ನಾಗರೀಕ ಸಮಾನತೆ ಕಾನೂನು ಜಾರಿಗೆ ತನ್ನಿ: ಸೊಗಡು ಶಿವಣ್ಣ ಮನವಿ

ತುಮಕೂರು: ನಮ್ಮ ದೇಶವು ಸಂಸ್ಕೃತಿ ಸಂಸ್ಕಾರಕ್ಕೆ ಪ್ರತೀಕವಾಗಿದ್ದು, ಇಂತಹ ದೇಶದಲ್ಲಿ ಬುರ್ಕಾ ಸಂಸ್ಕೃತಿ ತೆಗೆದು ಹಾಕಿ ನಾಗರೀಕ ಸಮಾನತೆ ಕಾನೂನು ಜಾರಿಗೆ ತರುವಂತೆ ಪ್ರದಾನಿ ನರೇಂದ್ರ ಮೋದಿಯವರಿಗೆ ಮಾಜಿ ಸಚಿವ ಸೊಗಡು ಶಿವಣ್ಣ ಮನವಿ ಮಾಡಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಫ್ಘಾನಿಸ್ತಾನ್‌ನಲ್ಲಿ ತಾಲೀಬಾನ್ ಗಳ ಅಟ್ಟಹಾಸ ಮುಂದುವರೆದಿದ್ದು, ತಾಲೀಬಾನ್‌ಗಳ ವಿರುದ್ಧ ಜಗತ್ತಿನ ರಾಷ್ಟ್ರಗಳು ಒಂದಾಗಿ ಖಂಡಿಸಬೇಕಿತ್ತು, ಆದರೆ ಯಾವ ರಾಷ್ಟ್ರವು ಈ ಬಗ್ಗೆ ಚಕಾರವೆತ್ತುತ್ತಿಲ್ಲ ಎಂದರು.

ಒಂದು ಕಡೆ ಚೀನಾ ಮತ್ತು ಪಾಕಿಸ್ತಾನನ ರಾಷ್ಟ್ರಗಳು ತಾಲೀಬಾನ್‌ಗಳಿಗೆ ಬೆಂಬಲಿಸುತ್ತಿದ್ದು, ಅವರನ್ನು ಬೆಂಬಲಿಸುವ ರಾಷ್ಟ್ರಗಳೂ ಕೂಡ ತಾಲಿಬಾನ್‌ಗಳೇ ಆಗಿದ್ದಾರೆ. ಆದ್ದರಿಂದ ನಮ್ಮ ದೇಶ ನಮ್ಮದೇ ಆದ ಸಂಸ್ಕೃತಿ ಸಂಸ್ಕಾರವನ್ನು ಹೊಂದಿದೆ. ಇಂತಹ ರಾಷ್ಟ್ರದಲ್ಲಿ ಬುರ್ಕಾ ಸಂಸ್ಕೃತಿ ಯಾಕೆ ಬೇಕು? ಎಂದು ಪ್ರಶ್ನಿಸಿರುವ ಅವರು, ಮೊದಲು ಬುರ್ಕಾ ಸಂಸ್ಕೃತಿ ತೆಗೆಯಬೇಕು, ಇದಕ್ಕಾಗಿ ನಾಗರೀಕ ಸಮಾನತೆ ಕಾನೂನು ಜಾರಿಗೆ ತರಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಜಾವೆದ್ ಅಖ್ತರ್ ಆರ್‌ಎಸ್‌ಎಸ್ ಬಗ್ಗೆ ಮಾತನಾಡಿರುವುದು ಖಂಡನೀಯ, ಅಖ್ತರ್ ಸಿಮಿ ತಾಲಿಬಾನ್ ಇದ್ಧಂತೆ, ಇಂತಹವರನ್ನು ಮೊದಲು ಬಂಧಿಸಬೇಕು ಎಂದರು.

