ಬೋನಿಗೆ ಬಿದ್ದ ಚಿರತೆ

ಚಿಕ್ಕನಾಯಕನಹಳ್ಳಿ: ಕಳೆದ ಸ್ವಲ್ಪ ತಿಂಗಳಿಂದ ರೈತರ ಕುರಿ ಮೇಕೆಗಳನ್ನು ತಿನ್ನುತ್ತಿದ್ದ ಚಿರತೆಯು ಬೋನಿಗೆ ಬಿದ್ದಿದ್ದು ರೈತರು ಸ್ವಲ್ಪ ಉಸಿರುಬಿಡುವಂತಾಗಿದೆ.

ತಾಲ್ಲೂಕಿನ ಮಲಗೊಂಡನಹಳ್ಳಿಬಳಿಯ ನಾಗೇನಹಳ್ಳಿ ಕೆರೆಯ ಪೊದೆಯೊಳಗೆ ಇದ್ದಕೊಂಡು ಮೇಕೆ ಕುರಿ ಮೇಯಿಸಲು ಹೋದಾಗ ಅವುಗಳನ್ನು ಹಿಡಿದು ತಿನ್ನುತ್ತಿದ್ದಂತಹ ಚಿರತೆಯ ಬಗ್ಗೆ ಕಳೆ ಆಗಸ್ಟ್ ಮಾಹೆಯ 23 ರಂದು ಪತ್ರಿಕೆಯಲ್ಲಿ ವರದಿ ಮಾಡಲಾಗಿತ್ತು ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಎಚ್ಚೇತ್ತುಕೊಂಡು ಚಿರತೆಯನ್ನು ಹಿಡಿಯಲು ಬೋನನ್ನು ಇಟ್ಟಿದ್ದು ಸೋಮವಾರ ರಾತ್ರಿ ಬೊನಿಗೆ ಒಂದು ಚಿರತೆ ಸೆರೆಯಾಗಿದೆ.

ರೈತರ ಪ್ರಕಾಶ್ ಮಾತನಾಡಿ ಕಳೆದ ಮೂರನಾಲ್ಕು ತಿಂಗಳಿಂದ ಸುಮಾರು 15ರಿಂದ 20ಕುರಿ ಮೇಕೆಗಳನ್ನು ತಿಂದಿರುವಂತಹ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆಗೆ ತಿಳಿಸಿದ್ದು ಅದರಂತೆ ಬೋನಿಗೆ ಇಂದು ಒಂದು ಚಿರತೆಯು ಬಿದ್ದಿದ್ದು ಇನ್ನು ಮೂರು ಚಿರತೆಗಳು ಇದ್ದು ಅವುಗಳನ್ನು ಹಿಡಿಯುವಂತೆ ತಿಳಿಸಿದರು.

ಸ್ಥಳಕ್ಕೆ ಬೇಟಿ ನೀಡಿದ ವಲಯ ಅರಣ್ಯಾಧಿಕಾರಿ ಸುನೀಲ್ ಮಾತನಾಡಿ ಸುಮಾರು ಐದಾರುವರ್ಷ ವಯಸ್ಸಿನ ಚಿರತೆಇದಾಗಿದ್ದು ಸೆರೆಸಿಕ್ಕಂತಹ ಚಿರತೆಯನ್ನು ಅರಣ್ಯಭಾಗಕ್ಕೆ ಬಿಡುವುದಾಗಿ ತಿಳಿಸಿದರು.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!