಗಳಿನಲ್ಲಿ ಮಕ್ಕಳ ಮೇಲೆ ಕೋವಿಡ್ ಪರಿಣಾಮ ಬೀರಲಿದೆ ಎಂಬ ತಜ್ಞರ ಅಭಿಪ್ರಾಯವನ್ನು ಸರ್ಕಾರ ಹೇಳುತ್ತದೆ. ಸೆ.6ರಿಂದ ಮತ್ತೆ ಶಾಲೆಯನ್ನು ಆರಂಭಿಸುವ ತೀರ್ಮಾನ ಕೈಗೊಂಡಿದೆ. ಸರ್ಕಾರದ ನಿಲುವಿನಲ್ಲಿ ಸ್ಪಷ್ಟತೆಯಾಗಲಿ, ಗಟ್ಟಿತನವಾಗಲಿ ಕಾಣುತ್ತಿಲ್ಲ ಎಂದು ಅವರು ಟೀಕಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೇವಲ ಪ್ರಚಾರಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಘೋಷಣೆ ಮಾಡಿವೆ. ಅವುಗಳನ್ನು ಅನುಷ್ಠಾನಕ್ಕೆ ತರುತ್ತಿಲ್ಲ. ಕಾರ್ಯಕ್ರಮಗಳ ಮೂಲಕ ಜನರ ಆಕರ್ಷಣೆ ಮಾಡುವುದಷ್ಟೇ ಆಗಿದೆ. ಘೋಷಿತ ಕಾರ್ಯಕ್ರಮಗಳಿಗೆ ಹಣಕಾಸಿನ ಲಭ್ಯತೆ, ತೆರಿಗೆ ಸಂಗ್ರಹ ಮೊದಲಾದವುಗಳ ಸಾಧ್ಯಾ ಸಾಧ್ಯತೆಯನ್ನು ಪರಿಗಣಿಸಿ ಕಾರ್ಯಕ್ರಮಗಳನ್ನು ಘೋಷಿಸಬೇಕಿತ್ತು.

ಎಂಎಸ್‍ಎಂಇಗೆ ಉತ್ತೇಜನ ನೀಡುವುದು ಏನಾಯಿತು?

ಕೋವಿಡ್‍ನಿಂದ ಮೃತಪಟ್ಟವರಿಗೆ 1 ಲಕ್ಷ ಪರಿಹಾರ ನೀಡುವುದು ಎಲ್ಲಿಗೆ ಬಂದಿದೆ ಎಂದು ಪ್ರಶ್ನಿಸಿದರು. ಯಾವುದೇ ಯೋಜನೆಗೆ ಸರ್ಕಾರ ಪೂರ್ಣ ಹಣ ಬಿಡುಗಡೆ ಮಾಡುತ್ತಿಲ್ಲ. ಹಲವು ಯೋಜನೆಗಳು ಇನ್ನು ಟೇಕ್‍ಆಫ್ ಆಗಿಲ್ಲ. ಯಾವುದೇ ಯೋಜನೆ ನಿರೀಕ್ಷಿತ ಗುರಿ ತಲುಪುತ್ತಿಲ್ಲ. ಜನರ ಕೈಗೆ ನಿಲುಕುತ್ತಲೂ ಇಲ್ಲ ಎಂದು ಟೀಕಾ ಪ್ರಹಾರ ನಡೆಸಿದರು. ಮಿತವ್ಯಯದ ಬೋಧನೆ ಮಾಡುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಚಾರಕ್ಕಾಗಿ ಸರ್ಕಾರಿ ಹಣದಲ್ಲಿ ನೀಡುವ ಜಾಹಿರಾತುಗಳನ್ನು ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!