ಪಾಕಿಸ್ತಾನದ ಜೊತೆ ವ್ಯವಹಾರ ನಿಲ್ಲಲಿ:

ಭಾರತ ದೇಶವು ಪಾಕಿಸ್ತಾನ ಜೊತೆಗಿನ ಸಂಬಂಧವನ್ನು ಮೊದಲು ಕಿತ್ತು ಹಾಕಿ ಪಾಕಿಸ್ತಾನದ ಜೊತೆ ನಡೆಸುತ್ತಿರುವ ವ್ಯವಹಾರವನ್ನು ನಿಲ್ಲಿಸಬೇಕು, ತಾಲಿಬಾನ್‌ಗಳಿಗೆ ಬೆಂಬಲಿಸುತ್ತಿರುವ ರಾಷ್ಟ್ರಗಳೊಂದಿಗೆ ಯಾವುದೇ ವ್ಯವಹಾರ ನಡೆಸಬಾರದು ಎಂದು ಮನವಿ ಮಾಡಿದರು.

ತುಮಕೂರಿನಲ್ಲೂ ತಾಲಿಬಾನ್‌ಗಳಿದ್ದಾರೆ:

ಕೇವಲ ಅಫ್ಘಾನಿಸ್ತಾನದಲ್ಲಿ ಮಾತ್ರ ತಾಲೀಬಾನ್‌ಗಳಿಲ್ಲ, ನಮ್ಮ ದೇಶದಲ್ಲೂ ತಾಲೀಬಾನ್‌ಗಳಿದ್ದಾರೆ. ಅವರನ್ನು ಮೊದಲು ಮಟ್ಟಹಾಕಬೇಕು, ತುಮಕೂರಿನಿಂದ ಹಿಡಿದು ಕಾಶ್ಮಿರ ಕನ್ಯಾಕುಮಾರಿವರೆಗೂ ತಾಲೀಬಾನ್‌ಗಳಿದ್ದಾರೆ ಎಂದು ಆರೋಪಿಸಿದರು.

ದೇಶದಲ್ಲಿ ಉಗ್ರರಿದ್ದರೂ ಕೂಡ ಆ ಉಗ್ರರನ್ನು ಒಬ್ಬನೇ ಒಬ್ಬ ಮುಸ್ಲೀಂ ಬಂಧುಗಳು ಹಿಡಿದುಕೊಟ್ಟಿರುವ ಉದಾಹರಣೆ ಇಲ್ಲ, ಇಲ್ಲಿರುವ ಸಿವಿಲ್ ತಾಲಿಬಾನ್‌ಗಳನ್ನು ಮಟ್ಟ ಹಾಕಬೇಕು, ಪಾಕಿಸ್ತಾನ ಮತ್ತು ತಾಲಿಬಾನ್‌ಗಳಿಗೆ ಬೆಂಬಲಿಸುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಹೇಳಿದರು.

ಮಸೀದಿಯಲ್ಲಿ ಮೈಕ್‌ಗಳನ್ನು ನಿಲ್ಲಿಸಲಿ:

ಮಸೀದಿಗಳಲ್ಲಿ ನಮಾಜ್ ಮಾಡುವ ವೇಳೆ ಮೈಕ್‌ಗಳಲ್ಲಿ ಜೋರಾಗಿ ಕೂಗುವ ಶಬ್ದದಿಂದ ಅನೇಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಮೈಕ್‌ಗಳನ್ನು ಬಳಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು, ಜೊತೆಗೆ ಡಿಜೆಯನ್ನೂ ನಿಲ್ಲಿಸಲಿ ಎಂದು ತಿಳಿಸಿದರು.

ಜಮೀರ್ ತಾಲಿಬಾನ್ ಇದ್ದಂತೆ:

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಘಟನೆಗಳನ್ನು ಗಮನಿಸಿದರೆ ಇದರ ಹಿಂದೆ ಪ್ರಭಾವಿಗಳ ಕೈವಾಡವಿದೆ ಎಂದ ಅವರು ಮಾಜಿ ಸಚಿವ ಜಮೀರ್ ಅಹಮ್ಮದ್ ಕೂಡ ಒಂದು ರೀತಿ ತಾಲಿಬಾನ್ ಇದ್ಧಂತೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ಜಯಸಿಂಹರಾವ್, ಕೆ.ಪಿ.ಮಹೇಶ್, ಕೆ.ಹರೀಶ್ ಹಾಜರಿದ್ದರು.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!