12 ವರ್ಷದ ಬಾಲಕಿ ಮೇಲೆ ಅತ್ಯಾಚಾರ


ಮಧುಗಿರಿ : ಟೀ ತರಲು ಹೋಗಿದ್ದ 12 ವರ್ಷದ ಬಾಲಕಿಯ ಮೇಲೆ 65 ವರ್ಷದ ಮುದುಕನೊಬ್ಬನು ಅತ್ಯಾಚಾರ ನಡೆಸಿರುವ ಪೈಶಾಚಿಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 
ತಾಲೂಕಿನ ಕಸಬಾ ವ್ಯಾಪ್ತಿಯ ಬಸವನಹಳ್ಳಿ ಗ್ರಾಮದ ಲಿಂಗಣ್ಣ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವ ವ್ಯಕ್ತಿ. ಆ. 23 ರಂದು ತಂದೆ ನಾಗರಾಜು ಮತ್ತು ತಾಯಿ ಚಿಕ್ಕಕಾವಲಮ್ಮ ಮಗಳೊಂದಿಗೆ ಅವರ ಹೊಲದಲ್ಲಿ ರಾಗಿ ಕೀಳಲು ಹೋಗಿದ್ದರು. ಸಂಜೆ ಮನೆಗೆ ಹೋಗಿ ಟೀ ಮಾಡಿಕೊಂಡು ಬಾ ಎಂದು ಮಗಳನ್ನು ಕಳುಹಿಸಿದಾಗ ತಡವಾಗಿ ಹೊಲಕ್ಕೆ ವಾಪಾಸ್ಸಾಗಿದ್ದಾಳೆ. ಆಗ ಇಷ್ಟು ತಡ ಏಕೆ ಎಂದು ಮಗಳನ್ನು ತಂದೆ ಕೇಳಿದಾಗ ಘಟನೆಯಿಂದ ಹೆದರಿದ ಬಾಲಕಿ ಏನೂ ಹೇಳದೇ ಸುಮ್ಮನಾಗಿದ್ದಾಳೆ. 3 ದಿನಗಳ ನಂತರ ನಾನು ಟೀ ಮಾಡಿಕೊಂಡು ಬರಲು ಮನೆಗೆ ಬಂದಿದ್ದಾಗ ಒಲೆಯ ಮೇಲೆ ಟೀ ಕಾಯಿಸಲು ಇಟ್ಟು ಮನೆಯ ಹೊರಗಡೆ ಲೋಟ ತೊಳೆದುಕೊಂಡು ಒಳಗೆ ಬಂದಾಗ ಹಿಂದಿನಿಂದ ಮನೆಯೊಳಗೆ ಬಂದ ಲಿಂಗಣ್ಣ ತಾತ ನನ್ನ ದೇಹದ ಮೇಲೆ ಅಸಭ್ಯವಾಗಿ ವರ್ತಿಸಿ, ದೈಹಿಕ ಹಿಂಸೆ ನೀಡಿ ಅತ್ಯಾಚಾರ ಮಾಡಿದ್ದು, ಇದನ್ನು ನಿಮ್ಮ ತಾಯಿಗಾಗಲಿ, ಅಜ್ಜಿಗಾಗಲಿ ಹೇಳಿದರೆ ಕಪಾಳಕ್ಕೆ ಹೊಡೆಯುತ್ತೇನೆ ಎಂದು ಹೆದರಿಸಿದ್ದು, ಹಾಗಾಗಿ ನಾನು ಯಾರಿಗೂ ಹೇಳಲಿಲ್ಲ ಎಂದು ತನ್ನ ತಾಯಿಯ ಬಳಿ ಹೇಳಿದ್ದಾಳೆ ಎಂದು ಆರೋಪಿಸಿ ನನ್ನ ಮಗಳ ಮೇಲೆ ಅತ್ಯಾಚಾರ ಮಾಡಿರುವ ಲಿಂಗಣ್ಣನ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಾಲಕಿಯ ತಂದೆ ಮಧುಗಿರಿ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!