ಅಪರಿಚಿತ ವಾಹನ ಡಿಕ್ಕಿ – ಗಂಡು ಚಿರತೆ ಸಾವು

ಗುಬ್ಬಿ : ತಾಲ್ಲೂಕಿನಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 206ರ ಪತ್ರೆಮತ್ತಿಘಟ್ಟ ಸೇತುವೆ ಮೇಲೆ ರಸ್ತೆ ದಾಟುತ್ತಿದ್ದ ಸುಮಾರು 5 ವರ್ಷ ಪ್ರಾಯದ ಗಂಡು ಚಿರತೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಚಿರತೆ ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಗುರುವಾರ ರಾತ್ರಿ ಸರಿ ಸುಮಾರು 11ರ ಸಮಯದಲ್ಲಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಗುಬ್ಬಿ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆಗಳು ರಾತ್ರಿ ಸಮಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ಪ್ರಕರಣಗಳು ಕಂಡುಬರುತ್ತಿದ್ದು ಸಾರ್ವಜನಿಕರಲ್ಲಿ ಆತಂಕ ವ್ಯಕ್ತವಾಗುತ್ತಿತ್ತು.ವಾಹನ ಡಿಕ್ಕಿಗೆ ಸಾವನ್ನಪಿರುವ ಚಿರತೆ ಸಾವಿನ ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಅಂತಂಕ ಮನೆಮಾಡಿದೆ.ಇಂತಹ ಘಟನೆ ಆಗದ ಹಾಗೆ ಆರಣ್ಯ ಇಲಾಖೆ ಕ್ರಮ ಜರುಗಿಸಬಹುದಾಗಿತ್ತು‌.ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಚಿರತೆ ಸಾವನ್ನಪಿದೆ ಎಂದು ಹೇಳಲಾಗುತ್ತಿದೆ.ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಅರಣ್ಯ ಇಲಾಖೆ ಕ್ರಮ ಜರುಗಿಸಲಿ ಎಂದು ಪ್ರಜಾಮನ ವೆಬ್ ನ್ಯೂಸ್ ಆಗ್ರಹಿಸುತ್ತದೆ‌.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!